DistrictsKarnatakaLatestMain PostUdupi

ಮೋದಿ ಸರ್ಕಾರದಿಂದ ಮಾತ್ರ ಕಠಿಣ ಕ್ರಮ ಸಾಧ್ಯ – NIAಗೆ ಯಶ್‍ಪಾಲ್ ಸುವರ್ಣ ಧನ್ಯವಾದ

ಉಡುಪಿ: ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್‍ಐಎ ಗೆ ಧನ್ಯವಾದ. ಎನ್‍ಐಎ (NIA) ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ. ಮಾತಾಂಧ ಶಕ್ತಿಗಳನ್ನು ದೇಶದಲ್ಲಿ ನಿಷೇಧ ಮಾಡಿರುವುದು ಸಂಭ್ರಮಿಸಬೇಕಾದ ವಿಚಾರ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ (YashPal Suvarna) ಹೇಳಿದ್ದಾರೆ.

ದೇಶದಲ್ಲಿ ಕಠಿಣ ಕ್ರಮ ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ. ನವರಾತ್ರಿ (Navratri) ಸಂದರ್ಭ ದೇಶಕ್ಕೆ ಶುಭಸುದ್ದಿ ಕೊಟ್ಟ ಅಮಿತ್ ಶಾ (AmitShah) ಗೆ ಅಭಿನಂದನೆ ಎಂದು ಉಡುಪಿ (Udupi) ಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು ಹೇಳಿದರು. ನವರಾತ್ರಿ ಸಂದರ್ಭ ದೇಶದ್ರೋಹಿಗಳನ್ನು ಮಟ್ಟ ಹಾಕುವ ನಿರ್ಧಾರ ಮಾಡಲಾಗಿದೆ. ಇದು ಇಡೀ ದೇಶದ ಜನ ಸಿಹಿ ಹಂಚುವ ಕ್ಷಣ ಎಂದರು.

ಎನ್ ಐಎ ತನಿಖೆ ಸಂದರ್ಭ ಹಲವಾರು ವಿಚಾರ ಬೆಳಕಿಗೆ ಬಂದಿದೆ. ಕರಾವಳಿ ಭಾಗದಲ್ಲಿ ಇಂತಹ ಚಟುವಟಿಕೆಗಳು ಯಾವ ಮಟ್ಟದಲ್ಲಿ ನಡೆಯುತ್ತದೆ ಎಂಬ ಬಗ್ಗೆ ಕೂಡ ಮಾಹಿತಿಗಳನ್ನ ಅಧಿಕಾರಿಗಳು ಕಲೆಹಾಕಿದ್ದಾರೆ. ಸ್ಲೀಪರ್ ಸೆಲ್ ರೀತಿಯ ಅಡಗುದಾಣಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆ. ಹಿಜಬ್‍ನ ಬೆನ್ನೆಲುಬು ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಕರಾವಳಿ ಭಾಗ ಶಾಂತಿಯುತವಾಗಿರಲು ಎನ್‍ಐಎಗೆ ಬೆಂಬಲಿಸುತ್ತೇವೆ. ಅಮಿತ್ ಶಾ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ ಎಂದು ಹೇಳಿದರು. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಪಿಎಫ್‍ಐ (PFI) ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ, ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಸರ್ಕಾರ 150 ಜನರ ಕೇಸು ವಾಪಸ್ ತೆಗೆದಿತ್ತು. ಇದನ್ನೂ ಓದಿ: ಪಿಎಫ್‌ಐ ಬ್ಯಾನ್ – ರಾಷ್ಟ್ರೀಯ ಸುರಕ್ಷತೆ ನಮ್ಮ ಸರ್ಕಾರದ ಮೊದಲ ಆದ್ಯತೆ: ಪ್ರಹ್ಲಾದ್ ಜೋಶಿ

ಎಸ್ ಡಿಪಿಐ ಒಂದು ರಾಜಕೀಯ ಪಕ್ಷ ಆಗಿರುವ ಕಾರಣ ಕಾನೂನು ಬಾಹಿರ ಚಟುವಟಿಕೆ ಮಾಡುವ ಸಂಘನೆಗಳನ್ನು ಬ್ಯಾನ್ ಮಾಡಲಾಗಿದೆ. ಪಿಎಫ್‍ಐ ದೇಶದ ಪರ, ಸಮಾಜದ ಉದ್ಧಾರಕ್ಕೆ ಎಂದೂ ಕೆಲಸ ಮಾಡಿಲ್ಲ. ಗಲಭೆ ಸೃಷ್ಟಿಸೋದೇ ಪಿಎಫ್‍ಐ ಕೆಲಸವಾಗಿತ್ತು. ದೇಶವಿರೋಧಿ ಚಟುವಟಿಕೆಯಲ್ಲಿ SDPI ಶಾಮೀಲಾಗಿದ್ದರೆ ಕೇಂದ್ರ ಬ್ಯಾನ್ ಮಾಡಲಿದೆ ಎಂದು ಯಶ್ ಪಾಲ್ ಹೇಳಿದರು.

Live Tv

Leave a Reply

Your email address will not be published. Required fields are marked *

Back to top button