ಕಲಬುರಗಿಯಲ್ಲಿ ಮತ್ತೆ ಕಂಪಿಸಿದ ಭೂಮಿ – ಸಿದ್ದರಾಮಯ್ಯಗೂ ಭೂಕಂಪನದ ಅನುಭವ

Public TV
2 Min Read
GLB

– ಆತಂಕದಲ್ಲೇ ರಾತ್ರಿ ಜಾಗರಣೆ ಮಾಡುತ್ತಿರೋ ಜನತೆ

ಕಲಬುರಗಿ: ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಭೂಕಂಪನ ಹಾಗೂ ಭೂಮಿಯಿಂದ ಬರುತ್ತಿರುವ ಭಯಾನಕ ಶಬ್ದದಿಂದ ಬೆಚ್ಚಿಬಿದ್ದಾರೆ. ಆದರೆ ಸರ್ಕಾರದ ಯಾವೊಬ್ಬ ಅಧಿಕಾರಿಯಾಗ್ಲಿ ಶಾಸಕರಾಗ್ಲಿ ಗ್ರಾಮಕ್ಕೆ ಭೇಟಿ ನೀಡಿಲ್ಲ. ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಈ ನಡುವೆ ಸ್ವತಃ ಸಿದ್ದರಾಮಯ್ಯ ಅವ್ರಿಗೂ ಭೂಕಂಪನದ ಅನುಭವ ಆಗಿದೆ.

GLB SIDDU

ಕಳೆದ ಹಲವು ದಿನಗಳಿಂದ ಲಘು ಭೂಕಂಪನಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ಜಿಲ್ಲೆಯ ಜನತೆಯಂತೂ ಆತಂಕದಲ್ಲೇ ದಿನದೂಡ್ತಿದ್ದಾರೆ. ರಾತ್ರಿ ಆದರೆ ಸಾಕು ಭೂಮಿಯಿಂದ ಭೀಕರ ಸದ್ದು ಕೇಳಿ ಬರ್ತಿದ್ದು ಯಾವ ಕ್ಷಣದಲ್ಲಿ ಏನಾಗುತ್ತೋ ಅಂತ ಜನ ಆತಂಕದಲ್ಲಿದ್ದಾರೆ. ಚಿಂಚೋಳಿ, ಕಾಳಗಿ ತಾಲೂಕಲ್ಲಿ ಹೆಚ್ಚಾಗಿ ಭೂಕಂಪನದ ಅನುಭವದ ಅನುಭವ ಆಗ್ತಿದೆ. ಗಡಿಕೇಶ್ವರ, ಹೊಸಹಳ್ಳಿ, ಕೇರಳ್ಳಿ, ಬೆನಕನಹಳ್ಳಿ, ಭಂಟನಹಳ್ಳಿ, ತೇಗಲತಿಪ್ಪಿ, ಹೊಡೆಬಿರನಹಳ್ಳಿ, ಕೋರವಿ, ಕೋರಳ್ಳಿ, ಭಂಟನೂರ, ರಾಮನಗರ ತಾಂಡ, ಸುಲೆಪೇಟ್, ನಿಡಗುಂದ, ಕುಪನೂರ, ಸುಂಠಾಣ, ಕುಡ್ಡಹಳ್ಳಿ, ಹಲಚೇರಾ, ರುದ್ನೂರ್‍ನಲ್ಲಿ ಕಂಪನದ ಅನುಭವ ಆಗ್ತಿದೆ. ಇದನ್ನೂ ಓದಿ: ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

GLB EARTHQUAKE 8

ಸಿದ್ದರಾಮಯ್ಯಗೂ ಅನುಭವ..!
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಭೂಕಂಪನದ ಅನುಭವ ಆಯ್ತು. ಸಿದ್ದರಾಮಯ್ಯ ಅವರು ರಾತ್ರಿ 8 ಗಂಟೆಯ ಸುಮಾರಿಗೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ನಡೆಯುತ್ತಿದ್ದ ವೇಳೆಯೇ ಭೂಮಿಯಿಂದ ಶಬ್ದ ಕೇಳಿ ಬಂತು. ಕಂಪನದ ಅನುಭವ ಆಗ್ತಿದ್ದತೆ ಅಲ್ಲಿಂದಲೇ ಕಂದಾಯ ಸಚಿವ ಆರ್.ಅಶೋಕ್‍ಗೆ ಫೋನ್ ಮಾಡಿ ಮಾಹಿತಿ ನೀಡಿದ್ರು. ಕೂಡಲೇ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದ್ರು. ಗ್ರಾಮಸ್ಥರಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಜಿಲ್ಲಾಧಿಕಾರಿಯೇ ಮಾಡಬೇಕಿತ್ತು. ಆದ್ರೆ ಒಂದು ಬಾರಿಯೂ ಈ ಗ್ರಾಮಕ್ಕೆ ಬಂದಿಲ್ಲ. ನಾನು ಬರುತ್ತೇನೆ ಎಂದು ತಿಳಿದ ನಂತರ ಇಲ್ಲಿಗೆ ಭೇಟಿ ನೀಡಿದ್ದಾರೆ ಅಂತ ಸಿದ್ದರಾಮಯ್ಯ ಹರಿಹಾಯ್ದರು.

GLB EARTHQUAKE 7

ಭೂಕಂಪ ಪೀಡಿತ ಬಹುತೇಕ ಗ್ರಾಮಗಳಲ್ಲಿ ಜನ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕೆಲವರು ಗ್ರಾಮವನ್ನೇ ತೊರೆದಿದ್ದಾರೆ. ಗ್ರಾಮದಲ್ಲೇ ಇರುವ ಜನ ಮನೆಯಲ್ಲಿ ವಾಸಿಸದೇ ರಾತ್ರಿಯಿಡಿ ಮನೆಯ ಹೊರಗಡೆಯ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ. ಇತ್ತ ಗಡಿಕೇಶ್ವರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಲಘು ಭೂಕಂಪನದಿಂದ ಅನೇಕ ಮನೆಗಳು ಬಿರಕು ಬಿಟ್ಟಿವೆ. ಮನೆಗಳ ಗೋಡೆಗಳು ನೆಲಕ್ಕುರುಳಿವೆ. ಒಟ್ಟಾರೆ ಭೂಕಂಪನ ಭೀತಿಯಲ್ಲಿ ಜನತೆ ಜೀವನ ಸಾಗಿಸ್ತಿದ್ದಾರೆ. ಇಲ್ಲಿ ಅನಾಹುತ ಸಂಭಿಸೋಕು ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *