Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಎಲ್ಲಾ ನ್ಯಾಯಾಲಯಗಳಂತೆ ಮನದಲ್ಲಿ ದೊಡ್ಡ ನ್ಯಾಯಾಲಯವಿದೆ, ಅದೇ ಆತ್ಮಶಕ್ತಿಯ ನ್ಯಾಯಾಲಯವೆಂದು ಸಿಎಂ ಹೇಳಿದ್ದಾರೆ: ಡಿಕೆಶಿ

Public TV
Last updated: October 3, 2024 4:47 pm
Public TV
Share
3 Min Read
DK Shivakumar 8
SHARE

ಬೆಂಗಳೂರು: ನಮ್ಮ ಎಲ್ಲಾ ನ್ಯಾಯಾಲಗಳ ಜೊತೆಗೆ ನಮ್ಮ ಮನದಲ್ಲಿ ಒಂದು ದೊಡ್ಡ ನ್ಯಾಯಾಲಯವಿದೆ. ಅದೇ ಆತ್ಮಶಕ್ತಿಯ ನ್ಯಾಯಾಲಯ ಎಂದು ಸಿಎಂ ಹೇಳಿದ್ದಾರೆ ಈ ನ್ಯಾಯಾಲಯದಂತೆ ನಾವು ನಡೆಯಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿದ್ದಾರೆ.

ಭಾರತ್ ಜೋಡೋ ಭವನದಲ್ಲಿ ನಡೆದ ಗಾಂಧಿ ಜಯಂತಿ (Gandhi Jayanti) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವಿಂದು ಬಹಳ ಪುಣ್ಯದ ವರ್ಷದಲ್ಲಿದ್ದೇವೆ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ‍್ಯ ಹೋರಾಟದ ನೇತೃತ್ವ ವಹಿಸಿದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನ ತುಂಬಿದೆ. ಈ ಸಂದರ್ಭವನ್ನು ನಾವು ಬಳಸಿಕೊಂಡು ಗಾಂಧಿ ಅವರು ಹಾಕಿಕೊಟ್ಟ ದಾರಿ ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದರು. ಇದನ್ನೂ ಓದಿ: ಹುಕ್ಕೇರಿ ಹಿರೇಮಠದಿಂದ ಈ ಬಾರಿ ಹೋಳಿಗೆ ದಸರಾ

cm siddaramaiah 1

ಈ ದೇಶಕ್ಕೆ ಕಾಂಗ್ರೆಸ್ (Congress) ಹಾಕಿಕೊಟ್ಟಿರುವ ಬುನಾದಿ, ಗಾಂಧಿ ಅವರ ತತ್ವ, ಆದರ್ಶವೇ ನಮ್ಮ ಆಸ್ತಿ. ಈ ಸಂದರ್ಭದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಎಐಸಿಸಿ ಅಧ್ಯಕ್ಷರಾಗಿರುವುದು ಬಹಳ ವಿಶೇಷ. ಡಿಸೆಂಬರ್ ಕೊನೆ ವಾರದಲ್ಲಿ ಬೆಳಗಾವಿಯಲ್ಲಿ ವಿಶೇಷವಾದ ಎಐಸಿಸಿ ಅಧಿವೇಶನ ಮಾಡಲಿದ್ದು, ಇದಕ್ಕೆ ಎಐಸಿಸಿ ನಾಯಕರನ್ನು ಆಹ್ವಾನಿಸುತ್ತೇನೆ. ಈ ವಿಚಾರವಾಗಿ ಪಕ್ಷದ ಹಿರಿಯ ನಾಯಕರ ಸಮಿತಿ ಮಾಡಿದ್ದೇನೆ. ಇಂದು ಗಾಂಧಿ ನಡಿಗೆ ಮೂಲಕ ಹೆಜ್ಜೆ ಇಟ್ಟಿದ್ದೇವೆ. ಹಿಂದೆ ದೇಶಪಾಂಡೆ ಅವರು ಅಧ್ಯಕ್ಷರಾಗಿದ್ದಾಗ ದಂಡಿ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅದರ ನೆನಪಿನ ಆಧಾರದ ಮೇಲೆ ಇಂದು ಪಕ್ಷ ಹಾಗೂ ಸರ್ಕಾರದ ವತಿಯಿಂದ ಈ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದು ಹೇಳಿದರು. ಇದನ್ನೂ ಓದಿ: ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅಸಾಂವಿಧಾನಿಕ – ತಾರತಮ್ಯ ನಡೆದರೆ ಆಯಾ ರಾಜ್ಯಗಳೇ ಹೊಣೆ: ಸುಪ್ರೀಂ

200 ವರ್ಷದ ಹಿಂದೆ ಬ್ರಿಟೀಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ (Kittur Chennamma) ಅವರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಕಿತ್ತೂರಿನಲ್ಲಿ ವಿಶೇಷ ಕಾರ್ಯಕ್ರಮ ಮಾಡಲು ಆ ಜಿಲ್ಲೆಯ ನಾಯಕರು ನಿರ್ಧರಿಸಿದ್ದು, ಅದಕ್ಕೆ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಇಂದು ಚಾಲನೆ ಮಾಡಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ನೀವೆಲ್ಲರೂ ಗಾಂಧಿ ಕುಟುಂಬದ ಸದಸ್ಯರು. ನಮ್ಮ ಮೇಲೆ ರಾಷ್ಟ್ರಧ್ವಜವಿದೆ. ಈ ಅವಕಾಶ ಬೇರೆ ಯಾರಿಗೂ ಸಿಗುವುದಿಲ್ಲ. ನಾವಿಂದು ಮಾಡಲು ಹೊರಟಿರುವ ಕೆಲಸ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ನಿಮ್ಮೆಲ್ಲರ ಸಹಕಾರ ಮುಖ್ಯ. ಇಂದಿನಿಂದ ಮತ್ತೆ ನೀವೆಲ್ಲರೂ 2028ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಉತ್ಸಾಹದಿಂದ ಪ್ರತಿಜ್ಞೆ ಮಾಡಬೇಕು ಎಂದು ನುಡಿದರು. ಇದನ್ನೂ ಓದಿ: ಕಳಂಕಿತ ಸಿಎಂ ದಸರಾ ಚಾಲನೆ ನೀಡಿದ್ದು ಸರಿಯಲ್ಲ: ಪಿ ರಾಜೀವ್ ವಾಗ್ದಾಳಿ

ನಾನು ಹಾಗೂ ಸಿದ್ದರಾಮಯ್ಯ (CM Siddaramaiah) ಅವರು ಬೆಳಗಾವಿಯ ಗಾಂಧಿ ಬಾವಿಯಿಂದ ನಮ್ಮ ಚುನಾವಣಾ ಪ್ರಚಾರ ಆರಂಭಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆವು. ಮುಖ್ಯಮಂತ್ರಿಗಳು ಹೇಳಿರುವ ಒಂದು ಮಾತನ್ನು ನಾನಿಂದು ಹೇಳಬಯಸುತ್ತೇನೆ. ನಮ್ಮ ಎಲ್ಲಾ ನ್ಯಾಯಾಲಗಳ ಜತೆಗೆ ನಮ್ಮ ಮನದಲ್ಲಿ ಒಂದು ದೊಡ್ಡ ನ್ಯಾಯಾಲಯವಿದೆ. ಅದೇ ಆತ್ಮಶಕ್ತಿಯ ನ್ಯಾಯಾಲಯ. ಈ ನ್ಯಾಯಾಲಯದಂತೆ ನಾವು ನಡೆಯಬೇಕು. ನಾವು ಭಾವನೆ ಮೇಲೆ ರಾಜಕಾಕರಣ ಮಾಡುತ್ತಿಲ್ಲ. ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಜನರ ಬದುಕು ಸುಧಾರಿಸಲು ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ದುಡಿಮೆಯ ನಂಬಿ ಬದುಕು. ಅದರಲ್ಲೇ ದೇವರನ್ನೇ ಹುಡುಕು ಎಂದು ಗಾಂಧಿಜಿಯವರು ಹೇಳಿದ್ದಾರೆ. ಗಾಂಧಿ ಜಯಂತಿಯಂದು ನಾವು ಅನೇಕ ಕಾರ್ಯಕ್ರಮ ರೂಪಿಸಿದ್ದು, ಮುಂದಿನ ಒಂದು ವರ್ಷಗಳ ಈ ಕಾರ್ಯಕ್ರಮ ರೂಪಿಸಲಾಗುವುದು. ಗಾಂಧಿಜಿ ಅವರ ತತ್ವ, ಆದರ್ಶ, ಮಾರ್ಗದರ್ಶನವನ್ನು ಕಾಂಗ್ರೆಸಿಗರು ಅಳವಡಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

ಒಂದು ಊರಿಗೆ ಒಂದು ಪಂಚಾಯತಿ ಇರಬೇಕು, ಒಂದು ಶಾಲೆ ಹಾಗೂ ಒಂದು ಸಹಕಾರ ಸಂಘ ಇರಬೇಕು ಎಂದು ಹೇಳಿದ್ದರು. ಅದರಂತೆ ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯ್ತಿಗೆ ಬಂಧಿಸಿದಂತೆ ವಿವಿಯನ್ನೇ ಸ್ಥಾಪಿಸಲಾಗಿದೆ. ಸಬರಮತಿ ಆಶ್ರಮದ ಪ್ರತಿರೂಪವನ್ನೇ ಇಲ್ಲಿ ನಿರ್ಮಾಣ ಮಾಡಿದ್ದಾರೆ. ಇದೊಂದು ಪ್ರವಾಸಿ ತಾಣವಾಗಿದೆ. ಗಾಂಧಿಯವರ ಹೆಸರು ಹೇಗೆ ಶಾಶ್ವತವಾಗಿರುತ್ತದೆಯೋ, ಅದೇ ರೀತಿ ಕಾಂಗ್ರೆಸ್ ಪಕ್ಷ ಶಾಶ್ವತವಾಗಿರುತ್ತದೆ. ಕಾಂಗ್ರೆಸ್ ಪಕ್ಷವನ್ನು ಅಂತ್ಯಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ದಸರಾಗೆ ಇಷ್ಟೇ ದಿನ ರಜೆ ಕೊಡಿ ಅಂತ ಒತ್ತಾಯ ಮಾಡ್ಬೇಡಿ: ಕ್ಯಾಮ್ಸ್ ಆಗ್ರಹ

TAGGED:bengalurucm siddaramaiahd k shivakumargandhi jayantiಗಾಂಧಿ ಜಯಂತಿಡಿ.ಕೆ.ಶಿವಕುಮಾರ್ಬೆಂಗಳೂರುಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema Updates

ganesh
‘ಜೇಮ್ಸ್’ ಡೈರೆಕ್ಟರ್ ಚೇತನ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್
38 minutes ago
Madenuru Manu
ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌
59 minutes ago
salman khan 1 1
ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ
1 hour ago
SURIYA VIJAY DEVARAKONDA
ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?
2 hours ago

You Might Also Like

dinesh gundu rao 3
Bengaluru City

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ – ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಓಪನ್

Public TV
By Public TV
45 seconds ago
M.B Patil
Bengaluru City

ಚಿಕ್ಕಮಗಳೂರು ಏರ್-ಸ್ಟ್ರಿಪ್ ನಿರ್ಮಾಣ: ಭೂಸ್ವಾಧೀನಕ್ಕೆ ಬಾಕಿ ಇರುವ 17 ಕೋಟಿ ಬಿಡುಗಡೆಗೆ ಕ್ರಮ

Public TV
By Public TV
25 minutes ago
H D Kumaraswamy 3
Bengaluru City

ಪಿಎಂ ಇ-ಡ್ರೈವ್ – ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್‌ಡಿಕೆ

Public TV
By Public TV
36 minutes ago
PM Modi 1
Latest

ನಾನು ಶಾಂತವಾಗಿದ್ದರೂ ನನ್ನ ರಕ್ತ ನಾಳಗಳಲ್ಲಿ ʻಸಿಂಧೂರʼ ಕುದಿಯುತ್ತಲೇ ಇರುತ್ತೆ – ಪಾಕ್‌ಗೆ ಮೋದಿ ಖಡಕ್‌ ಸಂದೇಶ

Public TV
By Public TV
40 minutes ago
dk shivakumar 1 2
Bengaluru City

ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ – ಹಠ ಸಾಧಿಸಿ ಗೆದ್ದ ಡಿಕೆಶಿ

Public TV
By Public TV
58 minutes ago
Prahlad Joshi 1
Districts

ಕಾಂಗ್ರೆಸ್‌ನವರೇ ಪರಮೇಶ್ವರ್ ಮೇಲೆ ಕ್ರಮ ಆಗ್ಬೇಕು ಅಂತಾ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?