ಬೆಂಗಳೂರು: ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ವಿರುದ್ಧ ಕಂಡ ಕಂಡಲ್ಲಿ ಮಾತಾಡುತ್ತಿರೋ ಯತ್ನಾಳ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ, ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ (Hartalu Halappa) ಬಿಜೆಪಿ ಹೈಕಮಾಂಡ್‌ಗೆ ಒತ್ತಾಯ ಮಾಡಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ್ ಅವರು ಪದೇ ಪದೇ ಅಧ್ಯಕ್ಷರ ಬಗ್ಗೆ ಮಾತನಾಡುತ್ತಿದ್ದಾರೆ. ಅನಗತ್ಯವಾಗಿ ಚರ್ಚೆ ಮಾಡುತ್ತಿದ್ದಾರೆ. ಕಂಡ ಕಂಡಲ್ಲಿ ಮಾತಾಡುತ್ತಾರೆ. ಯಡಿಯೂರಪ್ಪ(B S Yediyurappa) ಮಗನನ್ನ ನಾವು ಒಪ್ಪಲ್ಲ ಅಂತಾರೆ. ವಿಜಯೇಂದ್ರ ಅವರನ್ನ ಅಧ್ಯಕ್ಷ ಮಾಡೋದಾಗಿ ನಡ್ಡಾ, ಅಮಿತ್ ಶಾ, ಮೋದಿ ಅವರು ಎಲ್ಲರ ಅಭಿಪ್ರಾಯ, ಸರ್ವೆ, ಸಂಘ ಪರಿವಾರದ ಸಲಹೆ ಪಡೆದು ನೇಮಕ ಮಾಡಿದ್ದಾರೆ. ಹೈಕಮಾಂಡ್ ನೇಮಕ ಮಾಡಿರೋರ ವಿರೋಧ ಮಾಡಿದರೆ ಹೈಕಮಾಂಡ್‌ಗೆ ವಿರೋಧ ಮಾಡಿದಂತೆ ಆಗುತ್ತದೆ. ಏನಾದರು ಇದ್ದರೆ ಹೈಕಮಾಂಡ್ ಬಳಿ ಹೋಗಿ ಮಾತಾಡಲಿ. ಅದು ಬಿಟ್ಟು ಕಂಡ ಕಂಡಲ್ಲಿ ಮಾತಾಡುತ್ತಾರೆ ಇದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ – ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ
ಪಕ್ಷದಿಂದ ಉಚ್ಚಾಟನೆ ಆಗಿರೋ ಈಶ್ವರಪ್ಪ (K S Eshwarappa) ಅವರನ್ನು ಸಿಎಂ ಮಾಡುತ್ತೇನೆ ಎಂದು ಬಿಜೆಪಿಯಲ್ಲಿ ಇದ್ದು ಹೇಳುತ್ತಾರೆ. ಅಧ್ಯಕ್ಷರ ಬಗ್ಗೆ ಅವರಿಗೆ ಅಪಮಾನ ಆಗಲಿ ಎಂದು ಮಾತಾಡುತ್ತಾರೆ. ಇದರಿಂದ ಏನು ಆಗುವುದಿಲ್ಲ. ಯತ್ನಾಳ್ ತಮ್ಮ ವರ್ತನೆ ತಿದ್ದುಕೊಳ್ಳದೇ ಹೋದರೆ ನಾವು ಹೈಕಮಾಂಡ್ ನಾಯಕರಿಗೆ ದೂರು ಕೊಡುತ್ತೇವೆ ಎಂದರು. ಇದನ್ನೂ ಓದಿ: Delhi| ಕೋಟ್ಯಂತರ ಮೌಲ್ಯದ ಕೊಕೇನ್ ಪ್ರಕರಣದ ಹಿಂದೆ ಮಾಜಿ ಕಾಂಗ್ರೆಸ್ ನಾಯಕ
ವಿಜಯೇಂದ್ರಗೆ ಈಗ 49-50 ಆಸುಪಾಸು. ಯತ್ನಾಳ್ (Basangouda Patil Yatnal) ರಾಜಕೀಯಕ್ಕೆ ಬಂದಾಗ ಅವರದ್ದು 45 ವಯಸ್ಸು. ಅವತ್ತು ಹೀಗೆ ಎಲ್ಲರು ಮಾತನಾಡಿದ್ದರೆ ಹೇಗೆ. ಯತ್ನಾಳ್ ಹೀಗೆ ಮಾತನಾಡುತ್ತಿದ್ದರೆ ನಾವೇ ಹೈಕಮಾಂಡ್‌ಗೆ ದೂರು ನೀಡುತ್ತೇವೆ. ಕಟೀಲ್, ಪ್ರಮೋದ್ ಸಾವಂತ್, ಫಡ್ನವಿಸ್ ಅವರು ಚಿಕ್ಕ ವಯಸ್ಸಿನಲ್ಲಿ ಅಧ್ಯಕ್ಷರು ಆದವರು. ಅದರಲ್ಲಿ ಏನು ತಪ್ಪಿದೆ. ಯತ್ನಾಳ್ 45 ವರ್ಷಕ್ಕೆ ಮಂತ್ರಿ ಆಗಿರೋದು ಮರೆತು ಹೋದ್ರಾ? ಇವತ್ತು ವಿಜಯೇಂದ್ರ ಸಂಘಟನೆ ಮಾಡಿದ್ದಾರೆ. ಪಾದಯಾತ್ರೆ ಮಾಡಿ ಸಿಎಂ ರಾಜೀನಾಮೆ ಹಂತಕ್ಕೆ ಹೋಗಿದೆ. ವಿಜಯೇಂದ್ರ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಮಲಗಿದ್ದವನ ಮೇಲೆ ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು
ಇಡೀ ಸರ್ಕಾರವನ್ನು ತುದಿಗಾಲಲ್ಲಿ ತಂದು ನಿಲ್ಲಿಸಲಾಗಿದೆ. ಇದು ಸಂಘಟನೆ, ಪಕ್ಷದಿಂದ ಆಗಿರೋ ಕೆಲಸ. ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಯುವಕರ ಸಂಘಟನೆ ಜಾಸ್ತಿ ಆಗಿದೆ. ಇದೆಲ್ಲವನ್ನು ಹೈಕಮಾಂಡ್ ನೋಡಿದೆ. ಯತ್ನಾಳ್ ಮತ್ತು ಅವರ ಟೀಂ ಏನೇ ಇದ್ದರು ಹೈಕಮಾಂಡ್‌ಗೆ ಹೇಳಲಿ. ಅವರ ಬಳಿ ಮಾತಾಡಿ ಸರಿ ಮಾಡಿಕೊಳ್ಳಲಿ. ಕೂಡಲೇ ಇಂತಹ ಮಾತುಗಳನ್ನಾಡೋದು ನಿಲ್ಲಿಸಬೇಕು. ವಯಸ್ಸು ಅನ್ನೋದು ಅಲ್ಲ. ಸಾಮರ್ಥ್ಯ ಇಲ್ಲಿ ಇರೋದು ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ: ಅಶೋಕ್
ನಮ್ಮಲ್ಲಿ ಮೊದಲ ಬಾರಿ ಎಮ್‌ಎಲ್‌ಎ ಆದವರು ಸಿಎಂ ಆಗಿದ್ದಾರೆ. ಹೀಗೆ ರಸ್ತೆಯಲ್ಲಿ ಮಾತಾಡೋದು ಸರಿಯಲ್ಲ. ಹೀಗೆ ಆದರೆ ನಾವು ರಸ್ತೆಯಲ್ಲಿ ಅವರ ಭಾಷೆಯಲ್ಲಿ ಹೇಳುತ್ತೇವೆ. ಹೀಗೆ ಮುಂದುವರೆದರೆ ನಾವೇ ಹೈಕಮಾಂಡ್‌ಗೆ ದೂರು ಕೊಡುತ್ತೇವೆ ಎಂದರು. ಯತ್ನಾಳ್, ಕಟೀಲ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿ ಅನೇಕರ ಬಗ್ಗೆ ಯತ್ನಾಳ್ ಮಾತಾಡಿದ್ದರು. ಆಗ ಹಿರಿಯರು ಕರೆದು ಮಾತಾಡಿದ್ರು. ಈಗ ಮತ್ತೆ ಅದೇ ಆಗಿದೆ. ಈಗಲೂ ಹಿರಿಯರು ಕರೆದು ಮಾತಾಡಲಿ. ನಾವು ಹೀಗೆ ಬಂದು ಮಾತಾಡೋದು ಸರಿಯಲ್ಲ. ಆದರೆ ಅನಿವಾರ್ಯವಾಗಿ ನಾವು ಮಾತಾಡ್ತಿದ್ದೇವೆ ಎಂದರು. ಇದನ್ನೂ ಓದಿ: ಹತ್ರಾಸ್‌ನ ಸತ್ಸಂಗದಲ್ಲಿ ಕಾಲ್ತುಳಿತದಿಂದ 121 ಸಾವು ಪ್ರಕರಣ; 3,200 ಪುಟಗಳ ಈ ಚಾರ್ಜ್ ಶೀಟ್ ಸಲ್ಲಿಕೆ
ಯತ್ನಾಳ್ ಹೇಳಿಕೆ ಕಾರ್ಯಕರ್ತರಿಗೆ ಮುಜುಗರ ಆಗುತ್ತಿದೆ. ಸುಮ್ಮನೆ ಬಾಂಬ್, ಪಟಾಕಿ ಹಚ್ಚುತ್ತಾರೆ ಹೋಗುತ್ತಾರೆ. ಹೀಗೆ ಮುಂದೆ ಆಗಬಾರದು. ಅದಕ್ಕೆ ಹೈಕಮಾಂಡ್ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಯತ್ನಾಳ್ ಮತ್ತು ಜೊತೆಗಾರು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯತ್ನಾಳ್ ಕಂಡಲ್ಲಿ ಗುಂಡು ಇಡೋದು ಬೇಡ. ಅವರ ವಿರುದ್ಧ ಕ್ರಮ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ನಾನು ರಾಜೀನಾಮೆ ಕೊಡ್ತೀನಿ, ಸಿದ್ದರಾಮಯ್ಯನವರೂ ನೈತಿಕತೆ ಹೊತ್ತು ರಾಜೀನಾಮೆ ನೀಡಲಿ – ಆರ್.ಅಶೋಕ್