CrimeLatestMain PostNational

ಮದುವೆಯಲ್ಲಿ ಸ್ನೇಹಿತರಿಂದ ಥಳಿತಕ್ಕೊಳಗಾದ ವಕೀಲ- ಮನನೊಂದು ಆತ್ಮಹತ್ಯೆ

Advertisements

ಲಕ್ನೋ: ಮದುವೆಯೊಂದರಲ್ಲಿ ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಥಳಿತಕ್ಕೊಳಗಾದ ವಕೀಲನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಆಶಿಶ್ ತ್ಯಾಗಿ(27) ಆತ್ಮಹತ್ಯೆಗೆ ಶರಣಾದ ವಕೀಲ. ಗಾಜಿಯಾಬಾದ್‍ನ ಜಿಲ್ಲಾ ನ್ಯಾಯಾಲಯದಲ್ಲಿ ಅಭ್ಯಾಸ ನಡೆಸುತ್ತಿದ್ದ ಆಶಿಶ್ ತ್ಯಾಗಿ ಮನೆಯಲ್ಲಿ ಒಬ್ಬರೇ ಇದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆತನ ತಂದೆ ಮತ್ತು ಸಹೋದರಿ ಊರಿಗೆ ಹೋಗಿದ್ದರು.

ಮದುವೆ ಸಮಾರಂಭದಲ್ಲಿ ಆಶೀಶ್ ಹಾಗೂ ಆತನ ಸ್ನೇಹಿತರ ನಡುವೆ ವಾಗ್ವಾದ ಮಿತಿಮೀರಿದ್ದು, ಆತನ ಸ್ನೇಹಿತರು ಆಶಿಶ್‍ನನ್ನು ಥಳಿಸಿ ಅವನ ಬಳಿ ಇದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಆನಂತರ ಆತನ ಸ್ನೇಹಿತರೇ ಅವನನ್ನು ಮನೆಗೆ ಬಿಟ್ಟು ಹೋಗಿದ್ದಾರೆ. ಇದರಿಂದ ಮನನೊಂದ ಆಶಿಶ್ ಸ್ನೇಹಿತನಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಆಶಿಶ್ ತಂದೆ ರಾಕೇಶ್ ತ್ಯಾಗಿ ಮಾತನಾಡಿ, ಊರಿನಿಂದ ಬಂದ ನಂತರ ಹಲವು ಬಾರಿ ಬಾಗಿಲನ್ನು ಬಡಿದ್ದೆವು. ಆದರೆ ಯಾರೂ ಬಾಗಿಲನ್ನು ತೆರೆಯಲಿಲ್ಲ. ಇದರಿಂದಾಗಿ ಮನೆಯ ಕಿಡಿಕಿಯನ್ನು ಒಡೆದಾಗ ಆಶೀಶ್ ಮಲಗಿದ್ದ ಹಾಸಿಗೆ ರಕ್ತಸಿಕ್ತವಾಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ತಲೆಗೆ ಗುಂಡು ತಗುಲಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದರು. ಇದನ್ನೂ ಓದಿ: ಮೂಲ ಕಾಂಗ್ರೆಸ್ಸಿಗರಿಗೆ ಚಾಕರಿ ಮಾಡುವ ಸುಯೋಗ ಸಿದ್ದರಾಮಯ್ಯಗೆ ಬಂದಿದೆ – ಕಾಲೆಳೆದ ಬಿಜೆಪಿ

POLICE JEEP

ಅಷ್ಟೇ ಅಲ್ಲದೇ ಆಶಿಶ್ ಮದುವೆಯೊಂದರಲ್ಲಿ ನಡೆದ ಗಲಾಟೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಆಶಿಶ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾವು ಎಲ್ಲಾ ರೀತಿಯ ತನಿಖೆಯನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರೆಷ್ಟು ದಿನ ಕೆಲಸ ಮಾಡ್ತಾರೆ, ನೀವೇ ಅಂಗಡಿಗಳಲ್ಲಿ ಪಿಸ್ತೂಲ್ ಇಟ್ಟುಕೊಳ್ಳಿ – ವಿಕ್ರಮ್ ಸೈನಿ ವಿವಾದತ್ಮಕ ಹೇಳಿಕೆ

Live Tv

Leave a Reply

Your email address will not be published.

Back to top button