ಅಹಮದಾಬಾದ್: ಕಿಡಿಗೇಡಿಗಳು ಸಿಂಹವನ್ನು ಬೇಟೆಯಾಡಲೆಂದು ತಮ್ಮ ಜೀಪಿನಲ್ಲಿ ಬೆನ್ನಟ್ಟಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಗುಜರಾತ್ ಅರಣ್ಯ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವಿಡಿಯೋದಲ್ಲಿ ಕಿಡಿಗೇಡಿಗಳು ರಾತ್ರಿಯ ವೇಳೆಯಲ್ಲಿ ಸಿಂಹವೊಂದನ್ನು ತಮ್ಮ ವಾಹನದಲ್ಲಿ ಓಡಿಸುತ್ತಿರುವುದನ್ನು ಕಾಣಬಹುದು. ಇನ್ನು ಒಬ್ಬಾತ ವೇಗವಾಗಿ ಓಡುತ್ತಿರೋ ಸಿಂಹವನ್ನು ಶೂಟ್ ಮಾಡು ಅಂತಾ ಹೇಳುತ್ತಿದ್ದು, ಇನ್ನೊಬ್ಬ ಬೇಡ ಶೂಟ್ ಮಾಡಿದ್ರೆ ತೊಂದರೆ ಆಗುತ್ತೆ ಅಂತಾ ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಸುಮಾರು ದೂರ ರಸ್ತೆಯಲ್ಲೇ ಓಡಿದ ಸಿಂಹ ಬಳಿಕ ರಸ್ತೆಯ ಬದಿಯಿಂದಾಗಿ ಕಾಡಿನ ಓಡುವ ಮೂಲಕ ಅಪಾಯದಿಂದ ಪಾರಾಗಿದೆ.
Advertisement
ಈ ವಿಡಿಯೋವನ್ನು SAVE ASIATIC LION ಎಂಬ ಫೇಸ್ಬುಕ್ ಪೇಜ್ ನಲ್ಲಿ ಜೂನ್ 19ರಂದು ಅಪ್ಲೋಡ್ ಮಾಡಲಾಗಿದ್ದು, ಆದಷ್ಟು ಬೇಗ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಿಂಹವನ್ನು ಬೆನ್ನಟ್ಟಿದ್ದವರ ವಿರುದ್ಧ ಗುಜರಾತ್ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಇಂತಹ ವಿಡಿಯೋಗಳು ನಿಮ್ಮ ಕೈಗೆ ಸಿಕ್ಕದರೆ ದಯವಿಟ್ಟು ಅದನ್ನು ನಮಗೆ ಕಳುಹಿಸಿಕೊಡಿ. ಆ ವಿಡಿಯೋಗಳನ್ನು ನಾವು ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಂಬಂಧಪಟ್ಟ ಏಜೆನ್ಸಿಗಳಿಗೆ ರವಾನಿಸುವುದಾಗಿ ತಮ್ಮ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement