ಬೆಂಗಳೂರು: ಪ್ರೆಸಿಡೆನ್ಸಿ ಕಾಲೇಜಿ (Presidency College) ನಲ್ಲಿ ಯುವತಿ ಹತ್ಯೆ ಪ್ರಕರಣ ಸಂಬಂಧ ಇದೀಗ ಪಾಗಲ್ ಪ್ರೇಮಿ ಪವನ್ ಕಲ್ಯಾಣ್ ಸ್ಫೋಟಕ ಟ್ವಿಸ್ಟ್ ಕೊಟ್ಟಿದ್ದಾನೆ.
ಲಯಸ್ಮಿತಾ (Layasmitha) ಳನ್ನು ಹತ್ಯೆ ಮಾಡಲು ನಿಜವಾದ ಕಾರಣ ಏನು ಎಂಬುದನ್ನು ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಕೂಡಲೇ ಮದುವೆಯಾಗಲು ಒಪ್ಪದೇ ಇದ್ದಿದ್ದಕ್ಕೆ ಕೊಲೆ ಮಾಡಿದೆ ಎಂದಿದ್ದು, ಪೊಲೀಸರ ಮುಂದೆ ಬಾಯ್ಬಿಟ್ಟ ಸತ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
- Advertisement3
ಪೊಲೀಸರ ಮುಂದೆ ಪವನ್ (Pawan Kalyan) ಹೇಳಿದ್ದೇನು..?: ಕಳೆದ ಒಂದೂವರೆ ವರ್ಷದಿಂದ ನಾನು ಲಯಸ್ಮಿತಾ ಪ್ರೀತಿ ಮಾಡುತ್ತಾ ಇದ್ದೆವು. ದೂರದ ಸಂಬಂಧಿಯಾಗಿದ್ದರಿಂದ ಜಾತಿಯ ಸಮಸ್ಯೆ ಇರಲಿಲ್ಲ. ಕುಟುಂಬಸ್ಥರನ್ನು ಒಪ್ಪಿಸುವ ಜವಾಬ್ದಾರಿಯನ್ನು ಲಯ ತೆಗೆದುಕೊಂಡಿದ್ದಳು. ಆದರೆ ಕಾಲೇಜಿಗೆ ಸೇರಿದ ಮೇಲೆ ಲಯಾಳ ಹಾವಭಾವ ಬದಲಾಗ್ತಾ ಇತ್ತು. ಲಯಾಳ ಬದಲಾವಣೆ ನನಗೆ ಅನುಮಾನ ಬಂದು ತಕ್ಷಣ ಮದುವೆಯಾಗೋದಕ್ಕೆ ಕೇಳಿದೆ.
- Advertisement
ಮದುವೆ (Marriage) ಅಂದ ಕೂಡಲೇ ವಿರೋಧ ಮಾಡಲು ಪ್ರಾರಂಭಿಸಿದಳು. ನಾನು ಈಗಿನ್ನೂ ಕಾಲೇಜಿಗೆ ಸೇರಿದ್ದೀನಿ, ಕಾಲೇಜು ಮುಗಿದ ಮೇಲೆ ಮದುವೆ ಆಗೋಣ ಅಂದ್ಲು. ಎರಡು ದಿನ ಮಾತನಾಡಲೇ ಇಲ್ಲ, ಡಿಸೆಂಬರ್ 31 ಮತ್ತು ಜನವರಿ 1 ರಂದು ಫೋನ್ ಪಿಕ್ ಮಾಡ್ಲೇ ಇಲ್ಲ. ನಮ್ಮಿಬ್ಬರ ವಿಚಾರ ಎಲ್ಲರಿಗೂ ಗೊತ್ತಾಗ್ಲಿ ಅಂತ ವಾಟ್ಸಪ್ ಡಿಪಿ (Whatsapp DP) ಹಾಕಿದೆ. ಆಗ ಫೋನ್ ಮಾಡಿ ಬೈಯ್ದಳು. ಬಳಿಕ ನಾನು ಕಾಲೇಜಿಗೆ ಹೋಗಲು ತೀರ್ಮಾನ ಮಾಡಿದೆ. ಲಯಾಳ ಕಾಲೇಜಿನ ಬಳಿ ಹೋಗಿ ಅವಳನ್ನು ಹೊರಗೆ ಬರಲು ಹೇಳಿದೆ. ಇದನ್ನೂ ಓದಿ: ಎಂಜಿನಿಯರಿಂಗ್ ಕಾಲೇಜಿನಲ್ಲೇ ವಿದ್ಯಾರ್ಥಿನಿಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ
ಲಯಾಳನ್ನು ಕಾಲೇಜಿನ ಹೊರಗೆ ಕರೆಸಿಕೊಂಡು ಕೂಡಲೇ ಮದುವೆ ಮಾಡಿಕೊಳ್ಳಲು ಕೇಳಿಕೊಂಡೆ. ಅವಳು ಜಗಳ ಮಾಡೋದಕ್ಕೆ ಶುರು ಮಾಡಿದಳು. ನನಗೂ ಆ ಸಂದರ್ಭದಲ್ಲಿ ಕೋಪ ಬಂತು. ನಾನು ಅಂದುಕೊಂಡಂತೆ ಅವಳನ್ನು ಕೊಲೆ ಮಾಡಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಇರಲಿಲ್ಲ. ಅವಳು ಸತ್ತ ಬಳಿಕ ನಾನು ಚಾಕುವಿನಿಂದ ಕುಯ್ದುಕೊಂಡೆ ಎಂದು ಪೊಲೀಸರ ಮುಂದೆ ಪವನ್ ತಪ್ಪೊಪ್ಪಿಕೊಂಡಿದ್ದಾನೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k