ಹೆದ್ದಾರಿಯಲ್ಲಿ ಹೊಂಚು ಹಾಕಿ ಬೇಟೆಯಾಡಿದ ಚಿರತೆ – ವೀಡಿಯೋ ವೈರಲ್

Advertisements

ಚಾಮರಾಜನಗರ: ಚಿರತೆಯೊಂದು ವಾಹನಗಳ ಹಾರ್ನ್‍ಗೂ ಜಗ್ಗದೇ ಹೊಂಚು ಹಾಕಿ ಕೊಂಡುಕುರಿಯನ್ನು ಬೇಟೆಯಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisements

ಚಾಮರಾಜನಗರ ಸಮೀಪದ ಹೆದ್ದಾರಿಯ ಪಕ್ಕದಲ್ಲಿ ಬೆಳೆದಿದ್ದ ಕುರುಚಲು ಪೊದೆಯ ಬದಿಯಲ್ಲಿ ಕುಳಿತ ಚಿರತೆಯೊಂದು ಹೊಂಚು ಹಾಕಿ ಕಾರು ಮತ್ತಿತ್ತರೇ ವಾಹನಗಳು ಹಾರ್ನ್ ಮಾಡುತ್ತಿದ್ದರೂ ಜಗ್ಗದೇ ಕುಳಿತು ಒಂದೇ ನೆಗೆತಕ್ಕೆ ಕೊಂಡುಕುರಿಯನ್ನು ಕಚ್ಚಿ ಎಳೆದೊಯ್ಯುವ ರೋಮಾಂಚಕ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್‌

Advertisements

ದೃಶ್ಯದ ಪರಿಸರವನ್ನು ಗಮನಿಸಿದರೇ ಚಾಮರಾಜನಗರ ಸಮೀಪದ ತಮಿಳುನಾಡು ಗಡಿ ಭಾಗದ ಸತ್ತಿ ಸಮೀಪ ನಡೆದಿದೆ ಎನ್ನಲಾಗುತ್ತಿದ್ದು, ಈ ಅಪರೂಪದ ಬೇಟೆ ವೀಡಿಯೋ ಮಾತ್ರ ನೆಟ್ಟಿಗರ ಮನಗೆದ್ದು ವೈರಲ್ ಆಗುತ್ತಿದೆ. ಇದನ್ನೂ ಓದಿ: ಪವರ್ ಸ್ಟಾರ್ ಹೆಸರಲ್ಲಿ ಮಿನಿ ಸ್ಮಾರಕ ನಿರ್ಮಿಸಿದ ಹೊಸೂರು ಗ್ರಾಮಸ್ಥರು

Advertisements

Advertisements
Exit mobile version