ಬೀದರ್: ಸಂಗೀತದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೊಡುಗೆ ಅಪಾರವಾಗಿದ್ದು, ಲತಾ ಮಂಗೇಶ್ಕರ್ ಗೆ ರಾಜ್ಯದ ಅದರಲ್ಲೂ ಬೀದರ್ ನಂಟು ಇದೆ.
- Advertisement 2-
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಶಾಹಜಾನಿ ಔರಾದ್ ನಲ್ಲಿ ಲತಾ ಮಂಗೇಶ್ಕರ್ 1971 ರ ಡಿಸೆಂಬರ್ 10 ರಲ್ಲಿ ತಂದೆ ದೀನಾನಾಥ್ ಮಂಗೇಶ್ಕರ್ ಹೆಸರಿನಲ್ಲಿ ಕಾಲೇಜು ಸ್ಥಾಪನೆ ಮಾಡಿದ್ದಾರೆ. ಕಾಲೇಜು ಸ್ಥಾಪನೆ ದಿನ ಸೇರಿದಂತೆ ಎರಡು ಬಾರಿ ಲತಾ ಮಂಗೇಶ್ಕರ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಯಾಕೆ ಮದುವೆಯಾಗಲಿಲ್ಲ – ಪ್ರೀತಿ, ವಿವಾಹ, ಮಕ್ಕಳ ಬಗ್ಗೆ ಏನು ಹೇಳ್ತಿದ್ರು ಗೊತ್ತಾ?
- Advertisement 3-
- Advertisement 4-
ಈ ಕಾಲೇಜಿನ ಅಡಳಿತ ಮಂಡಳಿ ಲತಾ ಮಂಗೇಶ್ಕರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸೂಚಿಸಿದ್ದಾರೆ. ಇನ್ನೂ 1981 ರಲ್ಲಿ ಲತಾ ಮಂಗೇಶ್ಕರ್ ಹುಮ್ನಾಬಾದ್ ಹೊರ ವಲಯದ ಮಾಣಿಕ್ ಪ್ರಭು ಸಂಸ್ಥಾನಕ್ಕೂ ಭೇಟಿ ನೀಡಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ – ರಜೆ ಫೋಷಿಸಿದ ಮಹಾರಾಷ್ಟ್ರ ಸರ್ಕಾರ!
ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳಿನಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ, ಲತಾ ಮಂಗೇಶ್ಕರ್ ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಬೆಳಗ್ಗೆ 8.12ರ ಸುಮಾರಿಗೆ ಲತಾ ಸಾವನ್ನಪ್ಪಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಮುಂಬೈನ ನಿವಾಸಕ್ಕೆ ಲತಾ ಮಂಗೇಶ್ಕರ್ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಇದನ್ನೂ ಓದಿ: ನಾವು ಲತಾ ಮಂಗೇಶ್ಕರ್ ಅವರ ಸಾಂಗ್‍ಗಳನ್ನು ಕೇಳಿ ಬೆಳೆದಿದ್ದೇವೆ: ಶಿವರಾಜ್ ಕುಮಾರ್
ಸಂಜೆ 4 ಗಂಟೆವರೆಗೆ ಮನೆ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 4 ಗಂಟೆಗೆ ಶಿವಾಜಿ ಪಾರ್ಕ್‍ನತ್ತ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಈ ವೇಳೆ ಲತಾ ಅವರ ನೆಚ್ಚಿನ ಬಣ್ಣವಾದ ಬಿಳಿ ಬಣ್ಣದ ಹೂಗಳಿಂದಲೇ ಪಾರ್ಥಿವ ಶರೀರದ ವಾಹನವನ್ನು ಸಿಂಗರಿಸಲಾಗಿತ್ತು. ಶಿವಾಜಿ ಪಾರ್ಕ್‍ನಲ್ಲಿ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ ರಸ್ತೆಯ ಇಕ್ಕೆಲೆಗಳಲ್ಲಿ ನಿಂತು ಸಾವಿರಾರು ಅಭಿಮಾನಿಗಳು, ಜನರು ಅಂತಿಮ ದರ್ಶನ ಪಡೆದುಕೊಂಡರು. ಇದನ್ನೂ ಓದಿ: ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ
ಮುಂಬೈನ ಹೃದಯ ಭಾಗದಲ್ಲಿರುವ ಶಿವಾಜಿಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನೆರವೇರಿತು. ಶಿವಾಜಿ ಪಾರ್ಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ನಟ ಶಾರೂಖ್ ಖಾನ್ ಸೇರಿ ಹಲವು ಗಣ್ಯರು ಭಾವಪೂರ್ಣ ಬೀಳ್ಕೊಡುಗೆ ನೀಡಿದರು.
ಭಾರತ ರತ್ನ, ಭಾರತಾಂಬೆಯ ಹೆಮ್ಮೆಯ ಪುತ್ರಿಗೆ ಮಹಾರಾಷ್ಟ್ರ ಸರ್ಕಾರದ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ರಾಷ್ಟ್ರಧ್ವಜವನ್ನು ಲತಾ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಲತಾ ಮಂಗೇಶ್ಕರ್ ಕುಟುಂಬದ ವತಿಯಿಂದ ವೈಯಕ್ತಿಕ ವಿಧಿವಿಧಾನಗಳು ನಡೆದವು. ಲತಾ ಅವರ ಸಹೋದರನ ಮಗ ಎಲ್ಲಾ ಕ್ರಿಯಾಧಿಗಳನ್ನು ನೆರವೇರಿಸಿ, ಚಿತೆಗೆ ಅಗ್ನಿ ಸ್ಪರ್ಶಿಸಿದರು.