ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ ನೀನು ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ನಿನಗೆ ಆಂತರಿಕ(ಇಂಟರ್‍ನಲ್) ಅಂಕಗಳನ್ನು ನೀಡುತ್ತೇನೆ ಎಂದು ಪ್ರಾಧ್ಯಾಪಕರೊಬ್ಬರು ಹೇಳಿದ್ದು ಈಗ ದೂರು ದಾಖಲಾಗಿದೆ.
Advertisement
ಕವಿವಿ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದಿನೇಶ್ ನಾರಾಯಣಕರ್ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ದೂರು ನೀಡಿದ್ದಾರೆ. ಮೂರನೇ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿನಿ ದಿನೇಶ್ ವಿರುದ್ಧ ಕುಲಪತಿ ಡಾ. ಪ್ರಮೋದ್ ಗಾಯಿ ಅವರಿಗೆ ಲಿಖಿತ ದೂರನ್ನು ಸಹ ನೀಡಿದ್ದಾರೆ.
Advertisement
Advertisement
ನನಗೆ ತನ್ನ ಜೊತೆ ಸಹಕರಿಸದೇ ಇದ್ರೆ ಇಂಟರನಲ್ ಅಂಕ ನೀಡಲ್ಲ. ನಿನಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್‍ನಲ್ಲಿ ಕ್ಯಾರೆಕ್ಟರ್‍ಲೆಸ್ ಎಂದು ಹಾಕುತ್ತೆನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಮೈಮುಟ್ಟಿ ಮಾತನಾಡುತ್ತಾ ನನ್ನನ್ನು ಡುಮ್ಮಿ ಎಂದು ಕರೆಯುತ್ತಾರೆ. ಹೀಗಾಗಿ ನನಗೆ ಅಭ್ಯಾಸ ಮಾಡಲು ಆಗುತ್ತಿಲ್ಲ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ವಿದ್ಯಾರ್ಥಿನಿ 2016ರ ಡಿಸೆಂಬರ್ 19ರಂದು ಕುಲಪತಿ ಅವರಿಗೆ ದೂರು ನೀಡಿದ್ದರೂ ಆಡಳಿತ ಮಂಡಳಿ ಮಾತ್ರ ಇದೂವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
Advertisement
ಈ ಕುರಿತು ಆರೋಪ ಕೇಳಿಬಂದಿರುವ ಪ್ರಾಧ್ಯಪಕ ದಿನೇಶ್ ಪ್ರತಿಕ್ರಿಯೇ ನೀಡಲು ಹಿಂಜರಿದಿದ್ದಾರೆ. ಸದ್ಯ ಕವಿವಿ ಕುಲಪತಿ ಸೋಮವಾರ ಈ ಬಗ್ಗೆ ಸ್ಪಷ್ಟೀಕರಣ ನೀಡಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟಂತಹ ಹಿರಿಯ ಅಧಿಕಾರಿಗಳು ಆರೋಪ ಕೇಳಿ ಬಂದವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.