ಧಾರವಾಡ: ಈ ಹಿಂದೆ 1921ರಲ್ಲಿ ಒಂದು ರೂಪಾಯಿಗೆ ದೇವಸ್ಥಾನದ (Temple) ಜಾಗವನ್ನು ಭೂ ಬಾಡಿಗೆ ಮೇಲೆ 99 ವರ್ಷಗಳ ವರೆಗೆ ಲೀಸ್ (Lease) ಮೇಲೆ ಕೊಡಲಾಗಿತ್ತು. ಈಗ ಲೀಸ್ ಮುಕ್ತಾಯ ಆಗಿದ್ದು, ಜಾಗವನ್ನು ಬಿಟ್ಟು ಕೊಡುವಂತೆ ದೇವಸ್ಥಾನದ ಆಡಳಿತ ಮಂಡಳಿ ನೋಟಿಸ್ ನೀಡಿದೆ.
Advertisement
ನಗರದ ಮಧ್ಯಭಾಗದಲ್ಲಿ ಇರುವ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಒಟ್ಟು ಜಾಗ 16 ಏಕರೆ ಇದೆ. ಅದರಲ್ಲಿ 3 ಏಕರೆ 35 ಗುಂಟೆ ಜಾಗದಲ್ಲಿ ದೇವಸ್ಥಾನ ಇದ್ದರೆ, ಉಳಿದ ಆಸ್ತಿ ಲೀಸ್ ಕೊಡಲಾಗಿದೆ. ಈ ಆಸ್ತಿಯಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದರೆ, ಕೆಲವರು ವ್ಯಾಪಾರಕ್ಕಾಗಿ ಅಂಗಡಿ ಇಟ್ಟುಕೊಂಡಿದ್ದಾರೆ. ಇವರಿಗೆ 1921ರಲ್ಲಿ ಒಂದು ರೂಪಾಯಿ ಭೂ ಬಾಡಿಗೆ ಮೇಲೆ 99 ವರ್ಷಗಳ ವರೆಗೆ ಲೀಸ್ ಮೇಲೆ ಕೊಡಲಾಗಿತ್ತು. ಈಗ ಲೀಸ್ ಮುಕ್ತಾಯ ಆಗಿದೆ. ಹೀಗಾಗಿ ದೇವಸ್ಥಾನ ಆಸ್ತಿ ಕೊಡಬೇಕು ಎಂದು ನೋಟಿಸ್ ಕೊಡಲಾಗುತ್ತಿದೆ. ಇದನ್ನೂ ಓದಿ: ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ
Advertisement
Advertisement
ಸದ್ಯ ಲೀಸ್ ಪಡೆದವರು ಮನೆ ಹಾಗೂ ಕಟ್ಟಡ ಕಟ್ಟಿದ್ದರೆ. ದೇವಸ್ಥಾನದವರು ಹಿರಿಯರ ಸಮ್ಮುಖದಲ್ಲಿ ಅದರ ಬೆಲೆ ನಿಗದಿ ಮಾಡಿ ಅವರಿಗೆ ಆ ಹಣ ಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಕೆಲವರು ದೇವಸ್ಥಾನದ ಆಸ್ತಿ ನಮಗೆ ಬಿಟ್ಟು ಕೊಡಬೇಕು ಎಂದು ಹೇಳಿದ್ದಾರೆ. ಆದರೆ ದೇವಸ್ಥಾನ ಆಡಳಿತ ಮಂಡಳಿ ಇದಕ್ಕೆ ಅವಕಾಶ ಕೊಡುತ್ತಿಲ್ಲ. ಈ ಲೀಸ್ ಆಸ್ತಿ ವಾಪಸ್ ಪಡೆಯುವ ದೇವಸ್ಥಾನ, ಅದರಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ KAS ಹಾಗೂ IAS ತರಬೇತಿ ಕೊಡಬೇಕು ಎಂದಿದೆ. ಅದಕ್ಕಾಗಿ ಈ ಆಸ್ತಿ ವಾಪಸ್ ಪಡೆಯಲು ಮುಂದಾಗಿದೆ. ಅಲ್ಲದೇ ಕೆಲವು ಕಡೆ ರೂಂ ಕಟ್ಟಿ ಬಾಡಿಗೆ ಕೊಡುವ ಯೋಚನೆ ಇದೆ. ಇದರಿಂದ ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ. ಸದ್ಯ ಇನ್ನು 10 ನೋಟಿಸ್ ಕೊಡಬೇಕಿದೆ. ಅವರಿಗೆ ಕೊಟ್ಟ ಮೇಲೆ ಮುಂದಿನ ಯೋಜನೆ ಆಗಲಿದೆ ಎಂದು ತಿಳಿಸಿದೆ. ದೇವಸ್ಥಾನ ಆಡಳಿತ ಮಂಡಳಿ ಯೋಚಿಸಿದಂತೆ ಎಲ್ಲವೂ ಆದರೆ, ದೇವಸ್ಥಾನ ಆಸ್ತಿ ವಾಪಸ್ ಬರಲಿದೆ. ಇದರಿಂದ ಭೂ ಬಾಡಿಗೆ ಕೂಡಾ ಹೆಚ್ಚಾಗಲಿದ್ದು, ಅದನ್ನೇ ಬಡ ಮಕ್ಕಳ ವಿದ್ಯೆಗಾಗಿ ಈ ದೇವಸ್ಥಾನ ಬಳಸಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ