ಬೆಂಗಳೂರು: ಅಂಬಿಡೆಂಟ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು ಶನಿವಾರ ತಮ್ಮ ವಕೀಲರ ಜೊತೆ ಬಂದು ಸಿಸಿಬಿ ಎದುರು ಹಾಜರಾಗಿದ್ದರು. ಈ ಬೆನ್ನಲ್ಲೇ ಇದೀಗ ವಕೀಲ ಚಂದ್ರಶೇಖರ್ ಅವರು ರೆಡ್ಡಿ ಬಳಿ ಕ್ಷಮೆ ಕೇಳಿದ್ದಾರೆ.
Advertisement
ಹಿರಿಯ ಪೊಲೀಸ್ ಅಧಿಕಾರಿಗಳ ಮಾತು ನಂಬಿ ರೆಡ್ಡಿ ಕೆಟ್ಟು ಹೋದ್ರಂತೆ. ಯಾಕಂದ್ರೆ ವಿಚಾರಣೆಗೆ ಹಾಜರಾಗಿ, ಬಂಧಿಸಲ್ಲ ಎಂಬ ಆಶ್ವಾಸನೆ ಮೇರೆಗೆ ರೆಡ್ಡಿ ಬಂದಿದ್ದಾರಂತೆ. ಆದರೆ ವಿಚಾರಣೆ ಸದರ್ಭದಲ್ಲಿ ಆಗಿದ್ದೇ ಬೇರೆ. ತಡರಾತ್ರಿವರೆಗೂ ಸುದೀರ್ಘ ವಿಚಾರಣೆ ನಡೆದಿದೆ. ಇದರಿಂದ ಬೇಸತ್ತ ರೆಡ್ಡಿ ಅವರಿಗೆ ಪಶ್ಚಾತಾಪವಾಗಿದೆಯಂತೆ.
Advertisement
Advertisement
ಈ ರೀತಿ ಮಾಡ್ತಾರೆ ಅನ್ನೋದು ಗೊತ್ತಿದ್ರೆ ಬೇಲ್ ತೆಗೆದುಕೊಂಡೆ ವಿಚಾರಣೆಗೆ ಬರುತ್ತಿದ್ದೆ ಅಂತ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ರೆಡ್ಡಿಯ ಈ ಮಾತಿನಿಂದ ತಾನೂ ಬೇಸರಗೊಂಡ ವಕೀಲ ಚಂದ್ರಶೇಖರ್ ಕೂಡಲೇ ರೆಡ್ಡಿ ಬಳಿ ಕ್ಷಮೆ ಕೇಳಿದ್ದಾರೆ ಅಂತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.
Advertisement
ವಿಚಾರಣೆಗೆ ಕರೆತಂದು ತಪ್ಪು ಮಾಡಿದೆ ಎಂದು ವಕೀಲರು ರೆಡ್ಡಿ ಬಳಿ ತಮ್ಮ ಅಲವತ್ತುಕೊಂಡಿದ್ದಾರೆ. ವಿಚಾರಣೆ ನೆಪದಲ್ಲಿ ಹಿಂಸೆ ಕೊಡ್ತಿದ್ದಾರೆ. ಕೋರ್ಟ್ ನಲ್ಲೇ ಉತ್ತರ ಕೋಡೋಣಾ ಅಂತ ವಕೀಲರು ಹೇಳಿದ್ದಾರೆ. ಈ ವೇಳೆ ರೆಡ್ಡಿ, ಆಗಿದ್ದು ಆಗಿ ಹೋಯಿತು ಎಂದು ವಕೀಲರ ಮಾತಿಗೆ ತಲೆದೂಗಿದ್ದಾರೆ. ರೆಡ್ಡಿಯ ಜೊತೆಯಲ್ಲಿಯೇ ಐವರು ವಕೀಲರು ರಾತ್ರಿ ಕಳೆದಿದ್ದಾರೆ. ಒಟ್ಟಿನಲ್ಲಿ ಕಳೆದ ಒಂದು ವಾರದಿಂದ ಸಿಗದೆ ಸತಾಯಿಸಿದ ರೆಡ್ಡಿಗೆ ಸತತ 15 ಗಂಟೆಗಳಿಂದ ಸಿಸಿಬಿ ಗ್ರಿಲ್ ಮಾಡಿದೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews