ಬೆಂಗಳೂರು: ನೈಸ್ ರಸ್ತೆಯಲ್ಲಿ ವಕೀಲ ಜಗದೀಶ್ ಅವರ ರಕ್ತಸಿಕ್ತ ದೇಹ ಬಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಲಾಯರ್ ಜಗದೀಶ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೈಸ್ ರೋಡ್‌ನಲ್ಲಿ ರಕ್ತಸಿಕ್ತವಾಗಿ ದೇಹ ಬಿದ್ದಿದೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಮೀನು ವ್ಯಾಪಾರಿಯ ಹತ್ಯೆಗೆ ಯತ್ನ – ಹಿಂದೂ ಮಹಿಳೆಯ ಸಮಯಪ್ರಜ್ಞೆಯಿಂದ ಬಚಾವ್
ಘಟನೆ ಸಂಬಂಧ ಸಂಬಂಧಿಕರಿಂದ ಕೊಲೆ ಪ್ರಕರಣ ದಾಖಲಾಗಿದೆ. ವಕೀಲ ಜಗದೀಶ್ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಜಗದೀಶ್ ಬಿದ್ದಿರುವ ಸ್ಥಳದಿಂದ 200 ಮೀಟರ್ ದೂರದಲ್ಲಿ ಅವರ ಕಾರು ಪತ್ತೆ ಆಗಿದೆ.
ಕಾರು ಹಿಂದೆ ಮುಂದೆ ನಜ್ಜುಗುಜ್ಜಾಗಿದೆ. ಹಾಗಾಗಿ, ಜಗದೀಶ್ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದ್ದು, ಕೆಂಗೇರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲವ್ವರ್ ಜೊತೆ ಸಿಕ್ಕಿಬಿದ್ದ ಪತ್ನಿ – ಸಿಟ್ಟಿಗೆದ್ದ ಪತಿಯಿಂದ ಡಬಲ್ ಮರ್ಡರ್