ಹೊಸಬರ ತಂಡ ಸೇರಿಕೊಂಡು ಸಿದ್ಧಪಡಿಸಿರುವ ‘ಲೈಫ್ ಆಫ್ ಮೃದುಲ’ (Life Of Mrudula Film) ಚಿತ್ರವನ್ನು ಮದನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ, ನಾಯಕನಾಗಿ ಮದನ್ ಕುಮಾರ್ ಸಿ ನಟಿಸಿದ್ದಾರೆ. ಸಂಭಾಷಣೆ ಬರೆದಿರುವ ಯೋಗಿ ದೇವಗಂಗೆ ನಿರ್ಮಾಣದಲ್ಲಿಯೂ ಕೈ ಜೋಡಿಸಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಕೋಲಾರದ ಚೇತನ್ ತ್ರಿವೇಣ್ ಈ ಸಿನಿಮಾಗೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
Advertisement
ಪ್ರಚಾರದ ಮೊದಲ ಹಂತವಾಗಿ ಹಾಡು ಬಿಡುಗಡೆ ಸಮಾರಂಭವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ಯುವ ಮುಖಂಡ ಮೊಹಮ್ಮದ್ ನಲಪಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ, ‘ಬಗ್ಸೋದೇ ಬಡಿಯೋದೆ’ ಹಾಡಿನ ಸಾಲು ಯುವ ಜನಾಂಗಕ್ಕೆ ತಪ್ಪು ಸಂದೇಶ ಸಾರುತ್ತದೆ. ಇದನ್ನು ಯುವಕರಿಗೆ ತೋರಿಸಬಾರದು, ಮಾಡಬಾರದು. ಈಗಾಗಲೇ ಅದರ ಅನುಭವ ಪಡೆದಿದ್ದೇನೆ. ರ್ಯಾಪ್ ಸಾಂಗ್ ಅಂದರೆ ತಕ್ಷಣ ವೈಯಲೆಂಟ್ ಆಗಿರಬೇಕು ಎಂದು ಯಾರೂ ಹೇಳಿಲ್ಲ. ಒಳ್ಳೆತನದಲ್ಲೂ ರ್ಯಾಪ್ ಮಾಡಬಹುದು. ಇಂತಹ ಪದಗಳು ಬದಲಾದರೆ, ಮುಂದಿನ ತಲೆಮಾರು ಬದಲಾವಣೆ ಆಗಲು ಸಾಧ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆತನ ಬೆಳೆಸೋಣ ಎಂದು ತಂಡಕ್ಕೆ ಶುಭ ಹಾರೈಸಿದರು.
Advertisement
Advertisement
ಕಾಲ್ಪನಿಕ ಡಾರ್ಕ್ ಡ್ರಾಮಾ ಜಾನರ್ನ ಕಥೆಯಾಗಿದ್ದು, ಮೃದುಲ ಎಂಬುವಳ ಜೀವನದಲ್ಲಿ ಎದುರಾಗುವ ಮೂರು ವಿಭಿನ್ನ ಕಾಲ ಘಟ್ಟಗಳು ಬರುತ್ತದೆ. ಆಕೆಗೆ ಬದುಕಲ್ಲಿ ಅನಿರೀಕ್ಷಿತವಾಗಿ ಬರುವ ಸವಾಲನ್ನು ಯಾವ ರೀತಿ ಎದುರಿಸುತ್ತಾಳೆ ಎಂಬುದನ್ನು ಕುತೂಹಲ ತಿರುವುಗಳ ಮೂಲಕ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ.
Advertisement
ನಾಯಕಿಯಾಗಿ ಪೂಜಾ ಲೋಕಾಪುರ (Pooja Lokapur) ಜೊತೆ ಆಶಾ ಸುಜಯ್, ಶಶಾಂಕ್, ಕುಲದೀಪ್, ಯೋಗಿದೇವಗಂಗೆ, ಅನೂಪ್ ಥಾಮಸ್, ಪ್ರೀತಿ ಚಿದಾನಂದ್, ಶರೀಫ್ ಮುಂತಾದವರು ನಟಿಸಿದ್ದಾರೆ. ಸಂಗೀತ ರಾಹುಲ್ ಎಸ್ ವಾಸ್ತರ್, ಛಾಯಾಗ್ರಹಣ ಅಚ್ಚು ಸುರೇಶ್, ಸಂಕಲನ ವಸಂತಕುಮಾರ್.ಕೆ ಅವರದಾಗಿದೆ. ಬೆಂಗಳೂರು, ಕುಂದಾಪುರ ಸುಂದರ ತಾಣಗಳಲ್ಲಿ 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ನಿಂದ ಪ್ರಶಂಸೆ ಪಡೆದುಕೊಂಡ ಚಿತ್ರ ಇದಾಗಿದೆ.