ಲಕ್ನೋ: ಸಾಮೂಹಿಕ ವಿವಾಹದಲ್ಲಿ 20 ವರ್ಷದ ಇಬ್ಬರು ಯುವತಿಯರು(ಸಲಿಂಗಿಗಳು) ತಮ್ಮ ಪೋಷಕರು ಹಾಗೂ ವಿವಾಹ ಆಯೋಜಕರಿಗೆ ಮೋಸ ಮಾಡಿ ಮದುವೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
20 ವರ್ಷದ ಈ ಯುವತಿಯರು 2 ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇವರ ಸಂಬಂಧದ ಬಗ್ಗೆ ಹಾಗೂ ಇವರಿಬ್ಬರು ಮದುವೆಯಾಗುತ್ತಿರುವುದು ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಹಾಗಾಗಿ ಅವರು ಈ ರೀತಿ ಮದುವೆಯಾಗುವುದ್ದಾಗಿ ನಿರ್ಧರಿಸಿದ್ದರು ಎಂದು ವರದಿಯಾಗಿದೆ.
Advertisement
Advertisement
ಏ. 6ರಂದು ಇಬ್ಬರು ಯುವತಿಯರು ಸಾಮೂಹಿಕ ಮದುವೆಯಾಗಲೂ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಅಲ್ಲದೇ ನಕಲಿ ಪೋಷಕರನ್ನು ಕೂಡ ಕರೆ ತಂದಿದ್ದರು. ಇಬ್ಬರಲ್ಲಿ ಒಬ್ಬ ಯುವತಿ ವರನ ರೀತಿ ತಯಾರಿ ನಡೆಸಿಕೊಂಡು, ಕಾರ್ತಿಕ್ ಶುಕ್ಲಾ ಎಂಬ ಹೆಸರಿನ ಆಧಾರ್ ಕಾರ್ಡ್ ಕೂಡ ಮಾಡಿಸಿದ್ದಳು.
Advertisement
Advertisement
ಮದುವೆಯಾದ ಕೆಲವು ದಿನಗಳ ನಂತರ ವಧುವಿನ ಕುಟುಂಬದವರಿಗೆ ವರ ಹೆಣ್ಣು ಎಂಬುದು ತಿಳಿಯಿತ್ತು. ಮದುವೆಯಾದ ನಂತರ ಪಕ್ಕದ ಮನೆಯವರು ಫೋಟೋಗಳನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ಮದುವೆಯಾದ ಗಂಡು ಹುಡುಗನಲ್ಲ ಎನ್ನುವ ವಿಚಾರ ತಿಳಿದಿದೆ. ಈ ವಿಚಾರ ಪ್ರಚಾರ ಪಡೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಈಗ ವೈರಲ್ ಆಗಿದೆ.
ಈ ವಿಚಾರದ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಮದುವೆಯಾದ ಬಗ್ಗೆ ಯಾವೊಂದು ಕುಟುಂಬ ದೂರು ದಾಖಲಿಸಿಲ್ಲ. ಹೀಗಾಗಿ ನಾವು ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಇಬ್ಬರು ವಯಸ್ಕರಾಗಿದ್ದು, ಅವರನ್ನು ದೂರ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.