ಕೆಲವು ದಿನಗಳ ಹಿಂದೆಯಷ್ಟೇ ಮಲಯಾಳಂ (Malayalam) ಸಿನಿಮಾ ರಂಗದ ಖ್ಯಾತ ನಟಿ ಲೆನಾ ಕುಮಾರ್ (Lena Kumar) ತಮ್ಮ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಎರಡನೇ ಮದುವೆ (Marriage) ಆಗಿರುವುದಾಗಿ ಘೋಷಣೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ನಡೆಸುತ್ತಿರುವ ಗಗನಯಾನ್ ಗೆ ಆಯ್ಕೆಯಾದ ನಾಲ್ವರ ಹೆಸರನ್ನು ಪ್ರಕಟಿಸುತ್ತಿದ್ದಂತೆಯೇ ಲೆನಾ ಕೂಡ ತಮ್ಮ ಮದುವೆ ವಿಚಾರವನ್ನು ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದರು. ಆ ಮದುವೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಗನಯಾನ್ ಗೆ ಹೊರಟಿರುವ ನಾಲ್ವರ ಪೈಕಿ ಲೆನಾ ಮದುವೆ ಆಗಿರುವ ಹುಡುಗ ಕೂಡ ಒಬ್ಬರು. ಪ್ರಶಾಂತ್ ಬಾಲಕೃಷ್ಣ ನಾಯರ್ (Prashant Balakrishna Nair) ಜೊತೆ ಜನವರಿ 17ರಂದು ಲೆನಾ ಮದುವೆ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ನಟಿಯೇ ಹೇಳಿಕೊಂಡಿದ್ದರು. ಈ ವಿಷಯವನ್ನು ಹೇಳುವುದಕ್ಕಾಗಿ ನಾನು ಈ ದಿನ ಕಾಯುತ್ತಿದ್ದೆ ಎಂದಿದ್ದರು.
ಪ್ರಶಾಂತ್ ಬಾಲಕೃಷ್ಣ ನಾಯರ್ ಗ್ರೂಪ್ ಕ್ಯಾಪ್ಟನ್ ಆಗಿ ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿ ಕೆಲಸ ಮಾಡಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಗಂಟೆಗಳ ಕಾಲ ವಿಮಾನ ಹಾರಟ ಮಾಡಿದ ಹೆಮ್ಮೆ ಅವರದ್ದು. ಯುದ್ಧ ವಿಮಾನಗಳನ್ನೂ ಹಾರಿಸಿರುವ ಪ್ರಶಾಂತ್ ಜೊತೆ ಸಾಂಪ್ರದಾಯಿಕವಾಗಿ ಲೆನಾ ಮದುವೆ ಆಗಿದ್ದಾರೆ.
View this post on Instagram
ಲೆನಾ ಮಲಯಾಳಂ ಸಿನಿಮಾ ರಂಗದ ಹೆಸರಾಂತ ನಟಿ. 2004ರಲ್ಲಿ ಅಭಿಲಾಷೆ ಎನ್ನುವವರ ಜೊತೆ ಲೆನಾ ಮದುವೆ ಆಗಿತ್ತು. ಹನ್ನೊಂದು ವರ್ಷಗಳ ನಂತರ ಈ ಮದುವೆ ಮುರಿದು ಬಿದ್ದಿತ್ತು. ಇದೀಗ ಮತ್ತೆ ಪ್ರಶಾಂತ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ನಟಿ.