ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಅನುಭವಿಸಿದೆ. ಬಾಯ್ಕಟ್ ಸೇರಿದಂತೆ, ಸಿನಿಮಾ ನಟನ ದರ್ಪವೇ ಸಿನಿಮಾ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅದರಲ್ಲೂ ಹಿಂದಿ ಸಿನಿಮಾ ರಂಗ ವಿಮರ್ಶಕರು ಕೂಡ ಸಿನಿಮಾ ಚೆನ್ನಾಗಿಲ್ಲವೆಂದು ಕಾಮೆಂಟ್ ಮಾಡಿದ್ದರು. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಗೆಲ್ಲಲಿಲ್ಲ. ಈ ಸೋಲಿನ ಹೊಣೆಯನ್ನು ಸ್ವತಃ ವಿಜಯ್ ದೇವರಕೊಂಡ ಹೊತ್ತಿದ್ದಾರೆ.
Advertisement
ಮೂಲಗಳ ಪ್ರಕಾರ, ಲೈಗರ್ ಸಿನಿಮಾದ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿರುವ ವಿಜಯ್ ದೇವರಕೊಂಡ ತಾವು ಪಡೆದಿದ್ದು ಕೋಟಿ ಕೋಟಿ ಸಂಭಾವನೆಯನ್ನು ವಾಪಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಅವರು 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೂ ಹಣವನ್ನು ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಅವರಿಗೆ ವಾಪಸ್ಸು ಮಾಡಿದ್ದಾರೆ ಎಂದು ವರದಿ ಆಗಿದೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ
Advertisement
Advertisement
ಲೈಗರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾ ನೂರಾರು ಕೋಟಿ ಗಳಿಸಲಿದೆ ಎಂಬ ಲೆಕ್ಕಾಚಾರ ಕೂಡ ನಡೆದಿತ್ತು. ದಕ್ಷಿಣದ ಹೀರೋ ಬಾಲಿವುಡ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ಹಾಕಿದ ಬಂಡವಾಳವೂ ಬಾರದೇ ಇರುವಷ್ಟು ಸಿನಿಮಾ ಮುಗ್ಗರಿಸಿದೆ.