Bengaluru CityChikkaballapurDistrictsKarnatakaLatestMain Post

ಜನೋತ್ಸವದ ಬದಲು ಜನಸ್ಪಂದನ ಹೆಸರಲ್ಲಿ ಸಮಾವೇಶ ನಡೆಸಲು ಮುಂದಾದ ಬಿಜೆಪಿ

ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಿ ಜನಸ್ಪಂದನ ಹೆಸರಲ್ಲಿ ಸೆಪ್ಟೆಂಬರ್ 10 ಶನಿವಾರ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಾಳೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಬಳಿಕ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನರಾಗಿದ್ದರಿಂದಾಗಿ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 11 ಭಾನುವಾರ ನಡೆಸಲು ತೀರ್ಮಾನಿಸಿತ್ತು. ಇದೀಗ ಈ ಕಾರ್ಯಕ್ರಮಕ್ಕೆ ಜನೋತ್ಸವ ಬದಲಾಗಿ ಜನಸ್ಪಂದನ ಸಮಾವೇಶ ಎಂದು ಮರುನಾಮಕರಣ ಮಾಡಿ ಸೆಪ್ಟೆಂಬರ್ 10 ಶನಿವಾರ ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ

ಉಮೇಶ್ ಕತ್ತಿ ನಿಧನದ ನಡುವೆಯೂ ನಾಳೆ ಜನೋತ್ಸವ ಬೇಡ ಎಂಬ ಅಭಿಪ್ರಾಯವನ್ನು ಹಲವು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಹಾಗಾಗಿ ನಾಳೆ ನಡೆಯಬೇಕಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಜನಸ್ಪಂದನ ಕಾರ್ಯಕ್ರಮವೆಂದು ಮರುನಾಮಕರಣ ಮಾಡಿ ಸೆಪ್ಟೆಂಬರ್ 10 ಶನಿವಾರ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ನಡುವೆ ದಿನಾಂಕ ಬಗ್ಗೆ ಒಂದೇ ದಿನ ಎರಡೆರಡು ನಿರ್ಧಾರದಿಂದಾಗಿ ಪಕ್ಷದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಹಾವಳಿ – ಕಾಣೆಯಾಗಿದ್ದಾರೆಂದು ಸಚಿವರು, ಸಂಸದರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

ಪ್ರವೀಣ್ ನೆಟ್ಟಾರು ಹತ್ಯೆಯಾದ ಹಿನ್ನೆಲೆಯಲ್ಲಿ ಈ ಮೊದಲು ನಿಗದಿಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಜುಲೈ 28 ಹಾಗೂ ಆಗಸ್ಟ್ 28 ಎರಡು ಬಾರಿ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ. ಇದರೊಂದಿಗೆ ಜನೋತ್ಸವದ ಬದಲಾಗಿ ಜನಸ್ಪಂದನ ಎಂದು ಸಮಾವೇಶ ನಡೆಸಲು ಬಿಜೆಪಿ ತಯಾರಿ ನಡೆಸಿದೆ.

Live Tv

Leave a Reply

Your email address will not be published.

Back to top button