ಬೆಂಗಳೂರು: ಕೊರೊನಾ ವೈರಸ್‍ನ ಎಫೆಕ್ಟ್ ಮಾಲ್ ಹಾಗೂ ಚಿತ್ರಮಂದಿರಗಳಿಗೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದ ಮಾಲ್ ಹಾಗೂ ಚಿತ್ರಮಂದಿರಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿವೆ.
ಸಾಮಾನ್ಯವಾಗಿ ವೀಕೆಂಡ್ ಸಮಯದಲ್ಲಿ ಸಾಕಷ್ಟು ಜನರು ಮಾಲ್ ಹಾಗೂ ಚಿತ್ರಮಂದಿರಗಳಿಗೆ ಬರುತ್ತಿದ್ದರು. ಆದರೆ ಇಂದು ಗಣನೀಯವಾಗಿ ಜನರ ಸಂಖ್ಯೆ ಕಡಿಮೆಯಿತ್ತು. ಶೀತ, ಕೆಮ್ಮು ಇರುವವರು ಬೇರೆ ಬೇರೆ ಭಾಗಗಳಿಂದ ಬರುತ್ತಾರೆ. ಈ ವೇಳೆ ಅವರಿಂದ ಶೀತ, ಕೆಮ್ಮು ಅಟ್ಯಾಕ್ ಆಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಜನ ಮಾಲ್ ಹಾಗೂ ಚಿತ್ರಮಂದಿರಗಳಿಗೆ ಬರಲು ಭಯಪಡುತ್ತಿದ್ದಾರೆ. ಹೀಗಾಗಿ ಮಾಲ್‍ಗಳಲ್ಲಿ ವ್ಯಾಪಾರ ವಹಿವಾಟಿಲ್ಲ ಹಾಗೂ ಥಿಯೇಟರ್‌ಗಳಲ್ಲಿ ಕಲೆಕ್ಷನ್ ಇಲ್ಲ.
Advertisement
Advertisement
ಗಾಂಧಿನಗರದ ಥಿಯೇಟರ್‌ಗಳಲ್ಲಂತೂ ಜನರೇ ಇರಲಿಲ್ಲ. ಸಾಮಾನ್ಯ ದಿನಗಳಿಗಿಂತ ಜನ ಕಡಿಮೆ ಇದ್ದರು. ಮಧ್ಯಾಹ್ನದ ಶೋಗೆ ಗಾಂಧಿನಗರದ ಚಿತ್ರಮಂದಿರವೊಂದರಲ್ಲಿ ಕೇವಲ 100-120 ಟಿಕೆಟ್‍ಗಳು ಮಾತ್ರ ಸೇಲಾದವು. ಮಹಾಮಾರಿ ವೈರಸ್‍ಗೆ ಹೆದರಿ ಜನ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇದರಿಂದಾಗಿ ಮಾಲ್ ಹಾಗೂ ಚಿತ್ರಮಂಗರ ಕ್ಷೇತ್ರಕ್ಕೂ ಕೂಡ ನಷ್ಟ ಉಂಟಾಗುತ್ತಿದೆ.