ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 3-4 ದಿನಗಳ ಕಾಲ ಗಾಳಿ ಮಳೆಯಾಗುವ ಸಾಧ್ಯತೆಯಿದೆ.
ಬಿಸಿಲು, ಸೆಕೆಯಿಂದ ಬಸವಳಿದ್ದ ಜನರಿಗೆ ಮಳೆರಾಯನ ಆಗಮನ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಮೊದಲ ಮಳೆಗೆ ಸಾಲು ಸಾಲು ಬಲಿ ನಿದ್ದೆಗೆಡಿಸಿದೆ. ಇದರ ಜೊತೆಗೆ ಬಿರುಗಾಳಿ ಮಳೆ ಸಹಿತ ಗುಡುಗು, ಸಿಡಿಲು ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ.
Advertisement
Advertisement
ಪೂರ್ವ ಮುಂಗಾರು ಆಗಿರುವ ಕಾರಣ ಮೂರು, ನಾಲ್ಕು ದಿನ ಗಾಳಿ-ಮಳೆ ಕಾಡಲಿದ್ದು ಮುನ್ನಚ್ಚೆರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Advertisement
ಕಳೆದ 3 ದಿನಗಳಿಂದ ಬೀಸುತ್ತಿರುವ ರಣಭೀಕರ ಗಾಳಿಗೆ 30ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿ ಓರ್ವ ವ್ಯಕ್ತಿಯ ಜೀವತೆಗೆದಿದೆ. ಮರಗಳು ಮಾತ್ರವಲ್ಲದೇ ಎರಡು ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿದೆ.