ಗದಗ: ಬನಶಂಕರಿ ದೇವಸ್ಥಾನದ (Banashankari temple) ನೂತನ ಗೋಪುರಕ್ಕೆ ಸಿಡಿಲು ಬಡಿದು ಸ್ಥಳದಲ್ಲಿದ್ದ 8 ಜನ ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ (Lakshmeshwara) ತಾಲೂಕಿನ ಶಿಗ್ಲಿ (Shigli) ಗ್ರಾಮದಲ್ಲಿ ನಡೆದಿದೆ.
ಶಿಗ್ಲಿ ಗ್ರಾಮದ ಐತಿಹಾಸಿಕ ಬನಶಂಕರಿ ದೇವಸ್ಥಾನ ಗೋಪುರಕ್ಕೆ ಸಿಡಿಲು ಬಡಿದು ಗೋಪುರ ಜಖಂ ಆಗಿದೆ. ಈ ವೇಳೆ ಸ್ಥಳದಲ್ಲಿದ್ದ 8 ಜನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಓರ್ವನ ಕೈಗೆ ಗೋಪುರದ ಸಿಮೆಂಟ್ ತುಣುಕುಗಳು ಬಡಿದು ಗಾಯವಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಪುಣ್ಯಸ್ಮರಣೆ – ತಂದೆಯ ಸಮಾಧಿಗೆ ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ ಮಾಡಿಸಿದ ಮಗ
Advertisement
Advertisement
8 ತಿಂಗಳ ಹಿಂದೆಯಷ್ಟೇ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಈ ಗೋಪುರ ಜೀರ್ಣೋದ್ಧಾರ ಮಾಡಲಾಗಿತ್ತು. ಸಾವಿರಾರು ಜನ ದಾನಿಗಳ ದೇಣಿಗೆ ಸಹಾಯದಿಂದ ಸುಂದರ ಗೋಪುರ ನಿರ್ಮಿಸಲಾಗಿತ್ತು. ಈಗ ಏಕಾಏಕಿ ಸಿಡಿಲು ಬಡಿದಿರುವುದರಿಂದ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ. ಐತಿಹಾಸಿಕ ದೇವಸ್ಥಾನ ಗೋಪುರಕ್ಕೆ ಅಪಚಾರ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ