ಹಾವೇರಿ: ಕಳೆದ ಒಂದು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನ (Leopard) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ (Forest Department) ಯಶಸ್ವಿಯಾಗಿದೆ.
ಹಾವೇರಿ (Haveri) ಜಿಲ್ಲೆ ರಟ್ಟಿಹಳ್ಳಿ (Rattihalli) ತಾಲೂಕಿನ ಕಡೂರು ಗ್ರಾಮದ ಗುಡ್ಡದ ಸಮೀಪದ ರೈತರ ಜಮೀನಿನಲ್ಲಿ ಚಿರತೆ ಸೆರೆಯಾಗಿದೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಚಿರತೆ ಕಾಣಿಸಿಕೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು. ಚಿರತೆ ಭಯದಿಂದ ಜನರು ಕೃಷಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದನ್ನೂ ಓದಿ: ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿಯ ಕೊಲೆ – ಬಳಿಕ ತಾನೂ ನೇಣಿಗೆ ಶರಣಾದ ವೃದ್ಧ
ಕಳೆದ ಒಂದು ವಾರದ ಹಿಂದೆ ತೋಟದ ಮನೆಯ ಸಿಸಿಟಿವಿಯಲ್ಲಿ ಚಿರತೆಯ ದೃಶ್ಯ ಸೆರೆಯಾಗಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಸದ್ಯ ಚಿರತೆ ಸೆರೆಯಿಂದ ಸುತ್ತಮುತ್ತಲಿನ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಕಮಿಷನರ್ ಕಚೇರಿ ಆವರಣದಲ್ಲೇ ಹಣ ದೋಚಿದ ಪೊಲೀಸಪ್ಪ – ಆರೋಪಿ ಕಾರಿನಲ್ಲಿದ್ದ 11 ಲಕ್ಷ ಕಳವು!

