ಮುಂಬೈ: ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಯ ಏಕದಿನ ನಾಯಕತ್ವದ ಆಟ ಕೊನೆಗೊಂಡಿದೆ. ಬಿಸಿಸಿಐ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ ನಾಯಕತ್ವದ ಹೊಣೆ ಹೊರಿಸಿದೆ. ಜೊತೆಗೆ ಕೊಹ್ಲಿಗೆ ಧನ್ಯವಾದ ಕೂಡ ಸಲ್ಲಿಸಿದೆ.
Advertisement
ವೈಟ್ ಬಾಲ್ ಕ್ರಿಕೆಟ್‍ನ ನಾಯಕತ್ವದಿಂದ ಕೊಹ್ಲಿ ಕೆಳಗಿಳಿದಿದ್ದಾರೆ. ವೈಟ್ ಬಾಲ್ ಕ್ರಿಕೆಟ್‍ನಲ್ಲಿ ಮಾಜಿ ನಾಯಕ ಧೋನಿ ಬಳಿಕ ಟೀಂ ಇಂಡಿಯಾವನ್ನು ಯಶಸ್ಸಿನತ್ತ ಕೊಂಡೊಯ್ದ ಕೀರ್ತಿ ಕೊಹ್ಲಿಗೆ ಸಲ್ಲುತ್ತದೆ. ಆದರೆ ಯಾವುದೇ ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ನಾಯಕತ್ವದಲ್ಲಿ ಪ್ರಶಸ್ತಿ ಜಯಿಸದೇ ಇದ್ದಿದ್ದು, ಕೊಹ್ಲಿಗೆ ಮುಳ್ಳಾಗಿದೆ. ಇದೀಗ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರನ್ನು ನೂತನ ನಾಯಕನ್ನಾಗಿ ನೇಮಿಸಿದ ಬಳಿಕ ಕೊಹ್ಲಿಗೆ ಬಿಸಿಸಿಐ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದೆ. ಇದನ್ನೂ ಓದಿ: ಏಕದಿನ ನಾಯಕತ್ವ ಬಿಟ್ಟುಕೊಡಲು ಒಪ್ಪದ ಕೊಹ್ಲಿ – ಬಲವಂತವಾಗಿ ಕೆಳಗಿಳಿಸಿದ ಬಿಸಿಸಿಐ?
Advertisement
Advertisement
ಕೊಹ್ಲಿ ಈವರೆಗೆ ಟೀಂ ಇಂಡಿಯಾವನ್ನು ನಾಯಕನಾಗಿ 95 ಪಂದ್ಯಗಳನ್ನು ಮುನ್ನಡೆಸಿದ್ದು ಅದರಲ್ಲಿ 65 ಪಂದ್ಯಗಳಲ್ಲಿ ಜಯ, 27 ಪಂದ್ಯ ಸೋಲು, 1 ಟೈ, 2 ಪಂದ್ಯ ರದ್ದು ಗೊಂಡಿತ್ತು. ಈ ಮೂಲಕ ಏಕದಿನ ಪಂದ್ಯದಲ್ಲಿ ನಾಯನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ 110 ಪಂದ್ಯಗಳಲ್ಲಿ ಜಯದೊಂದಿಗೆ ಧೋನಿ ಮೊದಲ ಸ್ಥಾನದಲ್ಲಿದ್ದರೆ, ಮೊಹಮ್ಮದ್ ಅಜರುದ್ದೀನ್ 90 ಪಂದ್ಯ ಜಯದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 76 ಪಂದ್ಯಗಳ ಜಯದೊಂದಿಗೆ ಸೌರವ್ ಗಂಗೂಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕ – ನಾಯಕತ್ವ ಕಳೆದುಕೊಂಡ ಕೊಹ್ಲಿ
Advertisement
A leader who led the side with grit, passion & determination. ????????????
Thank you Captain @imVkohli!????????#TeamIndia pic.twitter.com/gz7r6KCuWF
— BCCI (@BCCI) December 9, 2021
ವಿರಾಟ್ ಕೊಹ್ಲಿ ತಂಡದ ನಾಯಕತ್ವದ ಜೊತೆಗೆ 21 ಶತಕ ಸಹಿತ 5,449 ರನ್ ಸಿಡಿಸಿ ತಂಡಕ್ಕೆ ಕೊಡುಗೆ ನೀಡಿದ್ದರು. ಇದೀಗ ಕೊಹ್ಲಿ ನಾಯಕತ್ವಕ್ಕೆ ಕೂಕ್ ಕೊಡಲಾಗಿದ್ದು, ಈ ಮೂಲಕ ಯಶಸ್ವಿ ನಾಯಕನ ಏಕದಿನ ತಂಡದ ನಾಯಕತ್ವದ ಯುಗ ಅಂತ್ಯವಾಗಿದೆ. ಇದನ್ನೂ ಓದಿ: ತಂಡಕ್ಕೆ ಗೆಲುವಿನ ಶ್ರೇಯಸ್ಸು ದೊರೆಯಬೇಕು: ರಾಹುಲ್ ದ್ರಾವಿಡ್