ಉಡುಪಿ: ತಮಿಳುನಾಡಿನಲ್ಲಿ ಬಿಜೆಪಿ (BJP) ಆಡಳಿತವಾಗಲಿ, ಶೀಘ್ರದಲ್ಲಿ ಚುನಾವಣೆಯಾಗಲಿ ಇಲ್ಲ. ಆದರೂ ಕೇಂದ್ರದ 43 ಸಚಿವರು ಬಂದು ಹೋಗಿದ್ದಾರೆ. ಕಾಂಗ್ರೆಸ್‍ನಲ್ಲಿ (Congress) ಮಾತ್ರ ಚುನಾವಣೆ ಬಂದಾಗ ನಾಯಕರು ಕಾಣಿಸಿಕೊಳ್ಳುತ್ತಾರೆ ಎಂದು ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ (Annamalai) ವಾಗ್ದಾಳಿ ನಡೆಸಿದ್ದಾರೆ.
Advertisement
ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಮೋದಿ (Narendra Modi) ಹಾಗೂ ಅಮಿತ್ ಶಾ (Amit Shah) ಭೇಟಿ ವಿಚಾರದ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಗೆಲ್ಲುವುದು 123 ಸ್ಥಾನವಲ್ಲ ಜೆಡಿಎಸ್ ತಪ್ಪಾಗಿ ಮುಂದೆ 1 ಸೇರಿಸಿದೆ- ಜಮೀರ್ ಅಹಮ್ಮದ್ ವ್ಯಂಗ್ಯ
Advertisement
ದೇಶದಲ್ಲಿ ಜನ ಕೇಂದ್ರಿತ ಆಡಳಿತ ಇರುವ ಕಾರಣ ಕೇಂದ್ರದ ನಾಯಕರು ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇಲ್ಲದಿದ್ದರೂ ನಮ್ಮ ಪಕ್ಷದ ನಾಯಕರು ಬರುತ್ತಿದ್ದರು. ಕರ್ನಾಟಕ ದಕ್ಷಿಣ ಭಾರತದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ. ಅತಿ ಹೆಚ್ಚು ಹೂಡಿಕೆ ಡಬಲ್ ಇಂಜಿನ್ ಸರ್ಕಾರದ ಸಾಧನೆ ಎಂದಿದ್ದಾರೆ.
Advertisement
Advertisement
ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಭೇಟಿಯಾಗಲು 5ಲಕ್ಷ ರೂ ನೀಡಬೇಕು. 2014ರ ಹಿಂದೆ ಹಣಕೊಟ್ಟ ದಾಖಲೆ ಇದೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈ ಕೆಳಗೆ ಕಾರ್ಯ ನಿರ್ವಹಿಸುತ್ತಿದೆ. ಕರ್ಮವೀರ ಕಾಮರಾಜರ ಚಿತ್ರವನ್ನು ಕಾಂಗ್ರೆಸ್ ಕೈ ಬಿಟ್ಟಿದೆ. ಕುಟುಂಬ ರಾಜಕಾರಣದಲ್ಲಿ ನಿವೃತ್ತಿ ಅನ್ನೋದು ಇರುವುದಿಲ್ಲ. ಬಾಯಿ ಇರೋದು ಮಾತಾಡಲು ಸುಳ್ಳು ಹೇಳಲು ಅಲ್ಲ ಅನ್ನೋದನ್ನು ಕಾಂಗ್ರೆಸ್ ಕಲಿಯಬೇಕು ಎಂದು ಕಿಡಿಕಾರಿದ್ದಾರೆ.
ಭಾರತದ ಅಭಿವೃದ್ಧಿ ಜೊತೆ ಕರ್ನಾಟಕದ ಜನ ನಿಲುತ್ತಾರೆ. ಉಡುಪಿಯಲ್ಲಿ ಎಲ್ಲಾ ಐದು ಸ್ಥಾನಗಳನ್ನು, ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಶಿಕ್ಷಣದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಜಿಎಸ್‍ಟಿ ಸಂಗ್ರಹ ಹಾಗೂ ಉದ್ಯಮದಲ್ಲಿ ಮೊದಲ ಸ್ಥಾನದಲ್ಲಿದೆ.ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಹುನ್ನಾರ ಮಾಡಿದೆ. ಮುಂದಿನ ಎಂಪಿ ಚುನಾವಣೆಗೆ ಕರ್ನಾಟಕ ಬಜೆಟ್‍ನ 10% ಬಳಸುವ ಯೋಚನೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾ. ಜಿ. ಪರಮೇಶ್ವರ್!