ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ. ನಮಗೆ ನಮ್ಮ ಮಾತೃಭಾಷೆ ಮೇಲೆ ಪ್ರೀತಿ ಇದೆ. ಅಷ್ಟೇ ಗೌರವ ಇತರ ಭಾಷೆ ಮೇಲೆಯೂ ಇದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಜೋರಾಗಿದ್ದು ಸುದೀಪ್ ಅವರ ರೀಲ್ಸ್ ಫುಲ್ ವೈರಲ್ ಆಗಿದೆ. ಇಂದು ಸುದೀಪ್ ಅವರು ನ್ಯೂಸ್ ಕೆಫೆಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಜೊತೆ ಸಿನಿಮಾ ಬಗ್ಗೆ ಮಾತನಾಡಿದರು.
Advertisement
Advertisement
ಸುದೀಪ್ ಹೇಳಿದ್ದೇನು?
ನಾವು ಕೊರಿಯಾ, ಥಯ್ ಸಿರೀಸ್, ಸಿನಿಮಾಗಳನ್ನು ಬೇರೆ-ಬೇರೆ ಭಾಷೆ ಸಿನಿಮಾಗಳನ್ನು ನೋಡುತ್ತಿದ್ದೇವೆ. ಅದು ನಮ್ಮ ಭಾರತ ಭಾಷೆಯಲ್ಲ. ಬೇರೆ ಭಾಷೆ ಜೊತೆಗೂ ನಮ್ಮ ಜನಗಳು ಬೇಗ ಕನೆಕ್ಟ್ ಆಗುತ್ತಾರೆ. ಬೇರೆ ದೇಶದವರು ಭಾರತದ ಪ್ರೇಕ್ಷಕರು ಸಿನಿಮಾ ನೋಡಬೇಕು ಎಂದು ಸಿನಿಮಾ ಮಾಡಿರಲ್ಲ. ಅವರು ಕಥೆ ಮೇಲೆ ಕೆಲಸ ಮಾಡುತ್ತಾರೆ. ಆ ಕೆಲಸವೇ ಬೇರೆ ದೇಶದ ಜನರನ್ನು ಆಕರ್ಷಣೆ ಮಾಡುತ್ತಿದೆ. ಇದನ್ನೂ ಓದಿ: ಸಿರಿಧಾನ್ಯದಲ್ಲಿ ಒಂದಾದ ‘ನವಣೆ ಉಪ್ಪಿಟ್ಟು’ ಮಾಡಿ
Advertisement
Advertisement
ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ. ನಮಗೆ ನಮ್ಮ ಮಾತೃಭಾಷೆ ಮೇಲೆ ಪ್ರೀತಿ ಇದೆ. ಅಷ್ಟೇ ಗೌರವ ಇತರ ಭಾಷೆ ಮೇಲೆಯೂ ಇದೆ. ಇಲ್ಲಿ ಯಾರಿಗೂ ಭಾಷೆ ಮೇಲೆ ಯಾವುದೇ ಅಸಮಾಧಾನವಿಲ್ಲ. ಜನರಲ್ಲಿ ಭಾಷೆಗಳ ಮೇಲೆ ಯಾವುದೇ ರೀತಿ ಅಶಾಂತಿಯಿಲ್ಲ.
ಪಿಎಂ ನರೇಂದ್ರ ಮೋದಿ ಅವರು ಭಾಷೆ ಬಗ್ಗೆ ಮಾತನಾಡಿದ್ದಕ್ಕೆ ನಿಮ್ಮ ಸ್ವಲ್ಪ ರಿಲೀಫ್ ಆಯ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಅವರ ಮಾತು ಕೇಳಿ ತುಂಬಾ ಖುಷಿಯಾಯಿತು.
ನಾನು ಅಜಯ್ ದೇವಗನ್ ಅವರು ಹೇಳಿರುವ ಮಾತುಗಳನ್ನು ಗೌರವಿಸುತ್ತೇನೆ. ನಾನು ಅವರನ್ನು ಒಂದು ಬಾರಿ ಭೇಟಿಯಾಗಿದ್ದೇನೆ. ಅವರು ಒಬ್ಬ ಸಭ್ಯ ವ್ಯಕ್ತಿಯಾಗಿದ್ದಾರೆ. ಆದರೆ ಯಾವುದೂ ಕಾರಣಕ್ಕೆ ಅವರಿಗೆ ನನ್ನ ಮಾತು ತಪ್ಪಾಗಿ ಅರ್ಥವಾಗಿತ್ತು. ಅದಕ್ಕೆ ನಾನು ಅವರಿಗೆ ಸ್ಪಷ್ಟನೆ ಕೊಡಬೇಕಾಗಿತ್ತು.
ಈ ವೇಳೆ ನಾನು ಕನ್ನಡದಲ್ಲಿ ಟ್ವೀಟ್ ಮಾಡಿದ್ರೆ ಏನು ಆಗುತ್ತಿತ್ತು ಎಂದು ಕೇಳಿದೆ. ಆದರೆ ಅದು ಯಾವುದೇ ದುರಂಹಕಾರದಿಂದ ಕೇಳಿಲ್ಲ. ಗೌರವದಿಂದಲ್ಲೇ ನಾನು ಕೇಳಿದ್ದೆ. ನಂತರ ನಮ್ಮಿಬ್ಬರಿಗೆ ಉತ್ತರ ಸಿಕ್ತು. ಆದರೆ ಅಲ್ಲಿ ಆ ಟಾಪಿಕ್ ತೆಗೆದುಕೊಂಡರು ಬಿಟ್ರೆ ನನ್ನನ್ನು ಯಾರು ಟ್ಯಾಗ್ ಮಾಡಿಲ್ಲ. ಅವರಿಗೆ ಚರ್ಚೆ ಮಾಡಲು ಒಂದು ಟಾಪಿಕ್ ಬೇಕಿತ್ತು ಅಷ್ಟೇ. ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಯಾರು ಭಾಷೆ ಟಾಪಿಕ್ ತೆಗೆದುಕೊಂಡಿದ್ದಾರೆ ಅದು ಅವರಿಗೆ ಬಿಟ್ಟಿದ್ದು. ಇದಕ್ಕೆ ನಾನು ಉತ್ತರ ಕೊಡದೆ ಕುಳಿತುಕೊಂಡಿಲ್ಲ, ಭಯ ಪಟ್ಟುಕೊಂಡಿಲ್ಲ. ಅವರರವರಿಗೆ ಏನು ಬೇಕು ಅದನ್ನು ತೆಗೆದುಕೊಂಡು ಅದನ್ನು ದೊಡ್ಡದಾಗಿ ಮಾಡಿಕೊಂಡು ಹೋದರು. ಮೋದಿ ಅವರು ಅದ್ಭುತವಾದ ಹೇಳಿಕೆ ಕೊಟ್ಟು ಈ ವಿವಾದವನ್ನು ಮುಕ್ತಾಯ ಮಾಡಿದರು.
ಎಲ್ಲರಿಗೂ ಅವರರವರ ಭಾಷೆ ಎಂದರೆ ತುಂಬಾ ಪ್ರೀತಿ ಇರುತ್ತೆ. ಯಾರಿಗೂ ಬೇರೆ ಭಾಷೆ ಮೇಲೆ ದ್ವೇಷದ ಅನುಭಾವಗಳಿಲ್ಲ. ಯಾವಾಗ ಬೇರೆಯವರು ತಮ್ಮ ಒತ್ತಡವನ್ನು ಆ ಭಾಷೆ ಮೇಲೆ ಹೇರಿದಾಗ ಸಮಸ್ಯೆ ಪ್ರಾರಂಭವಾಗುತ್ತೆ.
ಅದಕ್ಕೆ ನಾವು ಬೇರೆ ಭಾಷೆಯವರು ನಮ್ಮ ಸಿನಿಮಾ ಇಷ್ಟಪಡಬೇಕು ಎಂಬುದನ್ನು ಬಿಟ್ಟು ನೋಡುವವರೆಲ್ಲ ಈ ಸಿನಿಮಾ ಇಷ್ಟ ಪಡಬೇಕು ಎಂದು ಸಿನಿಮಾ ಮಾಡಬೇಕು. ಈ ಉದ್ದೇಶವನ್ನು ಇಟ್ಟುಕೊಮಡು ಸಿನಿಮಾ ಮಾಡಿದ್ರೆ ನಾವು ಎಲ್ಲ ಗಡಿಯನ್ನು ದಾಟಬಹುದು. ನಾವು ಅದೇ ರೀತಿ ಮಾಡಿದ್ದೇವೆ.