ಕಾರವಾರ: ಸರ್ಫಿಂಗ್ ಮಾಡುವ ವೇಳೆ ಸಮುದ್ರ ಸುಳಿಗೆ ಸಿಕ್ಕಿ ಬಿದ್ದಿದ್ದ ಪ್ರವಾಸಿಗನನ್ನು ಪ್ರವಾಸೋದ್ಯಮ ಇಲಾಖೆಯ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಡ್ಲೆ ಬೀಚ್ ನಲ್ಲಿ ಈ ಘಟನೆ ನಡೆದಿದ್ದು, ಅಖಿಲೇಶ್ (30) ರನ್ನು ರಕ್ಷಣೆ ಮಾಡಲಾಗಿದೆ. ಅಖಿಲೇಶ್ ಸಮುದ್ರದಲ್ಲಿ ಸರ್ಫಿಂಗ್ ಮಾಡಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಲೈಫ್ ಗಾರ್ಡ್ ಗಳ ಕಾರ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಅವರ ಕಾರ್ಯವನ್ನು ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಖಿಲೇಶ್ ಡೆಹ್ರಾಡೂನ್ ಮೂಲದರಾಗಿದ್ದು, ಇಂದು ಕುಡ್ಲೆ ಬೀಚ್‍ನಲ್ಲಿ ಸರ್ಫಿಂಗ್ ಮಾಡಲು ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ನೀರಿನ ಸುಳಿ ನಿರ್ಮಾಣವಾಗಿದ್ದು, ಸರ್ಫಿಂಗ್ ಮಾಡುವ ವೇಳೆ ಆಯಾ ತಪ್ಪಿ ಅಖಿಲೇಶ್ ಸುಳಿಯಲ್ಲಿ ಸಿಲುಕಿದ್ದರು. ಅಪಾಯದಲ್ಲಿ ಸಿಲುಕಿದ ಅವರು ರಕ್ಷಣೆಗಾಗಿ ಮೊರೆ ಇಟ್ಟಿದ್ದು, ಇದನ್ನು ಗಮನಿಸಿದ ಪ್ರವಾಸೋದ್ಯಮ ಇಲಾಖೆಯ ಲೈಫ್ ಗಾರ್ಡ್ ಸಿಬ್ಬಂದಿ ಸಂಜೀವ್ ಹೋಸ್ಕಟ್ಟಾ, ನಿತ್ಯಾನಂದ ಹರಿಕಂತ್ರ ಸಮುದ್ರಕ್ಕೆ ಇಳಿದು ಅಖಿಲೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv