4ನೇ ತ್ರೈಮಾಸಿಕದಲ್ಲಿ ಎಲ್‌ಐಸಿಗೆ ಬರೋಬ್ಬರಿ 13,762 ಕೋಟಿ ರೂ. ಲಾಭ

Public TV
1 Min Read
lic insurance

ಮುಂಬೈ: ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವೂ (LIC) 2024ರ ಮಾರ್ಚ್‌ 31ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 13,762 ಕೋಟಿ ರೂ. ನಿವ್ವಳ ಲಾಭ (Net Profit) ಗಳಿಸಿದೆ.

ಕಳೆದ ಹಣಕಾಸು ವರ್ಷದ ಈ ಅವಧಿಯಲ್ಲಿ ಎಲ್‌ಐಸಿ 13,191 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಳೆದ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದ ಪ್ರಮಾಣದಲ್ಲಿ 4.5% ಏರಿಕೆ ಕಂಡಿದೆ. ಲಾಭ ಬಂದ ಹಿನ್ನೆಲೆಯಲ್ಲಿ ಒಂದು ಷೇರಿಗೆ (Share) 6 ರೂ. ಮಧ್ಯಂತರ ಡಿವಿಡೆಂಡ್ (Dividend) ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ದರ್ಶನ್ ಹೆಸರ‍್ಹೇಳಿ ಲಕ್ಷಾಂತರ ರೂ. ದೋಖಾ

lic insurance 1

ಮಾರ್ಚ್ 31, 2023 ಕ್ಕೆ ಕೊನೆಗೊಂಡ ವರ್ಷದಲ್ಲಿ ವೈಯಕ್ತಿಕ ವಿಭಾಗದಲ್ಲಿ ಒಟ್ಟು 2,04,28,937 ಪಾಲಿಸಿಗಳು ಮಾರಾಟವಾದರೆ ಮಾರ್ಚ್ 31,2024ಕ್ಕೆ ಕೊನೆಗೊಂಡ ವರ್ಷದಲ್ಲಿ ಒಟ್ಟು 2,03,92,973 ಪಾಲಿಸಿಗಳನ್ನು ಮಾರಾಟ ಮಾಡಿದೆ.

ಇಂದು ಎಲ್‌ಐಸಿ ಷೇರು ಬೆಲೆ 7.90 ರೂ. ಏರಿಕೆಯಾಗಿ 1,037.65 ರೂ.ಗೆ ಕೊನೆಯಾಗಿದೆ. ಬೆಳಗ್ಗೆ 10:45ಕ್ಕೆ ವೇಳೆಗೆ 1,054 ರೂ.ಗೆ ಏರಿಕೆಯಾಗಿ ನಂತರ ಇಳಿಕೆಯಾಗಿತ್ತು. ಇದನ್ನೂ ಓದಿ: ಚನ್ನಗಿರಿ ಗಲಭೆ ಕೇಸ್‌ – ಮತ್ತೆ 3 ಎಫ್‌ಐಆರ್‌ ಸೇರ್ಪಡೆ, ಎಸ್‌ಐ ಸಸ್ಪೆಂಡ್‌

 

Share This Article