ಉಪನ್ಯಾಸಕ ವೃತ್ತಿ ತೊರೆದು ಕುರಿ, ಕೋಳಿ ಜೊತೆಗೆ ಕೃಷಿ ಮಾಡಿದ ಬಿಎಡ್ ಪದವೀಧರ

Public TV
2 Min Read
Kolar farmer

ಕೋಲಾರ: ಆತ ಸಮಗ್ರ ಕೃಷಿಯಲ್ಲಿ ಲಾಭದಾಯಕ ಕಸುಬನ್ನಾಗಿ ಮಾಡಿಕೊಂಡ ಪದವೀಧರ. ಸ್ವಾವಲಂಬಿ ಜೀವನ ನಡೆಸಲು ಶಿಕ್ಷಕ ವೃತ್ತಿಯನ್ನ ತೊರೆದು ಕುರಿ, ಕೋಳಿ ಸಾಕಾಣಿಕೆ ಮಾಡಿ ಯಶಸ್ವಿಯಾದ ಉಪನ್ಯಾಸಕ. ಕೊರೊನಾ ಸಂಕಷ್ಟದಿಂದ ಬೇಸತ್ತ ಆಸಕ್ತಿಯಿಂದ ಮಾಡಿದರೆ ಎಲ್ಲವೂ ಸಾಧ್ಯ ಅನ್ನೋದನ್ನ ತೋರಿಸಿದ್ದಾರೆ.

ಹೀಗೆ ತನಗಿರುವ ಮೂರುವರೆ ಎಕರೆ ಜಮೀನಿನಲ್ಲಿ ವಿವಿಧ ತಳಿಯ ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿರುವ ಬಿಎಡ್ ಪದವೀಧರ, ತನ್ನ ಯಶಸ್ವಿ ಸಮಗ್ರ ಕೃಷಿ ಬಗ್ಗೆ ಇತರೆ ರೈತರಿಗೆ ಹೇಳಿಕೊಡುತ್ತಿರುವ ಉಪನ್ಯಾಸಕ, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಕೋಲಾರ ತಾಲೂಕಿನ ನೆರ್ನಹಳ್ಳಿಯ ಗ್ರೀನ್‍ವುಡ್ ಫಾರಂನಲ್ಲಿ.

Kolar farmer 4

ಗ್ರಾಮದ ಉಪನ್ಯಾಸಕ ಸುರೇಶ್ ಬಾಬು ತಮಗಿರುವ ಮೂರುವರೆ ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಬೇಸಾಯವನ್ನು ಮಾಡಿ ಸೈ ಎನಿಸಿಕೊಳ್ಳುವ ಜೊತೆಗೆ ಕಡಿಮೆ ಹಣದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ. ಸುರೇಶ್ ಬಾಬು ಈ ಹಿಂದೆ ಖಾಸಗಿ ಶಾಲೆಯಲ್ಲಿ 10 ವರ್ಷಗಳ ಕಾಲ ಮೈಸೂರು, ಬಾಗೇಪಲ್ಲಿಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

ಇವರಿಗೆ ಈ ಕೆಲಸದಲ್ಲಿ ಸಂತೃಪ್ತಿ ಸಿಗದ ಕಾರಣ ಹಾಗೂ ಕೊರೊನಾದಿಂದ ಬೇಸತ್ತು ಉದ್ಯೋಗಕ್ಕೆ ಸಲಾಂ ಹೊಡೆದು ಗ್ರಾಮದದತ್ತ ಹೆಜ್ಜೆ ಹಾಕಿದರು. ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿಯಲ್ಲಿ ನಾನಾ ರೀತಿಯ ಪ್ರಯೋಗ ಮಾಡುವ ಮೂಲಕ ಯಶಸ್ವಿ ರೈತನಾಗಿದ್ದಾನೆ. ತನಗಿರುವ 4 ಎಕರೆ ಜಮೀನಿನಲ್ಲಿ ಅರ್ಧ ಎಕರೆ ಕುರಿ ಸಾಕಾಣಿಕೆ ಶೆಡ್ ಮತ್ತು ಅದರ ಕೆಳಗೆ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ.

Kolar farmer 2

ಜೊತೆಗೆ ಪೈಟರ್ ಹುಂಜುಗಳನ್ನು ಸಾಕುತ್ತಿದ್ದು, ಕಡಿಮೆ ಆದಾಯದಲ್ಲಿ ಹೆಚ್ಚು ಲಾಭ ಮಾಡುವ ಸಮಗ್ರ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ ಮಾಜಿ ಉಪನ್ಯಾಸಕ ಕಮ್ ರೈತ ಸುರೇಶ್. ಸುರೇಶ್ ಬಾಬು ಅವರ ತಮ್ಮ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತಿರುವುದು ತಮ್ಮ ಸಹೋದರ ನರಸಿಂಹ ರೆಡ್ಡಿ. ತನ್ನ ತಮ್ಮನ ಕೃಷಿ ಅನುಭವವನ್ನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸಹೋದರರಿಬ್ಬರೆ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

Kolar farmer 1 1

ವರ್ಷಕ್ಕೆ 8 ರಿಂದ 10 ಲಕ್ಷ ಆದಾಯ ಪಡೆಯುತ್ತಿರುವ ಸುರೇಶ್ ಬಾಬು ತಮ್ಮ ಜಮೀನಿನಲ್ಲಿ ಕುರಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಪೈಟರ್ ಹುಂಜುಗಳ ಸಾಕಾಣಿಕೆ, ಮೀನು ಸಾಕಾಣಿಕೆ, ಹೆಬ್ಬೇವು, ಶ್ರೀಗಂಧ, ರಕ್ತಚಂದನ ಹೀಗೆ ಸಮಗ್ರ ಕೃಷಿ ಮೂಲಕ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಕೇವಲ ಟಗರುಗಳನ್ನು ಮಾತ್ರ ಸಾಕಾಣಿಕೆ ಮಾಡುತ್ತಿದ್ದು, ಇವುಗಳನ್ನು ಚಿತ್ರದುರ್ಗ, ಮೈಸೂರಿನ ಕಿರಗವಲ್ಲು, ಬನ್ನೂರು ಹಾಗೂ ಆಂದ್ರಪ್ರದೇಶ ಪೆನ್ನಕೊಂಡ ಗ್ರಾಮಗಳಿಂದ ತಂದು ಸಾಕಾಣಿಕೆ ಮಾಡುತ್ತಿದ್ದಾರೆ. ಇದನ್ನೂ ಓದಿ:   ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

ಕುರಿ ಮತ್ತು ಕೋಳಿಗಳಿಗೆ ಬೇಕಾಗಿರುವ ಆಹಾರವನ್ನ ಸಾವಯವ ಆಹಾರವನ್ನ ತಯಾರಿ ಮಾಡಿಕೊಂಡು ಹೆಬೇವು, ಸುಬಾಬುಲ್ಲ, ಅಜೋಲಾವನ್ನು ಇವರೇ ಬೆಳೆದುಕೊಳ್ಳವುದರಿಂದ ಮೇವಿನ ಸಮಸ್ಯೆ ಇಲ್ಲ. ಹೆಚ್ಚೇಚ್ಚು ಬೇಡಿಕೆ ಇರುವ ರಾಜ್ಯದ ಬೇರೆ ಭಾಗಗಳ ತಳಿಗಳೆ ಹೆಚ್ಚು, ಇದ್ರಿಂದ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು, ಖಾಸಗಿ ಉದ್ಯೋಗಕ್ಕಿಂತ ಭೂಮಿಯನ್ನು ನಂಬಿದರೆ ಯಾವುದೇ ಮೋಸವಿಲ್ಲ ಎನ್ನುವುದು ರೈತನ ಮಾತು.

ಒಟ್ನಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕ ವೃತ್ತಿಯನ್ನ ತೊರೆದು ರೈತ ಶ್ರದ್ದಾ ಭಕ್ತಿಯಿಂದ ಮಾಡಿದ್ರೆ ಎಲ್ಲಾ ಒಲಿಯುತ್ತೆ ಅನ್ನೋದಕ್ಕೆ ಈತನೆ ಮಾದರಿ. ಕೆಲಸ ಯಾವುದೇ ಇರಲಿ ಆಸಕ್ತಯಿಂದ ಮಾಡಿದ್ರೆ ಯಶಸ್ವಿ ಕಾಣಬಹುದು ಅನ್ನುವ ಮೂಲಕ ಈಡೀ ನಿರುದ್ಯೋಗಿ ಪದವೀಧರ ಸಮುದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ ಈ ರೈತ.

Share This Article
Leave a Comment

Leave a Reply

Your email address will not be published. Required fields are marked *