ನವದೆಹಲಿ: ಲೆಜೆಂಡರಿ ಕಥಕ್ ನೃತ್ಯಗಾರ, ಪಂಡಿತ್ ಬಿರ್ಜೂ ಮಹಾರಾಜ್ ನಿಧನರಾಗಿದ್ದಾರೆ
ಪಂಡಿತ್ ಬಿರ್ಜೂ ಮಹಾರಾಜ್ (83) ನೇ ವಯಸ್ಸಿನಲ್ಲಿ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ನಿವಾಸದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪಂಡಿತ್-ಜಿ, ಮಹಾರಾಜ್-ಜಿ ಎಂದು ಅವರ ಶಿಷ್ಯರು ಮತ್ತು ಅನುಯಾಯಿಗಳು ಅವರನ್ನು ಹೀಗೆ ಪ್ರೀತಿಯಿಂದ ಕರೆಯುತ್ತಿದ್ದರು. ಭಾರತದ ಪ್ರಸಿದ್ಧ ಕಲಾವಿದರಲ್ಲಿ ಇವರು ಒಬ್ಬರಾಗಿದ್ದರು. ಇವರು ಕಲಾದೇವಿಗೆ ನೀಡಿದ ಸೇವೆ ಅಪಾರವಾಗಿದೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್
Advertisement
ಹಿನ್ನೆಲೆ: ಫೆಬ್ರವರಿ 4, 1937 ರಂದು ಪ್ರಸಿದ್ಧ ಕಥಕ್ ನೃತ್ಯ ಕುಟುಂಬದಲ್ಲಿ ಬ್ರಿಜ್ ಮೋಹನ್ ನಾಥ್ ಮಿಶ್ರಾ ಜನಿಸಿದರು. ಅವರು ತಮ್ಮ ತಂದೆಯೊಂದಿಗೆ ಬಾಲ್ಯದಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು ಮತ್ತು ಅವರ ಹದಿಹರೆಯದಲ್ಲಿ ಗುರು (ಮಹಾರಾಜ್) ಆದರು. ಬಿರ್ಜು ಮಹಾರಾಜ್ ರಾಂಪುರ ನವಾಬನ ದರ್ಬಾರ್‌ನಲ್ಲಿಯೂ ಪ್ರದರ್ಶನ ನೀಡಿದರು. ಅವರು 28 ನೇ ವಯಸ್ಸಿನಲ್ಲಿ ಅಸ್ಕರ್ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
Advertisement
Kathak maestro Pandit Birju Maharaj passes away, says his relative
(File photo) pic.twitter.com/jabPHX1cly
— ANI (@ANI) January 17, 2022
Advertisement
ಕಥಕ್ ಕೇಂದ್ರವು ಸಂಗೀತ ನಾಟಕ ಅಕಾಡೆಮಿಯ ಅಂಗಸಂಸ್ಥೆಯಾಗಿತ್ತು. ಬಿರ್ಜೂ ಮಹಾರಾಜ್ ಸಂಗೀತ ನಾಟಕ ಅಕಾಡೆಮಿಯ ಬೋಧಕವೃಂದದ ಮುಖ್ಯಸ್ಥರಾಗಿದ್ದರು. ಆಗ 1998ರಲ್ಲಿ ನಿವೃತ್ತರಾದ ನಂತರ, ತಮ್ಮದೇ ಆದ ಕಥಕ್ ಮತ್ತು ಭಾರತೀಯ ಲಲಿತ ಕಲಾ ಅಕಾಡೆಮಿ ಕಲಾಶ್ರಮ ಸಂಸ್ಥೆ ಸ್ಥಾಪಿಸಿದರು. ಇದನ್ನೂ ಓದಿ: ವಿಕೇಂಡ್ ಕರ್ಫ್ಯೂನಲ್ಲಿ ಮತ್ತೆ ಕೊತ್ತಂಬರಿ ಸೊಪ್ಪು, ಮಟನ್ ತರೋರದ್ದೇ ಕಾರುಬಾರು
Advertisement
ಸತ್ಯಜಿತ್ ರಾಯ್ ನಿರ್ದೇಶನದ ಶತರಂಜ್ ಕೆ ಖಿಲಾಡಿ ಎಂಬ ಹಿಂದಿ ಚಲನಚಿತ್ರದ ಎರಡು ನೃತ್ಯ ದೃಶ್ಯಗಳಿಗಾಗಿ ಬಿರ್ಜೂ ಮಹಾರಾಜ್ ಸಂಗೀತ ಸಂಯೋಜಿಸಿ, ಹಾಡನ್ನೂ ಹಾಡಿದರು. ನಂತರ 2002ರಲ್ಲಿ ಬಿಡುಗಡೆಯಾದ, ಶಾಹ್‍ರುಖ್ ಖಾನ್ ಅಭಿನಯದ ದೇವದಾಸ್ ಹಿಂದಿ ಚಲನಚಿತ್ರದ ಹಾಡು, ಕಾಹೇ ಛೇಡ್ ಮೊಹೆ ಹಾಡಿಗೆ ಬಿರ್ಜೂ ಮಹಾರಾಜ್ ನೃತ್ಯ ಸಂಯೋಜನೆ ಮಾಡಿದ್ದರು.