ಮೊಹಮ್ಮದ್ ನಲಪಾಡ್ ಸೆರೆವಾಸ ಅಂತ್ಯ – ವಕೀಲ ಶ್ಯಾಮ್ ಸುಂದರ್ ಹೇಳಿದ್ದು ಹೀಗೆ

Public TV
2 Min Read
NALPAD SHYAM

ಬೆಂಗಳೂರು: ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಇಂದು ಮೊಹಮ್ಮದ್ ನಲಪಾಡ್ ಅವರಿಗೆ ಜಾಮೀನು ನೀಡಿ ಹೈಕೋರ್ಟ್ ಆದೇಶ ಮಾಡಿದೆ. ಹೀಗಾಗಿ ನ್ಯಾಯಾಲಯದ ಆದೇಶವನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ ಅಂತ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಮೀನಿನ ಬಳಿಕ ನಲಪಾಡ್ ಗೆ ಹೈಕೋರ್ಟ್ ಕೆಲವೊಂದು ಷರತ್ತುಗಳನ್ನು ಹಾಕಿದೆ. ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ತನಿಖೆಗೆ ಸಹಕರಿಸಬೇಕು. ಅಲ್ಲದೇ ವಿಚಾರಣೆಗೆ ಕರೆದಾಗಲೆಲ್ಲಾ ಬರಬೇಕು. ಅಧೀನ ನ್ಯಾಯಾಲಯ ನೀಡುವ ಷರತ್ತಿಗೂ ಬದ್ಧವಾಗಿರಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಮೈಕಲ್ ಡಿ.ಕುನ್ಹಾ ಆದೇಶ ನೀಡಿದ್ದಾರೆ ಅಂದ್ರು.

ಹಿರಿಯ ವಕೀಲ ಬಿವಿ ಆಚಾರ್ಯ ಅವರು ವಾದ ಮಂಡಿಸಿದ್ದಾರೆ. ಈಗಾಗಲೇ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸರಿ ಸುಮಾರು 3 ತಿಂಗಳಿನಿಂದ ನಲಪಾಡ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಜಾರ್ಜ್ ಶೀಟ್ ಸಲ್ಲಿಕೆಯಾಗಿರೋದ್ರಿಂದ ಇದೊಂದು ಬದಲಾಯಿತ ಸಂದರ್ಭ ಅಂತ ಪರಿಗಣಿಸಬಹುದು ಅಂತ ತಿಳಿಸಿದ್ರು.

ಒಟ್ಟಿನಲ್ಲಿ ಜಾರ್ಜ್ ಶೀಟ್ ಸಲ್ಲಿಕೆಯಾಗಿರೋದ್ರಿಂದ ಇನ್ನು ಅವರನ್ನು ಜೈಲಿನಲ್ಲಿರಿಸಿ ಶಿಕ್ಷೆಯ ರೂಪದಲ್ಲಿ ನ್ಯಾಯಾಂಗ ಬಂಧನ ಆಗಬಾರದು ಎನ್ನುವ ರೀತಿಯಲ್ಲಿ ವಾದಮಂಡಿಸಿ ಕೆಲ ಷರತ್ತುಗಳನ್ನು ವಿಧಿಸಿ ಅವರಿಗೆ ಜಾಮೀನು ನೀಡಿ ಅನ್ನೋ ವಾದವನ್ನು ಮುಂದಿಟ್ಟಿದ್ದರು ಎಂದು ವಿವರಿಸಿದರು.

ನಾವು ಕೂಡ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ, ಈ ಹಿಂದೆ ನಿಕಟ ಪೂರ್ವದಲ್ಲಿ ಮೂರು ಬಾರಿ ಅವರು ಜಾಮೀನು ಅರ್ಜಿ ತಿರಸ್ಕೃತವಾಗುವುದಕ್ಕೆ ಬಹಳ ವಿದ್ಯುಕ್ತವಾದ ಕಾರಣಗಳಿವೆ. ಜಾರ್ಜ್ ಶೀಟ್ ನಲ್ಲಿ ಕೂಡ ಅವರ ವಿರುದ್ಧದ ಕೇಸ್ ಬಲಗೊಂಡಿದೆ. ಹಾಗಾಗಿ ಇವರು ಸಾಕ್ಷಿ ನಾಶ ಮಾಡ್ತಾರೆಂಬ ಭಯ ಹಾಗೂ ಹಲವಾರು ಪ್ರತ್ಯಕ್ಷದರ್ಶಿ ಸಾಕ್ಷಿಗಳಿರುವುದರಿಂದ ಜಾಮೀನನ್ನು ಮತ್ತೆ ತಿರಸ್ಕೃತಗೊಳಿಸಿ ಅಂತ ವಿನಂತಿಸಿಕೊಳ್ಳುವುದಾಗಿ ಅವರು ಹೇಳಿದ್ರು.

NALPAD

ಏನಿದು ಪ್ರಕರಣ?
ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಕೊಟ್ಟಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿತ್ತು?
ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.

Share This Article
Leave a Comment

Leave a Reply

Your email address will not be published. Required fields are marked *