ಗುವಾಹಟಿ: ಇಂದು ರಾವಣನ (Ravana) ಬಗ್ಗೆ ಯಾಕೆ ಪ್ರಶ್ನೆಗಳನ್ನು ಕೇಳುತ್ತೀರಿ..?. ಇಂದು ನಾವು ರಾವಣನ ಬಗ್ಗೆ ಮಾತನಾಡಬಾರದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ವಾಗ್ದಾಳಿ ನಡೆಸಿದರು.
ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ರಾಹುಲ್ ಗಾಂಧಿಯನ್ನು (Rahul Gandhi) ಏಕೆ ಆಹ್ವಾನಿಸಲಿಲ್ಲ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದರು. ಈ ವೇಳೆ ರಾಮಾಯಣ ಉಲ್ಲೇಖದೊಂದಿಗೆ ಪ್ರತಿಕ್ರಿಯಿಸಿದ ಅವರು, ನೀವು ರಾವಣನ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ?. ಕನಿಷ್ಠ ರಾಮನ ಬಗ್ಗೆ ಇವತ್ತಾದರೂ ಮಾತನಾಡುತ್ತೀರಾ? 500 ವರ್ಷಗಳ ನಂತರ ರಾಮನ ಬಗ್ಗೆ ಮಾತನಾಡಲು ಇಂದು ಒಳ್ಳೆಯ ದಿನ. ಇಂದು ನಾವು ರಾವಣನ ಬಗ್ಗೆ ಮಾತನಾಡಬಾರದು ಎಂದರು.
Advertisement
Advertisement
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಿರಲಿಲ್ಲ. ಆದರೆ ಪಕ್ಷದ ಮುಖ್ಯಸ್ಥರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಕಾಂಗ್ರೆಸ್ (Congress) ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಆಹ್ವಾನ ಹೋಗಿದೆ. ಆದರೆ ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕ್ರಮ ಎಂದು ಕಾಂಗ್ರೆಸ್ ಹೇಳಿದ್ದು, ಅಯೋಧ್ಯೆಗೆ ತೆರಳಲು ನಿರಾಕರಿಸಿದೆ.
Advertisement
Advertisement
ಇತ್ತ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ನಾಯಕರ ನಡೆಯನ್ನು ಬಿಜೆಪಿ ಖಂಡಿಸಿದೆ. ನಾಯಕರನ್ನು ಹಿಂದೂ ವಿರೋಧಿಗಳು ಎಂದು ಕರೆದಿರುವ ಬಿಜೆಪಿ, ಅವರಿಗೆ ಜನತೆಯಿಂದಲೇ ಶಿಕ್ಷೆಯಾಗಲಿದೆ ಎಂದುಕಿಡಿಕಾರಿದೆ. ಇದನ್ನೂ ಓದಿ: ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಿದೆ: ಜೋಶಿ