BelgaumDistrictsKarnatakaLatestMain Post

ತಾಕತ್ ಇದ್ರೆ ಕಾಂಗ್ರೆಸ್‌ನಿಂದ ಬರುವ ಶಾಸಕರನ್ನ ತಡೆಯಿರಿ: ಸವದಿ ಸವಾಲು

ಚಿಕ್ಕೋಡಿ: ತಾಕತ್ ಇದ್ದರೆ ಕಾಂಗ್ರೆಸ್ (Congress) ಪಕ್ಷದಿಂದ ಬರುವ ಶಾಸಕರನ್ನು ತಡೆಯಿರಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ಸವಾಲು ಹಾಕಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದಲ್ಲಿ ಬಿಜೆಪಿ (BJP) ಕಾರ್ಯಕರ್ತರ ಸಮಾವೇಶ ಆಯೋಜನೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿತು. ಈ ವೇಳೆ ಮಾತನಾಡಿದ ಅವರು, ನನ್ನ ಪುತ್ರ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೂ ನಿಂತರೂ ನಾನು ಬಿಜೆಪಿ ಪರವೇ ಕಾಗವಾಡ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ನನಗೆ ದೇಶ ಹಾಗೂ ಪಕ್ಷ ಮೊದಲು ಎಂದರು. ಇದನ್ನೂ ಓದಿ: RSS ಭಯೋತ್ಪಾದಕ ಚಟುವಟಿಕೆ ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ: ಎಂಟಿಬಿ ನಾಗರಾಜ್‌

ಈ ವೇಳೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ನಾನು ಎಂದೆಂದಿಗೂ ಪಕ್ಷ ನಿಷ್ಠವಾಗಿರುತ್ತೇನೆ ಎಂದರು. ಇನ್ನೂ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಳಿನ್‍ಕುಮಾರ್ ಕಟೀಲ್ ಅವರು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಮೋದಿ ಸರ್ಕಾರದಿಂದ ಮಾತ್ರ ಕಠಿಣ ಕ್ರಮ ಸಾಧ್ಯ – NIAಗೆ ಯಶ್‍ಪಾಲ್ ಸುವರ್ಣ ಧನ್ಯವಾದ

Live Tv

Leave a Reply

Your email address will not be published. Required fields are marked *

Back to top button