ಕಾಳಿ ದೇವಿಯನ್ನು ನಿರಂತರವಾಗಿ ಅಪಮಾನಿಸುತ್ತಿರುವ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಮೇಲೆ ಕ್ರಮಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಕೆ ಯಾವುದೇ ದೇಶದಲ್ಲಿ ಇದ್ದರೂ, ಕನಿಷ್ಠ ಅವಳ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ ಗಳನ್ನು ಡಿಲಿಟ್ ಮಾಡಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರ ಮೇಲೆ ಕ್ರಮ ತಗೆದುಕೊಳ್ಳದೇ ಇರುವ ಕಾರಣಕ್ಕಾಗಿ ಹೀಗೆ ನಿರಂತರವಾಗಿ ಅವರು ಅಪಮಾನದ ಪೋಸ್ಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮೊದಲ ಸಲ ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಆನಂತರ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಇದೀಗ ಕಾಳಿಯ ಕುರಿತಾಗಿ ಮತ್ತಷ್ಟು ಬರಹಗಳನ್ನು ಬರೆದಿದ್ದು, ಸಲಿಂಗಿಗಳನ್ನು ಕಾಳಿ ಇಷ್ಟಪಡುತ್ತಾಳೆ ಎಂದೂ, ಮತ್ತು ಹಿಂದುತ್ವವನ್ನು ನಾಶ ಮಾಡಲು ಕಾಳಿ ಬರುತ್ತಾಳೆ ಎಂದು ಟ್ವಿಟರ್ ಖಾತೆಯಲ್ಲಿ ಲೀನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
- Advertisement
- Advertisement
ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿದ್ದರೂ, ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದ್ದರೂ, ಇವರಿಗೂ ಯಾವುದೇ ಕ್ರಮ ತಗೆದುಕೊಳ್ಳದೇ ಇರುವುದಕ್ಕೆ ಹಲವರು ಹಲವು ಅನುಮಾನಗಳನ್ನು ಹೊರಹಾಕಿದ್ದಾರೆ. ಆ ಲೀನಾ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಬೇಕು ಹಾಗೂ ಕೂಡಲೇ ಸೋಷಿಯಲ್ ಮೀಡಿಯಾದಿಂದ ಅವರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.