ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಅವರು ಡಿಕೆ ಶಿವಕುಮಾರ್ (DK Shivakumar) ಅವರಿಗೆ ಬೆಂಬಲ ಕೊಡೋದಾದ್ರೆ ಕೊಡಲಿ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಲೇವಡಿ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗೋದಾದ್ರೆ ಜೆಡಿಎಸ್ (JDS) ಶಾಸಕರು ಬೆಂಬಲ ಕೊಡೋಕೆ ರೆಡಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಬೆಂಬಲ ಕೊಡಲಿ. ಅದು ಒಳ್ಳೆಯದು ಅಲ್ಲವಾ? ಕುಮಾರಸ್ವಾಮಿ ಬೆಂಬಲ ಕೊಡುತ್ತಾರೆ ಅಂದರೆ ಒಳ್ಳೆಯದೇ. ಅವರು ಬಿಜೆಪಿ (BJP) ಜೊತೆ ಸೇರಿಕೊಂಡಿದ್ದಾರೆ. ಅಲ್ಲಿಂದ ನಮಗೆ ಬೆಂಬಲ ಕೊಡುತ್ತಾರೆ ಅಂದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಟೀಕೆ ಮಾಡೋದು ಬಿಟ್ಟು ಕೇಂದ್ರ ಸರ್ಕಾರಕ್ಕೆ ಹೇಳಿ ಬರ ಪರಿಹಾರ ಕೊಡಿಸಲಿ: ಹೆಚ್‌ಡಿಕೆ ವಿರುದ್ಧ ಪರಮೇಶ್ವರ್ ಕಿಡಿ
Advertisement
Advertisement
ಪರಮೇಶ್ವರ್ ಸಿಎಂ ಆಗೋಕೆ ಬೆಂಬಲ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇನ್ನು ಮುಂದೆ ಸಿಎಂ ವಿಚಾರವಾಗಿ ನನ್ನನ್ನು ಯಾರೂ ಪ್ರಶ್ನೆ ಕೇಳಬೇಡಿ. ಸಿಎಂ ವಿಚಾರವಾಗಿ ನಾನೇನು ಹೇಳುವುದಿಲ್ಲ. ಮುಖ್ಯಮಂತ್ರಿ ವಿಚಾರವಾಗಿ ಇನ್ನು ಮುಂದೆ ಪ್ರತಿಕ್ರಿಯೆ ಕೊಡಲ್ಲ ಎಂದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ: ಕದಲೂರು ಉದಯ್
Advertisement
Advertisement
ಡಿಕೆ ಶಿವಕುಮಾರ್‌ಗೆ ಬೆಂಬಲ ಕೊಡುವ ಮೂಲಕ ಕುಮಾರಸ್ವಾಮಿ ಒಕ್ಕಲಿಗ ಕಾರ್ಡ್ ಪ್ಲೇ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಡಿಕೆ ಶಿವಕುಮಾರ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಆದ್ದರಿಂದ ನಾನೇನು ಹೇಳುವುದಿಲ್ಲ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಜನಗಳಿಗೆ ನಾವು ಕೊಟ್ಟ ಭರವಸೆಯನ್ನು ಚಾಚು ತಪ್ಪದೆ ಈಡೇರಿಸುತ್ತಿದ್ದೇವೆ. ಜನ ಸಂತೋಷದಿಂದ ಇದ್ದಾರೆ. ನಮಗೆ ಕಾರ್ಯಕ್ರಮ ಕೊಟ್ಟರು. ಹೇಳಿದಂತೆ ನಡೆದುಕೊಂಡಿದ್ದಾರೆ ಎಂದು ಬಡ ಜನರು ಸಂತೋಷವಾಗಿ ಇದ್ದಾರೆ. ಬೇರೆಯವರ ಹೇಳಿಕೆಗಳು ಅಪ್ರಸ್ತುತ. ಬೇರೆಯವರ ಹೇಳಿಕೆ ಅಷ್ಟೇನು ಜಾಸ್ತಿ ಎಫೆಕ್ಟ್ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ತಿರುಗೇಟು ನೀಡಿದರು. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆಗೆ ತಾಳಿ, ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು – ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು