Cinema

ಏರ್‌ಪೋರ್ಟಿನಲ್ಲಿ ಕಾಣಿಸಿಕೊಂಡ ಬೆಳಗಾವಿ ಬ್ಯೂಟಿ ಲಕ್ಷ್ಮೀ ರೈ

Published

on

Share this

ಬೆಳಗಾವಿ ಮೂಲದ ನಟಿ ಲಕ್ಷ್ಮಿ ರೈ ಸ್ಯಾಂಡಲ್‍ವುಡ್ ಸೇರಿದಂತೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಲಕ್ಷ್ಮಿ ರೈ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಟಾಪ್‍ನಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಲಕ್ಷ್ಮಿ ರೈ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇದೀಗ ಅವರು ಏರ್ ಪೋರ್ಟ್ ನಲ್ಲಿ ಸಖತ್ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.

ಲಕ್ಷ್ಮಿ ರೈ 2005ರಲ್ಲಿ ತಮಿಳು ಭಾಷೆಯ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ಸ್ನೇಹನಾ ಪ್ರೀತಿನಾ ಮತ್ತು ಕಲ್ಪನಾ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಲಕ್ಷ್ಮಿ ರೈ ಅವರು ಜೂಲಿ ಚಿತ್ರದ ಮೂಲಕ ಬಾಲಿವುಡ್‍ಗೆ ಪ್ರವೇಶಿಸಿದ್ದರು.

ಖ್ಯಾತ ನಟಿ ಲಕ್ಷ್ಮೀ ರೈ ಅವರು ಝಾನ್ಸಿ ಐಪಿಎಸ್, ಆನಂದ ಭೈರವಿ, ಗ್ಯಾಂಗ್‍ಸ್ಟರ್ 21 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಈ ಸಿನಿಮಾ ಕೆಲಸಗಳು ನಡೆಯುತ್ತಿವೆ. ಇದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

ನಟಿ ರಾಯ್ ಲಕ್ಷ್ಮಿ ಸಿಂಡ್ರೆಲಾ ಎನ್ನುವ ಹಾರರ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದು, ಟ್ರೇಲರ್ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಶೂಟಿಂಗ್ ಸಲುವಾಗಿ ಅವರು ಹೈದರಾಬಾದ್‍ಗೆ ಹೋಗಿದ್ದರು. ಆ ವೇಳೆ ಏರ್ ಪೋರ್ಟ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳೂ ಕೂಡ ಲಕ್ಷ್ಮಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ನಟಿ ಕೂಡ ಅಭಿಮಾನಿಗಳಿಗೆ ಬೇಸರವಾಗದಂತೆ ಪೋಸ್ ಕೊಟ್ಟಿದ್ದಾರೆ.

ಲಕ್ಷ್ಮೀ ರೈ ಅವರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವಾಗಿ ಹೇಳಿದ್ದರು. ಆದರೆ ಅವರು ಮದುವೆಯಾಗಲು ಬಯಸುತ್ತಿರುವ ಹುಡುಗ ಯಾರು ಏನು ಮಾಡುತ್ತಿದ್ದಾರೆ ಎಂಬುದರ ಕುರಿತು ವಿಷಯ ಹೊರಬಿದ್ದಿರಲಿಲ್ಲ. ಇದನ್ನೂ ಓದಿ: ಡಿ ಗ್ಲಾಮ್ ಲುಕ್‍ನಲ್ಲಿ ಮಿಂಚು-‘ಶ್ರೀವಲ್ಲಿ’ಯಾದ ರಶ್ಮಿಕಾ

ಲಕ್ಷ್ಮೀ ರೈ ಅವರ ನಿಶ್ಚಿತಾರ್ಥ ಒಂದು ವೇಳೆ ನಡೆದಿದ್ದರೆ ಆ ಫೋಟೋ ಕೂಡ ಇನ್ನೂ ರಿವೀಲ್ ಆಗಿಲ್ಲ. ಒಟ್ಟಿನಲ್ಲಿ ಅವರ ಮದುವೆ ವಿಚಾರ ಅನುಮಾನ ಸೃಷ್ಟಿ ಮಾಡಿದೆ. ಸ್ನೇಹಾನಾ ಪ್ರೀತಿನಾ, ಕಾಂಚನಾ, ಅಟ್ಟಹಾಸ, ರಾಜಾಧಿ ರಾಜಾ, ‘ಮಾಯಾ ಮೋಹಿನಿ, ಅಕಿರ ಮುಂತಾದ ಸಿನಿಮಾಗಳಲ್ಲಿ ಲಕ್ಷ್ಮೀ ರೈ ನಟಿಸಿದ್ದಾರೆ,

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications