ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆರೋಪ ಸಿದ್ದರಾಮಯ್ಯ ಸರ್ಕಾರಕ್ಕೆ (Siddaramaiah Government) ಬಿಸಿತುಪ್ಪವಾಗಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಮಾತಿಗೆ ಇದೀಗ ಮಾಜಿ ಮಂತ್ರಿ ವಿನಯ್ ಕುಲಕರ್ಣಿ (Vinay Kulkarni) ದನಿಗೂಡಿಸಿದ್ದಾರೆ. ಶಾಮನೂರು ಹೇಳಿಕೆ ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದಿದ್ದಾರೆ.
ಶಾಮನೂರು ಮಾತನ್ನು ಸ್ವತಃ ಅವರ ಪುತ್ರ, ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ (SS Mallikarjun) ಒಪ್ಪಲು ತಯಾರಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿಲ್ಲ ಎಂದಿದ್ದಾರೆ. ಶಾಮನೂರು ಅವರಿಗೆ ಮಾಹಿತಿ ಕೊರತೆ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊಡವ ಲ್ಯಾಂಡ್ ಕೇಸ್ : ಕೇಂದ್ರ ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್
Advertisement
Advertisement
ಶಾಮನೂರು ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಂಪುಟ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅನಗತ್ಯ ಆರೋಪ ಮಾಡುವುದಿರಿಂದ ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಲೋಕಸಭೆ ಚುನಾವಣೆ (Lok Sabha Election) ಸಮೀಪದಲ್ಲಿ ಶಾಮನೂರು ಅವರಂತಹ ಹಿರಿಯರೇ ಹೀಗೆ ಹೇಳಿಕೆ ನೀಡಿದರೆ ಹೇಗೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಸಿಎಂ ಖುದ್ದಾಗಿ ಮಾತಾಡಿದರೆ ಉತ್ತಮ ಎಂದು ಕೆಲವರು ಸಲಹೆ ನೀಡಿದರು. ಆದರೆ ಹೈಕಮಾಂಡ್ (Congress High Command) ಮಾತನಾಡಿದೆ ಎನ್ನುತ್ತಾ ಸಿಎಂ ಸುಮ್ಮನಾದರು ಎಂದು ತಿಳಿದುಬಂದಿದೆ. ಈ ಮಧ್ಯ ಸಚಿವರ ಮನವೊಲಿಕೆಗೆ ಸಿಎಂ ಮುಂದಾಗಿದ್ದು, ಔತಣಕೂಟದ ನೆಪದಲ್ಲಿ ಸಭೆ ನಡೆಸಿದ್ದಾರೆ.
Advertisement
Web Stories