ಬೆಂಗಳೂರು: ಮೊದಲು ಬಿಜೆಪಿಯವರು (BJP) ವಿಪಕ್ಷ ನಾಯಕನನ್ನು ನೇಮಕ ಮಾಡಿಕೊಳ್ಳಲಿ. ಅದು ಬಿಟ್ಟು ಸುಮ್ಮನೆ ಕಮಿಷನ್ (Commission) ಬಗ್ಗೆ ಆರೋಪ ಮಾಡುವುದು ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮೇಲೆ 15% ಕಮಿಷನ್ ಆರೋಪ ವಿಚಾರ ಹಾಗೂ ಬಿಜೆಪಿಯಿಂದ ಸರ್ಕಾರದ ಅಭಿಯಾನ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ಎಲ್ಲಿ ಹೋಗಿ ಧ್ವನಿ ಏರಿಸಬೇಕು ಅಲ್ಲಿ ಇವರು ಮಾತನಾಡುತ್ತಿಲ್ಲ. ಕೇಂದ್ರದ ನಾಯಕರ ಬಳಿ ಹೋಗಿ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದು ಜೋರಾಗಿ ಮಾತನಾಡಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಬೇಡ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡುವಾಗ ಜಾತಿ ಬಗ್ಗೆ ಮಾಹಿತಿ ಕೇಳುತ್ತೇವೆ: ಪ್ರಿಯಾಂಕ್ ಖರ್ಗೆ
Advertisement
Advertisement
ಗುತ್ತಿಗೆದಾರರ ಸಂಘದವರು ಕಮಿಷನ್ ಕೇಳಿದ್ದಾರೆ ಎಂದು ಹೇಳಿಲ್ಲ. ಬಿಲ್ ವಿಳಂಬ ಆಗುತ್ತಿದೆ ಎಂದು ಮಾತ್ರ ಹೇಳಿದ್ದಾರೆ. ಡಿಸಿಎಂ, ಸಚಿವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಕೆಲಸ ನೋಡಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬಿಜೆಪಿಗೆ ಯಾಕೆ ಇಷ್ಟು ಆಸಕ್ತಿ? ಬಿಜೆಪಿಯವರು ಈಗಾಗಲೇ ಏನಾದರೂ ಹಣ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.1 – ರಾಜ್ಯದಲ್ಲಿ ಬಂಡೀಪುರಕ್ಕೆ ಮೊದಲ ಸ್ಥಾನ
Advertisement
ಕೆಲಸ ಆಗಿದ್ದರೆ ಸಿಎಂ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ (Congress) ಬಗ್ಗೆ ಮಾತನಾಡುವುದನ್ನು ಬಿಟ್ಟು, ಸರ್ಕಾರದ ವಿರುದ್ಧ ಮಾತನಾಡುವುದು ಬಿಟ್ಟು ವಿಪಕ್ಷ ಸ್ಥಾನ ಮಾಡಿಕೊಳ್ಳುವ ಬಗ್ಗೆ ಮಾತನಾಡಲಿ. ಕೆಂಪಣ್ಣ ಅವರು ಬಿಲ್ ವಿಳಂಬ ಎಂದು ಮಾತ್ರ ಹೇಳಿದ್ದಾರೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಟೆಂಡರ್ ಕರೆದು ಹಳೆ ಡೇಟ್‌ನಲ್ಲಿ ಬಿಲ್ ಮಾಡಿಕೊಳ್ಳುತ್ತಿದ್ದರು. ಅದನ್ನು ನಾವು ನಿಲ್ಲಿಸಿದ್ದೇವೆ. ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇಂತಹ ಕೇಸ್‌ಗಳು ಇವೆ. ಬಿಜೆಪಿಯವರು ದುಡ್ಡು ತೆಗೆದುಕೊಂಡಿದ್ದಾರೆ ಎನಿಸುತ್ತದೆ. ಅದಕ್ಕೆ ಗುತ್ತಿಗೆದಾರರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿ ವಿರುದ್ಧದ 40% ಆರೋಪ ಸತ್ಯ, ಡಿಕೆಶಿ ವಿರುದ್ಧ 15% ಕಮಿಷನ್ ಆರೋಪ ಸುಳ್ಳು: ರಾಮಲಿಂಗಾ ರೆಡ್ಡಿ
Advertisement
ಕಾಮಗಾರಿ ನೋಡಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸಿಎಂ ಮತ್ತು ಡಿಸಿಎಂ ಹೇಳಿದ್ದಾರೆ. ಬಿಜೆಪಿಗೆ ಯಾಕೆ ಇಷ್ಟು ಆತಂಕ? ಕಾಮಗಾರಿ ಆಗದೇ ಹಣ ಎತ್ತಿದ್ದು ಬಿಜೆಪಿಯವರು. ಅದಕ್ಕೆ ಈ ಆತಂಕ. ಬಿಜೆಪಿ ಅವರು ಮೊದಲು ವಿಪಕ್ಷ ಸ್ಥಾನ ನೇಮಕ ಮಾಡಲಿ. ಪ್ಲೇಯಿಂಗ್ 11ನೇ ವ್ಯಕ್ತಿಯನ್ನು ಬಿಟ್ಟು 12ನೇ ವ್ಯಕ್ತಿಯನ್ನು ವಿಪಕ್ಷ ಸ್ಥಾನ ಮಾಡಲು ಹೊರಟಿದ್ದಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಹೊಸ ರೂಪದಲ್ಲಿ ನಮ್ಮ ಕ್ಲಿನಿಕ್- ರಾತ್ರಿ 8 ಗಂಟೆವರೆಗೂ ವೈದ್ಯಕೀಯ ಸೇವೆ
Web Stories