ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ (Karnataka Maharashtra Border Row) ಎರಡೂ ರಾಜ್ಯಗಳಲ್ಲಿ ಉದ್ವಿಗ್ನಗೊಂಡಿರುವ ಹೊತ್ತಿನಲ್ಲೇ ಶಿವಸೇನಾ ನಾಯಕ ಹಾಗೂ ಸಂಸದ ಸಂಜಯ್ ರಾವತ್ (Sanjay Raut) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಗಡಿಯೊಳಗೆ ಚೀನಾ ನುಸುಳಿದ ಮಾದರಿಯಲ್ಲೇ ನಾವು ಕೂಡ ಕರ್ನಾಟಕವನ್ನು ಪ್ರವೇಶಿಸುತ್ತೇವೆ ಎಂದು ಹೇಳಿದ್ದಾರೆ.
ಚೀನಾ ಎಂಟ್ರಿ ಕೊಟ್ಟಂತೆಯೇ ನಾವೂ ಕರ್ನಾಟಕವನ್ನು ಪ್ರವೇಶಿಸುತ್ತೇವೆ. ಈ ವಿಚಾರದಲ್ಲಿ ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿ ವಿವಾದ- ಅಮಿತ್ ಶಾ ಸೂಚನೆಗೂ ಕ್ಯಾರೇ ಎನ್ನದ ಮಹಾರಾಷ್ಟ್ರದ NCP ಶಾಸಕರು
Advertisement
Advertisement
ವಿವಾದವನ್ನು ಚರ್ಚೆಯ ಮೂಲಕ ಬಗೆಹರಿಸಲು ಬಯಸುತ್ತೇವೆ. ಆದರೆ ಕರ್ನಾಟಕದ ಸಿಎಂ ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದೆ. ಗಡಿ ವಿವಾದದ ಕುರಿತು ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಗಡಿ ಭಾಗದಲ್ಲಿ ಎರಡೂ ಕಡೆಯ ಬಸ್‌ಗಳಿಗೆ ಮಸಿ ಬಳಿದು ಆಕ್ರೋಶ ಕೂಡ ಹೊರಹಾಕಲಾಗಿತ್ತು. ವಿವಾದ ಉಲ್ಬಣವಾಗುತ್ತಿರುವುದನ್ನು ಅರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡೂ ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಲಾಯಿತು. ಆದರೆ ಯಾವುದಕ್ಕೂ ಕ್ಯಾರೆ ಎನ್ನದ ಎಂಇಎಸ್ ಪುಂಡರು ಕರ್ನಾಟಕ ಗಡಿ ಪ್ರವೇಶಿಸಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ತಡೆದು ಕ್ರಮ ಜರುಗಿಸಿದ್ದಾರೆ. ಇದನ್ನೂ ಓದಿ: ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆ: ಭಾಷಾವಾರು ಪ್ರಾಂತ್ಯಗಳ ರಚನೆಯೇ ಅಂತಿಮ – ಸಿಎಂ
Advertisement
ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಎಂಇಎಸ್‌ನ ಮಹಾಮೇಳವಾ ನಡೆಸಲು ಬೆಳಗಾವಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.