ಬೆಳಗಾವಿ: ‘ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ’ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ (Ramesh Jarkiholi) ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಮೈದಾನ ತಯಾರಿದೆ ಅಖಾಡಕ್ಕೆ ಧುಮುಕಿ ಎಂದು ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಆ್ಯಕ್ಟೀವ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, “ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ” ಅಖಾಡ ತೆರೆದಿದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು BJP ಹಣ, ಹೆಂಡದ ಹೊಳೆ ಹರಿಸುತ್ತಿದೆ- ಡಿಂಪಲ್ ಯಾದವ್ ಕಿಡಿ
ಎಲೆಕ್ಷನ್ ಗೆದ್ದ ಮರು ದಿನದಿಂದ ನಾನು ಎಲೆಕ್ಷನ್‍ಗೆ ತಯಾರಿ ನಡೆಸಿದ್ದೇನೆ. ಈಗ ಚುನಾವಣೆಗೆ 90 ದಿನ ಇದೆ ಅಂತಾ ತಯಾರಿ ನಡೆಸಿಲ್ಲ. ಈಗ ಬಂದು ನಾನು ಬಿಲ್ಲು, ಬಾಣ, ಬತ್ತಲಿಕೆ ಅಂತೆಲ್ಲಾ ಇಲ್ಲ. ಚುನಾವಣೆ ಗೆದ್ದ ಮಾರನೇ ನನ್ನ ದಿನವೇ ಹುಟ್ಟಿದ ದಿನವನ್ನು ನನ್ನ ಕ್ಷೇತ್ರದ ಜನರಿಗಾಗಿ ಚೇಂಜ್ ಮಾಡಿಕೊಂಡಿದ್ದೇನೆ. ನನಗೆ ಪುನರ್ಜನ್ಮ ಕೊಟ್ಟ ಕ್ಷೇತ್ರ ಅಂತಾ ಚೇಂಜ್ ಮಾಡಿಕೊಂಡಿದ್ದೇನೆ. ಜನರ ಮನಸ್ಸು ಯಾವ ರೀತಿ ಗೆಲ್ಲಬೇಕೆಂದು ಗೊತ್ತು. ನಾಲ್ಕೂವರೆ ವರ್ಷಗಳಿಂದ ಅದನ್ನೇ ಕೆಲಸದ ಮೂಲಕ ಮಾಡಿಕೊಂಡು ಬಂದಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ – ಶ್ರೀರಾಮಸೇನೆ ಆಕ್ಷೇಪ
ಗ್ರಾಮೀಣ ಕ್ಷೇತ್ರದ ಮೇಲೆ ಹಲವರು ಕಣ್ಣು ಹಾಕಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಭವಿಷ್ಯ ಅಂತೂ ನಾನು ಹೇಳಲ್ಲ. ಮುಂದೆ ನೀವೇ ನೋಡ್ತಿರಲ್ಲ ಎಲೆಕ್ಷನ್ ರಿಸಲ್ಟ್, ಇನ್ನೂ ಕಾವು ಏರಬೇಕು. ಈಗ ನಮ್ಮ ತಮ್ಮ ಹೇಳ್ತಾನೆ ಕೇಳಿ, ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.