ತುಮಕೂರು: ಕೊಲೆ (Murder) ಪ್ರಕರಣವೊಂದರಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂ. ದಂಡ (Fine) ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ (Judge) ಯಾದವ ಕರಕೇರ ಅವರು ತೀರ್ಪು ನೀಡಿದ್ದಾರೆ.
ಪಾವಗಡ ತಾಲೂಕಿನ ನೇರಳೆಕುಂಟೆ ಗ್ರಾಮದ ರಾಮಾಂಜಿ ಬಿನ್ ರಾಮಪ್ಪ(40), ಸುಬ್ಬಮ್ಮ ಬಿನ್ ರಾಮಪ್ಪ (58) ಜೀವಾವಧಿ ಶಿಕ್ಷೆಗೊಳಗಾದವರು ಹಾಗೂ ಅಂಜಿನಪ್ಪ ಮೃತ ದುರ್ದೈವಿ. ಅಂಜಿನಪ್ಪ, ರಾಮಂಜಿ, ಸುಬ್ಬಮ್ಮ ಅವರು ಗ್ರಾಮದ ಮೂಗಪ್ಪ ಎಂಬವರ ಮೊಮ್ಮಕ್ಕಳಾಗಿದ್ದರು. 2019ರ ಫೆ.17ರಂದು ರಾತ್ರಿ 9 ಗಂಟೆಗೆ ತಾತಾ ಮೂಗಪ್ಪನ ತಿಥಿ ಕಾರ್ಯವನ್ನು ಅಂಜಿನಪ್ಪ ನಡೆಸಿ ಬಂದಿದ್ದ. ಆದರೆ ಉಳಿದ ಇಬ್ಬರು ಮೊಮ್ಮಕ್ಕಳು ನಾವೇ ತಾತ ಮೂಗಪ್ಪನ ತಿಥಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಅಂಜಿನಪ್ಪನೊಂದಿಗೆ ಜಗಳ ತೆಗೆದಿದ್ದಾರೆ.
Advertisement
Advertisement
ಇದೇ ಜಗಳ ಮಿತಿ ಮೀರಿದ್ದು, ರಮಂಜಿ, ಸುಬ್ಬಮ್ಮ ಸೇರಿ ಮನೆಯ ಪಕ್ಕದಲ್ಲಿದ್ದ ಕೂಳೆ ಹೊಡೆದಿರುವ ಕಟ್ಟಿಗೆಯಿಂದ ಅಂಜಿನಪ್ಪನ ಹಣೆ ಮತ್ತು ಬಲಕಿವಿಯ ಬಳಿಗೆ ಜೋರಾಗಿ ಹೊಡೆದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಂಜಿನಪ್ಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಪ್ರಕರಣದ ಬಗ್ಗೆ ಅಂದಿನ ತನಿಖಾಧಿಕಾರಿ ಸಿಪಿಐ ವೆಂಕಟೇಶ್ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಎಂದರೆ ಯಾರು, ಏನು ಎನ್ನುವುದನ್ನು ಭಾರತ್ ಜೋಡೋ ತೋರಿಸಿಕೊಟ್ಟಿದೆ: ಸಿದ್ದರಾಮಯ್ಯ
Advertisement
Advertisement
ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮೇಲ್ಕಂಡಂತೆ ತೀರ್ಪು ನೀಡಿದ್ದು, ದಂಡದ ಹಣದಲ್ಲಿ ದೂರುದಾರರಾದ ರಾಮಾಂಜಿಗೆ 75 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದರು. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು. ಇದನ್ನೂ ಓದಿ: ಸ್ತ್ರೀ ನಿಂದನೆ, ಶೋಷಣೆ ಬಿಜೆಪಿಯವರ ಹುಟ್ಟುಗುಣ- ಗುಂಡೂರಾವ್ ಟೀಕೆ