ಬಾಗಲಕೋಟೆ: ಜಮಖಂಡಿ (Jamkhandi) ನಗರದ ಹೊರ ವಲಯದ ಬಳಿ ಚಿರತೆಯೊಂದು (Leopard) ಪ್ರತ್ಯಕ್ಷವಾಗಿ ಗ್ರಾಮಸ್ಥರಿಗೆ ಭಯ ಮೂಡಿಸಿದೆ.
ನಗರದ ಹೊರ ವಲಯದ ಕುಂಚನೂರು ರಸ್ತೆ ಬಳಿ ಗುರುವಾರ ರಾತ್ರಿ ಚಿರತೆ ಹೊಲದಿಂದ ಮತ್ತೊಂದು ಹೊಲಕ್ಕೆ ತೆರಳುವಾಗಿ, ಟ್ರ್ಯಾಕ್ಟರ್ ಚಾಲಕನ ಕಣ್ಣಿಗೆ ಬಿದ್ದಿದೆ. ಟ್ರ್ಯಾಕ್ಟರ್ ಲೈಟ್ ಬೆಳಕಿನ ಮಧ್ಯೆಯೂ ಚಿರತೆ ಮತ್ತೊಂದು ಹೊಲಕ್ಕೆ ನುಗ್ಗಿದೆ. ಇದನ್ನೂ ಓದಿ: ಸಿಂಧನೂರು | ಸರ್ಕಾರಿ ಹುದ್ದೆಗಾಗಿ ನಗರಸಭೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ
ಚಿರತೆಯನ್ನ ನೋಡಿದ ಟ್ರ್ಯಾಕ್ಟರ್ ಚಾಲಕ, ಟ್ರ್ಯಾಕ್ಟರ್ ನಿಲ್ಲಿಸಿ ಚಿರತೆಯ ವಿಡಿಯೋ ಮಾಡಿದ್ದಾರೆ. ಚಿರತೆಯ ವಿಡಿಯೋ ತುಣುಕು ಕಂಡ ಜಮಖಂಡಿ ಹಾಗೂ ಕುಂಚನೂರು ಗ್ರಾಮಸ್ಥರಿಗೆ ಭಯ ಆವರಸಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣ; ಯುನೆಸ್ಕೋದ ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ʼಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ
ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇತ್ತ ಚಿರತೆಯ ಸೆರೆಗೆ ಬಲೆ ಬೀಸಿರುವ ಅರಣ್ಯಾಧಿಕಾರಿಗಳು ಚಿರತೆಯ ಚಲನವಲನ ಗಮಿಸಲು ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.