ನವದೆಹಲಿ: ಸಾರ್ವಜನಿಕ ಶೌಚಾಲಯದಿಂದ ಸಿಂಹವೊಂದು ಹೊರಬಂದು ಅಚ್ಚರಿ ಮೂಡಿಸಿದೆ. ಏನಿದು ಸಾರ್ವಜನಿಕ ಶೌಚಾಲಯವನ್ನ ಕಾಡಿನ ಪ್ರಾಣಿಗಳು ಬಳಸುತ್ತಾ ಎಂದು ಪ್ರಶ್ನಿಸುವ ಮೂಲಕ ನೀವು ಭಯಭೀತರಾಗಬಹುದು. ಏನಿದು ಸ್ಟೋರಿ ಅಂತೀರಾ..? ಹಾಗಿದ್ರೆ ಈ ಸುದ್ದಿ ಓದಿ.
Loo is not always safe & reliver for humans, sometime it can be used by others too…@susantananda3 @ParveenKaswan @PraveenIFShere @Saket_Badola pic.twitter.com/MNs9pwCycC
— WildLense® Eco Foundation ???????? (@WildLense_India) October 2, 2021
Advertisement
ಕಾಡಿನ ರಾಜ ಸಿಂಹ ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜಂಗಲ್ ಸಫಾರಿ ಸಮಯದಲ್ಲಿ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಅವುಗಳ ಸ್ಥಳಗಳಲ್ಲಿ ಇರುತ್ತೆ. ಆದರೆ ಇಲ್ಲಿ ಸಿಂಹ ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿದ್ದು, ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಟೇಕ್ ಕೇರ್ ಕಿಂಗ್’ ಎಂದ ಶಾರೂಖ್ ಅಭಿಮಾನಿಗಳು
Advertisement
Call of the Nature. https://t.co/bI5gqpF9Fs
— Pankaj Thapliyal (@PankajT04765688) October 2, 2021
Advertisement
ಕಾಡಿನಲ್ಲಿ ಸಫಾರಿಗೆ ಕಾರಿನಲ್ಲಿ ಹೋಗುತ್ತಿರುವಾಗ, ಸಾರ್ವಜನಿಕ ಶೌಚಾಲಯವನ್ನು ಸಮೀಪಿಸುತ್ತಿದಂತೆ, ಸಿಂಹವು ಶೌಚಾಲಯದ ಬಾಗಿಲಿನಿಂದ ಹೊರಬರುತ್ತಿದೆ. ಸಫಾರಿಗೆಂದು ಬಂದಿದ್ದ ಜನರು ದೃಶ್ಯ ನೋಡಿ ಆಶ್ಚರ್ಯಗೊಂಡಿದ್ದಾರೆ. ಈ ವೀಡಿಯೋವನ್ನು ಟ್ವಿಟರ್ ನಲ್ಲಿ ವೈಲ್ಡ್ ಲೆನ್ಸ್ ಇಕೋ ಫೌಂಡೇಶನ್ ಹಂಚಿಕೊಂಡಿದ್ದು, ಶೌಚಾಲಯ ಯಾವಾಗಲೂ ಮನುಷ್ಯರಿಗೆ ಸುರಕ್ಷಿತವಲ್ಲ. ಕೆಲವೊಮ್ಮೆ ಇದನ್ನು ಇತರರು ಕೂಡ ಬಳಸಬಹುದು ಎಂದು ಬರೆದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಚಿನ್ನದ ಪದಕ ಗೆದ್ದ ಜಮ್ಮು ಬಿಯರ್
Advertisement
Seriously
— Nisha rai (@nisharai_ggc) October 2, 2021
Coming out of gents toilet✔️
— Only NA ???? (@naveenagra71) October 2, 2021
ಈ ವೀಡಿಯೋ 18 ಲಕ್ಷಕ್ಕೂ ಹೆಚ್ಚು ಬಾರಿ ವ್ಯೂ ಆಗಿದ್ದು, ಇದನ್ನು ನೋಡಿದವರು ಅಚ್ಚರಿಯ ಜೊತೆ ಭಯಪಟ್ಟಿದ್ದಾರೆ. ಜಂಗಲ್ ಸಫಾರಿ ಸಮಯದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಸಾರ್ವಜನಿಕ ಶೌಚಾಲಯವನ್ನು ಬಳಸುವುದನ್ನು ಖಂಡಿತವಾಗಿಯೂ ತಡೆಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ಹಲವು ಜನರು ರೀ ಟ್ವೀಟ್ ಮಾಡಿದ್ದಾರೆ.