Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ

Karnataka

ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ

Public TV
Last updated: March 22, 2017 3:13 pm
Public TV
Share
3 Min Read
tangadagi br patel media
SHARE

ಬೆಂಗಳೂರು: ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ. ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ನೋಡಿ. ಆಗ ಗೊತ್ತಾಗುತ್ತದೆ ಜನರ ಸಮಸ್ಯೆ ಏನು ಅಂತ. ನಾವು ಯಾವ ಬೂಟ್, ವಾಚ್ ಬಟ್ಟೆ ಹಾಕ್ತೀವಿ ಅಂತ ಮಾಧ್ಯಮಗಳಿಗೆ ಹೇಳಬೇಕಾ? ಮಾಧ್ಯಮದವ್ರು ಏನ್ ಬೇಕಾದ್ರೂ ಮಾಡಬಹುದಾ ಎಂದು ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು. 19 ವರ್ಷ ನನ್ನ ಜತೆಗಿದ್ದ ಹೆಂಡತಿ ನನ್ನನ್ನು ಪ್ರಶ್ನೆ ಮಾಡುವಂತಹ ಸ್ಥಿತಿ ತಂದಿದ್ದು ಮಾಧ್ಯಮಗಳು. ಕುಮ್ಮಿ, ಸಿದ್ದು, ಯಡ್ಡಿ ಅಂತಾ ತೋರಿಸ್ತಾರೆ. ಕೆಲ ನ್ಯೂಸ್ ಆಂಕರ್ ಗಳನ್ನು ನೋಡಬೇಕು. ಅಯ್ಯೋ… ಎಲ್ಲರೂ ಮುಗಿ ಬೀಳ್ತಾರೆ. ಏಕ ವಚನದಲ್ಲಿ ನಮ್ಮ ಬಗ್ಗೆ ಮಾತಾಡ್ತಾರೆ ಎಂದು ಹೇಳಿದರು.

ಇವರೇನು ಬಾಹುಬಲಿಗಳಾ: ಅಳಂದದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಯಾರು ಎಲ್ಲಿ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ಟುಡಿಯೋದಲ್ಲಿ ನಾಲ್ಕು ಗೋಡೆಗಳ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದಾ? ನಾವು ಸದನದಲ್ಲಿ ತೂಕಡಿಸಿದ್ರೂ ಸುದ್ದಿ ಮಾಡ್ತಾರೆ. ನಾವು ಮನುಷ್ಯರಲ್ಲವಾ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸಲಿ. ಆದ್ರೆ ಸ್ಟುಡಿಯೋದಲ್ಲಿ ಕುಳಿತು ಮಾತಾಡೋದಕ್ಕೆ ಇವರೇನು ಬಾಹುಬಲಿಗಳಾ ಎಂದು ಪ್ರಶ್ನಿಸಿದರು.

ಮಾಧ್ಯಮದವರನ್ನು ಕಾನೂನು ಮೂಲಕ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಅವರೇ ದೂರುದಾರರು, ಅವರೇ ವಕೀಲರು ಕೊನೆಗೆ ಅವರೇ ಜಡ್ಜ್‍ಮೆಂಟ್ ಕೊಡ್ತಾರೆ ಎಂದು ಆರೋಪಿಸಿದರು.

ತೇಜೋವಧೆ ಆಗ್ತಿದೆ: ಶಾಸಕ ಸುರೇಶ್ ಗೌಡ ಮಾತನಾಡಿ, ನಮ್ಮನ್ನು ಗೂಂಡಾಗಿರಿ, ರೌಡಿ ಎಂದು ಕರೆಯುತ್ತಾರೆ. ಗೂಂಡಾಗಿರಿ ಎನ್ನುವ ಪದಕ್ಕೆ ಅರ್ಥ ಏನು ಎಂದು ಪ್ರಶ್ನಿಸಿದರು. ಈ ವೇಳೆ ತುಮಕೂರು ಟೋಲ್ ಗಲಾಟೆಯನ್ನು ಪ್ರಸ್ತಾಪಿಸಿದ ಅವರು ಮ್ಯಾನೇಜರ್‍ಗೆ ಬೈಯ್ದು ಬಂದಿದ್ದು ಸತ್ಯ. ಪಬ್ಲಿಕ್ ಟಿವಿಯವರು ನನ್ನ ಪ್ರತಿಕ್ರಿಯೆ ಕೇಳಿದ್ರು. ಆ ಬಳಿಕ ಸುದ್ದಿ ಬೇರೆ ಚಾನೆಲ್ ಗಳಲ್ಲೂ ಬಂತು. ಬೇರೆ ಚಾನೆಲ್‍ಗಳು ನನ್ನ ರೌಡಿ ಶಾಸಕ ಅಂತಾ ತೋರಿಸಿದ್ರು. ನನ್ನ ಮೇಲೆ ತೇಜೋವಧೆ ನಡೆಯುತ್ತಿದೆ ಎಂದು ಹೇಳಿದರು.

ನಮಗೂ ಗೌರವ ಇಲ್ವಾ: ಶಾಸಕ ರಾಜು ಕಾಗೆ ಮಾತನಾಡಿ, ಕಾಗೆ ಎಲ್ಲಿ ಹುಡುಕಿ ಅಂತಾ ಪದ ಬಳಸಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ಪದ ಬಳಸಿದ್ದಾರೆ. ಇವರಿಗೆ ಅಧಿಕಾರವನ್ನು ಕೊಟ್ಟವರು ಯಾರು? ನನಗೂ ಪ್ರಕರಣಕ್ಕೂ ಸಂಬಂಧವೇ ಇರಲಿಲ್ಲ. ಕರಡಿ ಹಿಡಿಯುತ್ತೀರಾ. ಹುಲಿ ಹಿಡಿಯುತ್ತೀರಾ? ಕಾಗೆ ಹಿಡಿಯೋದಕ್ಕೆ ಆಗಲ್ವಾ ಅಂತಾ ತೋರಿಸಿದ್ರು. ನಾನು ಅವತ್ತು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾಗ ನನ್ನ ಹೆಣ್ಮಕ್ಕಳು ನನ್ನ ತಡೆದ್ರು. ನಮಗೂ ಮಾನ ಮರ್ಯಾದೆ, ಗೌರವ ಇಲ್ವಾ? ಮಾಧ್ಯಮಗಳ ಮೇಲೆ ನಿಯಂತ್ರಣ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂದರು.

ನಾಚಿಕೆಯಾಗ್ಬೇಕು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾತನಾಡಿ ಮಾಧ್ಯಮದವರ ಮೇಲೆ ಕೂಡ ಸಾಕಷ್ಟು ಆರೋಪ ಗಳು ಇವೆ. ಮಾಧ್ಯಮದಲ್ಲಿ ಇರೋರು ಎಲ್ಲರೂ ಸತ್ಯ ಹರಿಶ್ಚಂದ್ರರಾ? ಆದ್ರೆ ಇದುವರೆಗೂ ಒಂದೇ ಒಂದು ಸುದ್ದಿ ಬಗ್ಗೆ ಬರೆಯೋದಿಲ್ಲ. ಈ ಹಿಂದೆ ಪೆÇಲೀಸರನ್ನು ನಂಬಬಾರದು ಅಂತ ಮಾತು ಇತ್ತು. ಈಗ ನಮ್ಮ ಜೊತೆ ಇದ್ದು, ನಮ್ಮ ಜೊತೆ ಊಟ ಮಾಡಿ, ಬೆಳಿಗ್ಗೆ ನಮ್ಮ ಬಗ್ಗೆಯೇ ಸುದ್ದಿ ಬರೆಯುತ್ತಾರೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿರಾ.ಮಾಧ್ಯಮಗಳಿಗೆ ಥೂ ನಾಚಿಕೆಯಾಗಬೇಕು ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ವೈವಾಹಿಕ ಜೀವನ ಸರಿ ಆಗುತ್ತಿತ್ತು. ಆದರೆ ದೃಶ್ಯ ಮಾಧ್ಯಮದವರೇ ಅವರ ಸಂಬಂಧ ಹಾಳು ಮಾಡಿ, ಗಂಡ ಹೆಂಡತಿ ಬೇರೆ ಬೇರೆ ಮಾಡಿದ್ದಾರೆ. ಪತ್ರಕರ್ತರ ಆಗೋಕ್ಕೆ ಒಂದು ಅರ್ಹತೆ ಹಾಗು ಅನುಭವ ನಿಗದಿ ಮಾಡಬೇಕು ಎಂದು ಅವರು ಹೇಳಿದರು.

TAGGED:electronic mediakarnatakamediasessiontargetvidhana sabhaಎಲೆಕ್ಟ್ರಾನಿಕ್ಸ್ ಮೀಡಿಯಾಬಿಆರ್ ಪಾಟೀಲ್ಮಾಧ್ಯಮವಿಧಾನಸಭೆಶಿವರಾಜ್ ತಂಗಡಗಿ
Share This Article
Facebook Whatsapp Whatsapp Telegram

Cinema news

Spandana
BBK 12 | ಬೆಂಗ್ಳೂರಿಗೆ ಬಂದಾಗ ಇರೋಕೆ ಜಾಗ ಇರಲಿಲ್ಲ – ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸ್ಪಂದನಾ
Cinema Latest Main Post TV Shows
Maalu Spandana
BBK 12: ಬಿಗ್‌ಬಾಸ್‌ ಮನೆಯಿಂದ ಮಾಳು ಔಟ್‌ – ಸ್ಪಂದನಾ ಸೇಫ್‌!
Cinema Latest Main Post TV Shows
LSD Chaitra Achar
ಸುರಾಮ್ ಮೂವೀಸ್ ನಿರ್ಮಾಣದ 4ನೇ ಚಿತ್ರ `LSD’ – ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್
Cinema Latest Sandalwood Top Stories
Vijay 3
ಮಲೇಷಿಯಾದಲ್ಲಿ ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್ – ದಾಖಲೆ ಬರೆದ ದಳಪತಿ ವಿಜಯ್ ಫ್ಯಾನ್ಸ್‌!
Cinema Latest South cinema Top Stories

You Might Also Like

01 17
Bengaluru City

ಕನ್ನಡ ಹೋರಾಟಗಾರರ ಮೇಲಿನ ಎಲ್ಲ ಕೇಸ್‌ ವಾಪಸ್‌ಗೆ ತೀರ್ಮಾನ – ಸಿದ್ದರಾಮಯ್ಯ

Public TV
By Public TV
7 hours ago
Yaduveer Wadiyar 1 1
Davanagere

ನಮ್ಮ ಪೊಲೀಸ್ರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಕೊಡ್ಬೇಕು: ಯದುವೀರ್

Public TV
By Public TV
9 hours ago
Hunsur Darode 3
Crime

ಇಬ್ಬರ ಕೈಯಲ್ಲಿ ಎರಡೆರಡು ಗನ್‌ ಇತ್ತು, ಹತ್ತೇ ನಿಮಿಷದಲ್ಲಿ ಕೈಗೆ ಸಿಕ್ಕ ಆಭರಣಗಳನ್ನ ದೋಚಿಕೊಂಡು ಹೋದ್ರು: ಜ್ಯುವೆಲರಿ ಶಾಪ್‌ ಮಾಲೀಕ ರಶೀದ್

Public TV
By Public TV
9 hours ago
Hunsur Darode
Crime

ಹುಣಸೂರು ದರೋಡೆ ಕೇಸ್‌ – ಹಿಂದಿ ಮಾತನಾಡ್ತಿದ್ದ, ಕೈಯಲ್ಲಿ ಗನ್‌ ಹಿಡಿದಿದ್ದ: ಎಸ್ಪಿ ವಿಷ್ಣುವರ್ಧನ್

Public TV
By Public TV
10 hours ago
rohit sharma and gautam gambhir
Cricket

ಗೌತಮ್ ಗಂಭೀರ್ ಕುರ್ಚಿ ಅಲುಗಾಡುತ್ತಿದೆಯೇ? – ಬಿಗ್‌ ಅಪ್‌ಡೇಟ್‌ ಕೊಟ್ಟ ಬಿಸಿಸಿಐ

Public TV
By Public TV
10 hours ago
Asif Ali Zardari
Latest

ʻಬಂಕರ್‌ಗಳಲ್ಲಿ ಅವಿತುಕೊಳ್ಳೋಣʼ – ಆಪರೇಷನ್ ಸಿಂಧೂರ ದಾಳಿಯ ಭೀಕರತೆ ನೆನಪಿಸಿಕೊಂಡ ಪಾಕ್‌ ಅಧ್ಯಕ್ಷ

Public TV
By Public TV
11 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?