ಬೆಂಗಳೂರು: ಮಹಾ ಮಳೆಗೆ ನಲುಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಬಗ್ಗೆ ಟ್ರೋಲ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಬೆಂಗಳೂರು ಬಿಟ್ಟು ತೊಲಗಿ ಎಂಬ ಅಭಿಯಾನವನ್ನು ಶುರುಮಾಡಿದ್ದಾರೆ.
To make Bengaluru always as City of Kannadigas then the ruler of Mysuru and Karnataka Chakravarti Chikka Devaraja Odeyar brought Bengaluru for 3Lakhs from Mughals in 1687, 3Lakhs might be smaller amount today but it was very big amount then#LeaveBengaluru
ನಮ್ಮೂರು ನಮ್ಮ ಹೆಮ್ಮೆ pic.twitter.com/4ZmSsOpJk1
— Pulikeshi 609-643 (@Pulikeshi609) September 7, 2022
Advertisement
ಕೆಲದಿನಗಳಿಂದ ಬೆಂಗಳೂರಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿದೆ. ಇದರಿಂದಾಗಿ ಜನ ಜೀವನ ಕೊಂಚ ಅಸ್ತವ್ಯಸ್ತವಾಗಿದೆ. ಈ ನಡುವೆ ಬೆಂಗಳೂರಿನ ಬಗ್ಗೆ ಕೆಲಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಜನೋತ್ಸವದ ಬದಲು ಜನಸ್ಪಂದನ ಹೆಸರಲ್ಲಿ ಸಮಾವೇಶ ನಡೆಸಲು ಮುಂದಾದ ಬಿಜೆಪಿ
Advertisement
Many migrants of Bengaluru have lost loyality,which this carefully may be that will regain it.#LeaveBengaluru#GetLostMigrants #ಬೆಂಗಳೂರು_ನಮ್ಮದು #Dboss #KicchaSudeep #Appu #bengalururains #Yash pic.twitter.com/CoxdptZS2R
— ಬಬ್ರುವಾಹನ (@Par_matma) September 7, 2022
Advertisement
ಹೌದು, ಅದೆಷ್ಟೂ ಮಂದಿ ತಮ್ಮ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂಧು ನೆಲೆಸುತ್ತಾರೆ. ಆದರೆ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವರ ಹಸಿವು ನೀಗಿಸುತ್ತಿರುವ ಆಶ್ರಯತಾಣ ಬೆಂಗಳೂರಿನ ಬಗ್ಗೆ ಟ್ರೋಲ್ ಮಾಡುವ ಮೂಲಕ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಈ ಕಿಡಿಗೇಡಿಗಳ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡಿಗರು `ಬೆಂಗಳೂರು ಹೇಟರ್ಸ್ ನಗರ ಬಿಟ್ಟು ತೊಲಗಿ’ ಹಾಗೂ ಬೆಂಗಳೂರು ನಮ್ಮದು ಎಂದು ಟ್ವಿಟ್ಟರ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ.
Advertisement
These people can’t develop their own city,migrate to other cities and earn their bread and butter.#LeaveBengaluru #ಬೆಂಗಳೂರು_ನಮ್ಮದು #GetLostMigrants #Dboss #Kannada #Appu #bengalururains #KicchaSudeep #Yash pic.twitter.com/j2fG0bPoDS
— ಬಬ್ರುವಾಹನ (@Par_matma) September 7, 2022
ನೀವು ಬೆಂಗಳೂರಿಗೆ ಬಂದಿರುವುದು ಬ್ರೆಡ್ ಮತ್ತು ಬಟರ್ ತಿನ್ನಲು, ನಿಮ್ಮ ಕೆಲಸ ಮುಗಿಸಿಕೊಂಡು ಬೆಂಗಳೂರು ಬಿಟ್ಟಿ ತೊಲಗಿ. ನೀವು ತೆರಿಗೆ ಕಟ್ಟಿದರೂ ಬೆಂಗಳೂರಿನಲ್ಲಿ ಇರಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ – ಅಲ್ ಖೈದಾದ ಇಬ್ಬರು ಉಗ್ರರು ಹತ್ಯೆ
When many people regret that thay can’t stay in Bangaluru
The people leaving here are blaming bangaluru#LeaveBengaluru #ಬೆಂಗಳೂರು_ನಮ್ಮದು #GetLostMigrants pic.twitter.com/EbuU82HguP
— SHRAVANI (@mahesh_shravani) September 7, 2022
ಮತ್ತೊಂದೆಡೆ ಕ್ರಿಕೆಟ್ ಎಂ.ಎಸ್. ಧೋನಿ ಬೆಂಗಳೂರಿನ ಬಗ್ಗೆ ಮಾತನಾಡಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಬೆಂಗಳೂರಿನಲ್ಲಿ ನಿಮ್ಮೆಲ್ಲರನ್ನು ನೋಡಿ ನನಗೆ ಹೊಟ್ಟೆ ಉರಿಯುತ್ತಿದೆ. ಏಕೆಂದರೆ ಇದಕ್ಕೆ ಬೆಂಗಳೂರಿನ ವಾತಾವರಣ ಕಾರಣ ಎಂದು ಬೆಂಗಳೂರನ್ನು ಹೊಗಳಿದ್ದಾರೆ.
ಇನ್ನೊಂದೆಡೆ ಈ ಅಭಿಯಾನಕ್ಕೆ ಕೆಲ ಪರ ರಾಜ್ಯದ ಜನರು ಕೂಡ ಸಾಥ್ ನೀಡುತ್ತಿದ್ದಾರೆ. ನಾನು ಚೆನ್ನೈ ಮೂಲದ ವ್ಯಕ್ತಿ, ಬೆಂಗಳೂರು ಬಿಡಿ ಅಭಿಯಾನಕ್ಕೆ ನಾನು ಬೆಂಬಲಿಸುತ್ತೇನೆ. ಆದರೆ #ಬೆಂಗಳೂರು ನನಗೆ ಬ್ರೆಡ್ ಮತ್ತು ಬಟರ್ ನೀಡಿದೆ. ಇದು ನನ್ನ ಎರಡನೇ ಮನೆ. ಇಂದು ನಾನು ಹಿಂತಿರುಗಿಸುವ ಸಮಯ ಬಂದಿದೆ. ನಾನು ಎಂದಿಗೂ ಬೆಂಗಳೂರಿನಿಂದ ಓಡಿಹೋಗುವುದಿಲ್ಲ ಮತ್ತು ನಾನು ಅದರೊಂದಿಗೆ ನಿಲ್ಲುತ್ತೇನೆ. ಬೆಂಗಳೂರು ನನ್ನ ಊರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.