ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಪಕ್ಷಾಂತರ ಪರ್ವ ಕೂಡ ಪ್ರಾರಂಭವಾಗಿದೆ. ಅನ್ಯ ಪಕ್ಷಗಳ ಪ್ರಭಾವಿ ನಾಯಕರುಗಳನ್ನು ತಮ್ಮ ಪಕ್ಷದಡೆಗೆ ಸೆಳೆಯುವ ಸಾಕಷ್ಟು ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ.
Advertisement
ರಾಜ್ಯ ಕಾಂಗ್ರೆಸ್ ವಕ್ತಾರ, ಸುಪ್ರೀಂಕೋರ್ಟ್ ನ್ಯಾಯವಾದಿ ಸಂಕೇತ್ ಏಣಗಿ ಸೆಳೆಯಲು ಬಿಜೆಪಿ ಗಾಳ ಹಾಕಿರುವುದು ಬೆಳಕಿಗೆ ಬಂದಿದೆ. ರಾಜ್ಯ ಕಾಂಗ್ರೆಸ್ ಪಾಲಿಗೆ ನ್ಯಾಯಾಂಗ ಹೋರಾಟದಲ್ಲಿ ಶಕ್ತಿಯಾಗಿರುವ ಏಣಿಗೆ, ಹಲವು ಕಾನೂನು ಹೋರಾಟದಲ್ಲಿ ಕಾಂಗ್ರೆಸ್‍ಗೆ ಬಲ ತುಂಬಿದ್ದಾರೆ. ಹೇಗಾದರೂ ಮಾಡಿ ಸಂಕೇತ್ ಏಣಗಿಯವರನ್ನು ಸೆಳೆದು ಕಾಂಗ್ರೆಸ್‍ಗೆ ಮರ್ಮಾಘಾತ ನೀಡಲು ಬಿಜೆಪಿ ಪ್ಲಾನ್ ಮಾಡಿದೆ. ಲಿಂಗಾಯತ ಸಮುದಾಯದಲ್ಲೂ ಪ್ರಭಾವ ವರ್ಚಸ್ಸು ಹೊಂದಿರುವ ಏಣಗಿ ಅವರನ್ನು ಸೆಳೆಯಲು ಬಿಜೆಪಿಯ ಕೆಲ ಲಿಂಗಾಯತ ಮುಖಂಡ ಮೂಲಕ ಪ್ರಯತ್ನ ನಡೆದಿದೆ ಎನ್ನಲಾಗಿದೆ.
Advertisement
ಕಾಂಗ್ರೆಸ್‍ನಲ್ಲಿ ಅತೃಪ್ತಿ ಹಾಗೂ ಭಿನ್ನಮತ ಹೆಚ್ಚಾದ ಹಿನ್ನೆಲೆಯಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರುಗಳು ಪಕ್ಷ ತೊರೆಯುತ್ತಿದ್ದು, ಇತ್ತೀಚೆಗಷ್ಟೇ ಮಾಜಿ ಕೇಂದ್ರ ಮಂತ್ರಿ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರಿ ರಾಜ್ಯಸಭೆಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುವ ಮುನ್ನವೇ ಬಿಜೆಪಿಯು ಇನ್ನಿತರ ಕಾಂಗ್ರೆಸ್ಸಿನ ಪ್ರಭಾವಿ ವಕೀಲರುಗಳನ್ನು ತನ್ನ ಪಕ್ಷಕ್ಕೆ ಸೆಳೆಯಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಫೋಟೋಗ್ರಾಫರ್ ಇಲ್ಲ ಅಂತ ಮದುವೆ ಕ್ಯಾನ್ಸಲ್ ಮಾಡಿದ ವಧು
Advertisement
Advertisement
ರಾಜ್ಯದ ಚುನಾವಣೆಗಳಲ್ಲಿ ಪ್ರಮುಖ ಪಾತ್ರವಹಿಸುವ ಲಿಂಗಾಯತ ಮತದಾರರನ್ನು ಉಳಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚಿಸಿಕೊಳ್ಳಲು ಸಾಕಷ್ಟು ಲಿಂಗಾಯತ ಸಮಾಜದ ಪ್ರಭಾವಿ ಹಾಗೂ ನಿಷ್ಠಾವಂತ ನಾಯಕರುಗಳನ್ನು ತನ್ನ ಪಕ್ಷಕ್ಕೆ ಸೆಳೆಯಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸುಪ್ರೀಂಕೋರ್ಟ್ ಹಿರಿಯ ವಕೀಲ ಸಂಕೇತ ಏಣಗಿ ಸೆಳೆಯಲು ಬಿಜೆಪಿಯ ಹಿರಿಯ ಲಿಂಗಾಯತ ನಾಯಕರುಗಳು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಿ, ಆ ಮೂಲಕ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್
ಪಕ್ಷದ ರಾಜ್ಯ ನಾಯಕರುಗಳನ್ನು ಕಡೆಗಣಿಸಿ ಹೈಕಮಾಂಡ್ ರಾಜ್ಯದಿಂದ ರಾಜ್ಯಸಭೆಗೆ ಜೈರಾಮ್ ರಮೇಶ್ ಅವರನ್ನು ಕಣಕ್ಕಿಳಿಸಿರುವುದು ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಘಟಕದ ಪ್ರಮುಖ ನಾಯಕಿ ಕವಿತಾರೆಡ್ಡಿ ಕೂಡ ಇತ್ತೀಚೆಗೆ ಕಾಂಗ್ರೆಸ್ ಪಕ್ಷನಲ್ಲಿಯ ಮಹಿಳಾ ಮೀಸಲಾತಿ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ವಕೀಲ ಸಂಕೇತ ಏಣಗಿ ಕೂಡ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದರೆ ಅಚ್ಚರಿ ಪಡಬೇಕಿಲ್ಲ.