ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಮೇ 4ರಿಂದ 9ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಎಲ್‌ಐಸಿಯಲ್ಲಿರುವ ಶೇ.3.5 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸಕಾರ ಮುಂದಾಗಿದೆ. ಮಾರಾಟದಿಂದ ಬೊಕ್ಕಸಕ್ಕೆ 21 ಸಾವಿರ ಕೋಟಿ ರೂ. ಬರಲಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.
Advertisement
Advertisement
ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್‌ಐಸಿಯ ಶೇ. 5-7ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ 50 ರಿಂದ 65 ಸಾವಿರ ಕೋಟಿ ರೂ. ಸಂಗ್ರಹಿಸಲು ಮುಂದಾಗಿತ್ತು. ಆದರೆ ರಷ್ಯಾ–ಉಕ್ರೇನ್ ಯುದ್ಧ ಮತ್ತು ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಐಪಿಒ ಬಿಡುಗಡೆ ಮುಂದೂಡಿಕೆಯಾಗಿತ್ತು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್
Advertisement
ಎಲ್‌ಐಸಿಯ ಐಪಿಒ ಗಾತ್ರವನ್ನು ಇಳಿಕೆ ಮಾಡಿದರೂ ಇದು ದೇಶದ ಅತೀ ದೊಡ್ಡ ಐಪಿಒ ಆಗಿ ದಾಖಲೆ ಬರೆಯಲಿದೆ. ಕಳೆದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಪೇಟಿಎಂ 18,300 ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗೆನ ದೇಶದ ದೊಡ್ಡ ಐಪಿಒ ಆಗಿದೆ. ಕೋಲ್ ಇಂಡಿಯಾ 2010 ರಲ್ಲಿ 15,500 ಕೋಟಿ ಮತ್ತು ರಿಲಯನ್ಸ್ ಪವರ್ 2008ರಲ್ಲಿ 11,700 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸಿತ್ತು.
Advertisement
ಕೇಂದ್ರ ಸರ್ಕಾರ 2021-22ರ ಹಣಕಾಸು ವರ್ಷದಲ್ಲಿ ಎಲ್‌ಐಸಿಯ 31.6 ಕೋಟಿ ಅಥವಾ ಶೇ.5 ರಷ್ಟು ಪಾಲನ್ನು ಮಾರಾಟ ಮಾಡಿ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿತ್ತು.