ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಬಿಗುವಿನ ವಾತಾವರಣವಿರುತ್ತದೆ, ವಿನಾಕಾರಣ ಕೂರಿಸ್ತಾರೆ. ಅಲ್ಲಿ ಬೈಗಳಗಳ ಹೊರತಾಗಿ ಮತ್ತೇನೂ ಕೇಳುವುದಿಲ್ಲ ಎನ್ನುವುದು ರೂಢಿಗತ ಮಾತು. ಆದರೆ, ಬೆಂಗಳೂರಿನ ಠಾಣೆಯೊಂದರಲ್ಲಿ ದೂರು ಕೊಡಲು ಬಂದವರಿಗಾಗಿಯೇ ಸುಸಜ್ಜಿತ ಗ್ರಂಥಾಲಯವನ್ನು ಶುರು ಮಾಡಿದ್ದಾರೆ, ಅಲ್ಲಿನ ಠಾಣಾಧಿಕಾರಿ ಎಲ್.ವೈ ರಾಜೇಶ್. ನಿನ್ನೆಯಷ್ಟೇ ಆ ಲೈಬ್ರರಿ ಉದ್ಘಾಟನೆಯಾಗಿದ್ದು, ರಾಜೇಶ್ ಅವರ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ದೂರು ಕೊಡಲು ಠಾಣೆಗೆ ಬಂದಾಗ, ಅಲ್ಲಷ್ಟು ಹೊತ್ತು ಕಳೆಯಬೇಕಾದ ಸಂದರ್ಭ ಬರುವುದು ಸಹಜ. ಅಧಿಕಾರಿಗಳ ಮೀಟಿಂಗ್, ಕೆಲಸದ ಒತ್ತಡದ ಕಾರಣಕ್ಕಾಗಿಯೇ ದೂರುದಾರರು ಕಾಯಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಅವರ ಸಮಯವನ್ನು ಹಾಳು ಮಾಡಬಾರದು ಎನ್ನುವ ಕಾರಣಕ್ಕಾಗಿ ರಾಜೇಶ್ ಅವರು ತಮ್ಮ ಠಾಣೆಯಲ್ಲಿ ಗ್ರಂಥಾಲಯ ಶುರು ಮಾಡಿದ್ದಾರೆ. ಕನ್ನಡದ ಹೆಸರಾಂತ ಲೇಖಕರ ಪುಸ್ತಕಗಳ ಜೊತೆ ಉದಯೋನ್ಮುಖ ಲೇಖಕರ ಪುಸ್ತಕಗಳನ್ನು ಲೈಬ್ರರಿಯಲ್ಲಿಟ್ಟು ಓದುವ ಅಭಿರುಚಿಯನ್ನು ಹೆಚ್ಚಿಸುತ್ತಿದ್ದಾರೆ. ದೂರು ಕೊಡಲು ಬಂದವರು ಗಂಟೆಗಟ್ಟಲೆ ಕಾಯಬೇಕಾದ ಸಂದರ್ಭದಲ್ಲಿ ಪುಸ್ತಕಗಳನ್ನು ಓದಲಿ ಎಂಬುದು ಇದರ ಹಿಂದಿರುವ ಉದ್ದೇಶವಾದರೂ, ಕ್ರೈಮ್ ಸ್ಪಾಟ್ ಅನ್ನು ನಾಲೆಡ್ಜ್ ಹಬ್ ಆಗಿಸಿದ ಪ್ರಯತ್ನಕ್ಕೆ ರಾಜೇಶ್ ಅವರಿಗೆ ಪ್ರಶಂಸೆಯ ಸುರಿಮಳೆಯೇ ಆಗುತ್ತಿದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ
Advertisement
Advertisement
ಬೆಂಗಳೂರಿನ ಆಗ್ನೇಯ ವಲಯ ವ್ಯಾಪ್ತಿಯ ಬಂಡೇಪಾಳ್ಯ ಪೊಲೀಸ್ ಠಾಣೆಯ ಎಲ್.ವೈ. ರಾಜೇಶ್ ಈ ರೀತಿಯ ಕೆಲಸಗಳನ್ನು ಮಾಡುತ್ತಿರುವುದು ಹೊಸದೇನೂ ಅಲ್ಲ. ತಮ್ಮ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿಸಿದ್ದಾರೆ. ಕಷ್ಟ ಅಂತ ಪೊಲೀಸ್ ಸ್ಟೇಶನ್ ಗೆ ಬಂದವರಿಂದ ಫೀಡ್ ಬ್ಯಾಕ್ ಕೂಡ ಪಡೆಯುವ ವ್ಯವಸ್ಥೆ ಮಾಡಿದ್ದಾರೆ. ತಮಗೆ ಯಾರಿಂದ ತೊಂದರೆ ಆಯಿತು ಎಂದು ಮುಕ್ತವಾಗಿ ಹೇಳಿಕೊಳ್ಳುವಂತಹ ವಾತಾವರಣವನ್ನೂ ಸೃಷ್ಟಿ ಮಾಡಿದ್ದಾರೆ. ಜೊತೆಗೆ ತಮ್ಮ ಗೆಳೆಯರ ತಂಡದೊಂದಿಗೆ ನಿರ್ಗತಿಕರಿಗೆ, ಬೀದಿಯಲ್ಲಿ ಮಲಗಿದವರನ್ನು ಗುರುತಿಸಿ, ಚಳಿಗಾಲದಲ್ಲಿ ರಗ್ಗು, ಸ್ವೇಟರ್ ಕೊಡುವ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ.
Advertisement
ನಿನ್ನೆಯಷ್ಟೇ ಬಂಡೇಪಾಳ್ಯ ಠಾಣೆಯಲ್ಲಿ ಅವರ ಕನಸಿನ ಗ್ರಂಥಾಯಲ ಶುರುವಾಗಿದೆ. ಡಿಸಿಪಿ ಸಿ.ಕೆ ಬಾಬಾ, ಎಸಿಪಿ ಲಕ್ಷ್ಮಿನಾರಾಯಣ್, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಮತ್ತು ಯುವ ಉದ್ಯಮಿ ವೀರಕಪುತ್ರ ಶ್ರೀನಿವಾಸ್ ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದ್ದಾರೆ.