ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ನಡೆಗೆ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಒರಿಜಿನಲ್ ಅಂತ ಬೋರ್ಡ್ ಹಾಕಿಕೊಳ್ಳಲಿ. ಉಚ್ಛಾಟನೆ ಮಾಡಿಕೊಳ್ಳಲಿ ಅವರು ಫ್ರೀ ಇದ್ದಾರೆ. ಸಿಎಂ ಇಬ್ರಾಹಿಂ ಮಾತನ್ನ ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವ ಆಗತ್ಯ ಇಲ್ಲ ಎಂದರು.
Advertisement
Advertisement
ಇಬ್ರಾಹಿಂ ಅವರು ಏನು ಮಾಡುತ್ತಾರೆ ಮಾಡಲಿ. ದಯವಿಟ್ಟು ಇಂತಹ ಸಿಲ್ಲಿ ವಿಷಯವನ್ನ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಉತ್ತರ ಕೊಡುವ ವಿಷಯವಲ್ಲ. ಪಕ್ಷದ ವಿಚಾರ ನಾವು ಬಗೆಹರಿಸಿಕೊಳ್ಳುತ್ತೇವೆ, ನೀವು ಹೆಚ್ಚು ತಲೆಕಡೆಸಿಕೊಳ್ಳಬೇಡಿ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದರು. ಇದನ್ನೂ ಓದಿ: ಬೊಮ್ಮಾಯಿ ಆಸ್ಪತ್ರೆಗೆ ದಾಖಲು – ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ
Advertisement
ಇಬ್ರಾಹಿಂ ಹೇಳಿದ್ದೇನು..?: ನನ್ನದು ಒರಿಜಿನಲ್ ಜೆಡಿಎಸ್ (JDS). ನಮ್ಮದು ಜಾತ್ಯತೀತ ಜೆಡಿಎಸ್. ನಮ್ಮ ಪಕ್ಷದ ನಿರ್ಧಾರ ಮೈತ್ರಿಗೆ ಒಪ್ಪಿಗೆ ಇಲ್ಲ. ಶಾಸಕರ ಜೊತೆ ಒನ್ ಟು ಮಾತಾಡ್ತೀನಿ. ಶಾಸಕರು ನನ್ನ ಜೊತೆ ಮಾತಾಡಿದ್ದಾರೆ. ಯಾರ್ ಯಾರು ಅಂತ ಹೇಳೋದಿಲ್ಲ. ಸಮಯ ಬಂದಾಗ ಯಾರು ಯಾರು ಬರ್ತಾರೆ ಅಂತ ಗೊತ್ತಾಗುತ್ತದೆ ಎಂದು ಇಬ್ರಾಹಿಂ ಹೇಳಿದ್ದರು.
Advertisement
ನಿಮ್ಮ ನಿಲುವು ಒಪ್ಪದೇ ಹೋದರೆ ಕುಮಾರಸ್ವಾಮಿರನ್ನ ಉಚ್ಛಾಟನೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚಾಟನೆಗೆ ಕಾಲ ಪಕ್ವ ಆಗಿಲ್ಲ. ನಾನೇ ಜೆಡಿಎಸ್ ಬಿಟ್ಟು ಹೋಗ್ತೀನಿ ಅಂತಾರೆ, ಏನ್ ಮಾಡಲಿ. ನಾನು ಜೆಡಿಎಸ್ ಬಿಟ್ಟು ಹೋಗೊಲ್ಲ. ನಮ್ಮ ಮನೆ ಬಿಟ್ಟು ನಾನು ಯಾಕೆ ಹೋಗಲಿ. ನಮ್ಮ ನಿಲುವು ದೇವೇಗೌಡರಿಗೆ ತಿಳಿಸ್ತೀವಿ. ಅವರು ಒಪ್ಪದೇ ಹೋದರೆ ಏನ್ ಮಾಡ್ತೀವಿ ಅಂತ ಕಾದುನೋಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡ್ತೀರಾ ಅನ್ನೋ ಪ್ರಶ್ನೆಗೆ ವೇಯ್ಟ್ ಅಂಡ್ ಸಿ ಎಂದು ಪ್ರತಿಕ್ರಿಯಿಸಿದ್ದರು.
Web Stories