ಚಿಕ್ಕಬಳ್ಳಾಪುರ/ಹಾವೇರಿ: ಬೆಂಗಳೂರು ಅಷ್ಟೇ ಅಲ್ಲದೆ ರಾಜಧಾನಿ ಪಕ್ಕದ ಆ ಜಿಲ್ಲೆಯಲ್ಲೂ ಚಿರತೆ ಹಾವಳಿ ಜೋರಾಗಿದೆ. ತೋಟದ ಮನೆ ಮೇಲೆ ದಾಳಿ ಮಾಡಿರೋ ಚಿರತೆ (Leopard) ಸಾಕು ನಾಯಿಯನ್ನು ಕೊಂದು ತಿಂದು ತೇಗಿ ಹೋಗಿದ್ದು ಚಿರತೆ ಭಯದಿಂದ ಜನ ಮನೆಯಿಂದ ಹೊರಬರೋಕೆ ಹೆದರುವಂತಾಗಿದೆ.
Advertisement
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕಿನ ವರಲಕೊಂಡ ಬೆಟ್ಟದ ಬುಡದಲ್ಲೇ ಮೇಡಿಮಾಕಲಪಲ್ಲಿ ಗ್ರಾಮದ ಚಂದ್ರಶೇಖರ್ ರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ ಎಂಬ ರೈತರು ತೋಟದ ಮನೆ ಮಾಡಿಕೊಂಡು ಅಲ್ಲೇ ಕೃಷಿಕಾಯಕ ಮಾಡಿಕೊಂಡು ಜೀವನ ಮಾಡ್ತಿದ್ರು. ಆದರೆ ಇದೇ ವರಲಕೊಂಡ ಬೆಟ್ಟದಲ್ಲಿರುವ ಚಿರತೆ ತೋಟದ ಮನೆ ಮೇಲೆ ದಾಳಿ ಮಾಡಿ ಸಾಕು ನಾಯಿಯನ್ನ ಕೊಂದು ಅರ್ಧಂಬರ್ದ ತಿಂದು ಹೋಗಿದೆ. ಇದ್ರಿಂದ ರೈತರ ಸೇರಿದಂತೆ ಮನೆಯಲ್ಲಿರುವ ಮಹಿಳೆಯರು ಮನೆಯಿಂದ ಹೊರಬರೋಕೆ ಹೆದರುವಂತಾಗಿದೆ. ಇದನ್ನೂ ಓದಿ: ಬೆಂಗ್ಳೂರು ಹೊರವಲಯದಲ್ಲಿ ಆಂಧ್ರ ಬಿಲ್ಡರ್‌ಗೆ ಗುಂಡೇಟು
Advertisement
Advertisement
ರೈತರು ತಮ್ಮ ತೋಟದ ಮನೆಯಲ್ಲಿ ಕುರಿ, ಕೋಳಿ, ಮೇಕೆ ಸೇರಿದಂತೆ ಹಸು ಸಾಕಾಣಿಕೆ ಮಾಡೋದರ ಜೊತೆಗೆ ಕೃಷಿ ಕಾಯಕ ಮಾಡುತ್ತಿದ್ದಾರೆ. ಇವುಗಳ ಕಾವಲಿಗೆ ಅಂತ ಎರಡು ನಾಯಿಗಳನ್ನ ಸಾಕುಕೊಂಡಿದ್ದರು. ಆದರೆ ಅದರಲ್ಲಿ ಈಗ ಒಂದು ನಾಯಿಯನ್ನ ಚಿರತೆ ಕೊಂದು ಹಾಕಿದೆ. ಇರೋ ಒಂದು ನಾಯಿ ಮೇಲೂ ಚಿರತೆ ಅದ್ಯಾವಾಗ ಅಟ್ಯಾಕ್ ಮಾಡುತ್ತೋ ಅನ್ನೋ ಭಯ ಒಂದು ಕಡೆಯಾದ್ರೆ, ಬೆಳೆಗೆ ನೀರು ಹಾಯಿಸಲು ರಸಗೊಬ್ಬರ ಸಿಂಪಡಣೆ ಮಾಡಲು ಸಹ 3-4 ಮಂದಿ ಕೈಯಲ್ಲಿ ದೊಣ್ಣೆ ಮಚ್ಚು ಹಿಡಿದು ಜೀವಭಯದಲ್ಲೇ ಕೃಷಿ ಕೆಲಸಗಳನ್ನ ಮಾಡುವಂತಾಗಿದೆ. ಇನ್ನೂ ಕುರಿ ಮೇಕೆಗಳನ್ನ ಸಹ ಬೆಟ್ಟದ ಕಡೆ ಮೇಯಲು ಕರೆದುಕೊಂಡು ಹೋಗಲು ಆಗುತ್ತಿಲ್ಲ.
Advertisement
ಹಾವೇರಿ (Havri) ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಚಿರತೆ ಹಸು ತಿಂದು ಹಾಕಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆಂಜನೇಯ ಓಲೇಕಾರ ಎಂಬವರಿಗೆ ಸೇರಿದ ಕುರಿ ಫಾರ್ಮ್‍ಗೆ ನುಗ್ಗಿ ಹಸು ತಿಂದು ಹಾಕಿದ್ರಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕೃಷಿ ಕೆಲಸಕ್ಕೆ ಹೋಗುವ ರೈತರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಚಿರತೆ ಕಾಟ ರೈತಾಪಿ ಜನರ ನಿದ್ದೆಗೆಡಿಸಿದೆ. ಇನ್ನಾದ್ರೂ ಅರಣ್ಯ ಇಲಾಖೆ ಎಚ್ಚೆತ್ತು ರೈತರಿಗೆ ಅನುಕೂಲ ಮಾಡ್ಬೇಕಿದೆ. ಇದನ್ನೂ ಓದಿ: ಬಂಟಿ ಸಜ್ದೇಹ್ ಜೊತೆ ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಡೇಟಿಂಗ್