ಏಕಾಏಕಿ ಚಿರತೆ ದಾಳಿ – ಕಲ್ಲು ಹೊಡೆದು ಬೈಕ್ ಸವಾರರ ಜೀವ ಉಳಿಸಿದ ಗ್ರಾಮಸ್ಥರು

Public TV
1 Min Read
Leopard 3

– ಇಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಬೈಕ್‌ನಲ್ಲಿ (Bike) ತೆರಳುತ್ತಿದ್ದವರ ಮೇಲೆ ಏಕಾಏಕಿ ಚಿರತೆ (Leopard) ದಾಳಿ ನೆಡೆಸಿದ ಪರಿಣಾಮ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಕಡೂರು (Kadur) ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಸ್ಥಳೀಯರು ಚಿರತೆಗೆ ಕಲ್ಲು ಹೊಡೆದು ಸವಾರರನ್ನು ಬಚಾವ್‌ ಮಾಡಿದ್ದಾರೆ.

ಗಾಯಾಳುಗಳನ್ನು ಗ್ರಾಮದ ಮಂಜುನಾಥ್ (59) ಮೂರ್ತಿ (60) ಎಂದು ಗುರುತಿಸಲಾಗಿದೆ. ಬೈಕ್ ಸವಾರರಿಬ್ಬರ ಕೈ, ಕಾಲಿಗೆ ಗಂಭೀರ ಗಾಯಗಳಾಗಿದೆ. ಇಬ್ಬರನ್ನೂ ಚಿಕ್ಕಮಗಳೂರು (Chikkamagaluru) ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಂಜುನಾಥ್ ಅವರ ಮೊಮ್ಮಗನನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಕಡೂರಿಗೆ ತೆರಳುವಾಗ ಚಿರತೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತಾಯಿಯನ್ನು ಕೊಂದ ಪಾಪಿಯಿಂದ ತಂದೆಯ ಮೇಲೂ ಮೃಗೀಯ ವರ್ತನೆ – ಚರ್ಮ ಸುಲಿಯುವಂತೆ ಹಲ್ಲೆ

ಸಿದ್ದರಹಳ್ಳಿ, ಮದಗದಕೆರೆ, ಎಮ್ಮೆದೊಡ್ಡಿ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನೂ ಮದಗದ ಕೆರೆ ತಪ್ಪಲಿನಲ್ಲಿ ಚಿರತೆ ಇರುವುದರಿಂದ ಪ್ರವಾಸಿಗರು ಹೋಗದಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಕಡೂರು ಅರಣ್ಯ ಇಲಾಖೆ ಹಾಗೂ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಾಯಿಗೆ ಬೆಂಕಿ – ಶವದ ಪಕ್ಕವೇ ಮಲಗಿದ್ದ ಪುತ್ರ ಅರೆಸ್ಟ್‌

Share This Article